Planet Transits December 2022: ಕೆಲ ರಾಶಿಗಳ ಜನರಿಗೆ ಭಾರಿ ಧನಲಾಭವನ್ನು ನೀಡುತ್ತ ವರ್ಷ 2022 ಇತಿಹಾಸವಾಗಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಡಿಸೆಂಬರ್ 2022 ರಲ್ಲಿ ಒಟ್ಟು 6 ಬಾರಿ  ಗ್ರಹಗಳ ಗೋಚರ ನಡೆಯಲಿದೆ. ಇದರಲ್ಲಿ ಬುಧ ಗ್ರಹವು ಗರಿಷ್ಠ 3 ಬಾರಿ ಗೋಚರಿಸಲಿದ್ದು, ಶುಕ್ರ ಗ್ರಹವು 2 ಬಾರಿ ಮತ್ತು ಸೂರ್ಯ 1 ಬಾರಿ ಗೋಚರಿಸಲಿದೆ. ಗ್ರಹಗಳ ಈ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಜೀವನದ ಮೇಲೆ ದೊಡ್ಡ ಪ್ರಭಾವವನ್ನು ಬೀರಲಿದೆ. ಡಿಸೆಂಬರ್ ತಿಂಗಳಿನಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.  ಈ ಜನರು ಸಾಕಷ್ಟು ಹಣವನ್ನು ಮತ್ತು ಪ್ರಗತಿಯನ್ನು ಸಾಧಿಸಲಿದ್ದಾರೆ ಮತ್ತು ಇವರ ಹಾಳಾದ ಕೆಲಸ ಪುನಃ ಕೈಗೂಡಲಿದೆ.


COMMERCIAL BREAK
SCROLL TO CONTINUE READING

ಕನ್ಯಾ ರಾಶಿಯವರಿಗೆ ಬುಧ ಸಂಚಾರ ಲಾಭ ನೀಡಲಿದೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ ಗ್ರಹವು ಡಿಸೆಂಬರ್‌ನಲ್ಲಿ ಮೂರು ಬಾರಿ ಗೋಚರಿಸಲಿದ್ದು. ಮೊದಲ ಬಾರಿಗೆ, ಡಿಸೆಂಬರ್ 3, 2022 ರಂದು, ಬುಧವು ಧನು ರಾಶಿಯನ್ನು ಪ್ರವೇಶಿಸಲಿದೆ. ಬಳಿಕ  ಡಿಸೆಂಬರ್ 28, 2022 ರಂದು ಅದು ಧನು ರಾಶಿಯನ್ನು ತೊರೆದು ಡಿಸೆಂಬರ್ 28, 2022 ರಂದು ಮಕರ ರಾಶಿಗೆ ಸಾಗಲಿದೆ. ಇದರ ನಂತರ, ಡಿಸೆಂಬರ್ 31, 2022 ರಂದು, ಬುಧವು ಮತ್ತೆ ಹಿಮ್ಮುಖ ಮಾರ್ಗವಾಗಿ ಧನು ರಾಶಿಗೆ ಪ್ರವೇಶಿಸಲಿದೆ. ಈ ರೀತಿಯಾಗಿ, ಧನ, ಬುದ್ಧಿವಂತಿಕೆ ಮತ್ತು ವ್ಯಾಪಾರವನ್ನು ನೀಡುವ ಬುಧನ ಸ್ಥಾನದಲ್ಲಿ ನಡೆಯುವ 3 ಬದಲಾವಣೆಗಳು ಎಲ್ಲಾ ಜನರ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಆದರೆ ಕನ್ಯಾ ರಾಶಿಯ ಜನರು ಬುಧನ ಎಲ್ಲಾ ಮೂರು ಗೋಚರಗಳಿಂದ ಗರಿಷ್ಠ ಲಾಭವನ್ನು ಪಡೆಯಲಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಅಡೆತಡೆಯಿಲ್ಲದೆ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಹೊಸ ಮನೆ-ಕಾರು ಖರೀದಿಸುವ ಯೋಗವಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.


ಶುಕ್ರನ ಗೋಚರದಿಂದ ಮೀನ ರಾಶಿಯವರಿಗೆ ಭಾರಿ ಅದೃಷ್ಟ
ಡಿಸೆಂಬರ್ 5 ರಂದು ಶುಕ್ರ ಧನು ರಾಶಿಗೆ ಪ್ರವೇಶಿಸುತ್ತದೆ ಮತ್ತು ಡಿಸೆಂಬರ್ 29 ರಂದು ತನ್ನ ರಾಶಿಯನ್ನು ಬದಲಾಯಿಸಿದ ನಂತರ ಅದು ಮಕರ ರಾಶಿಯನ್ನು ಪ್ರವೇಶಿಸುತ್ತದೆ. ಡಿಸೆಂಬರ್ 2022 ರಲ್ಲಿ ಎರಡು ಬಾರಿ ಶುಕ್ರ ಸ್ಥಾನ ಪಲ್ಲಟ ಮೀನ ರಾಶಿಯವರಿಗೆ ಅತ್ಯಂತ ಮಂಗಳಕರವಾಗಿರುತ್ತದೆ. ಇದರಿಂದ ನೀವು ವೃತ್ತಿ ಜೀವನದಲ್ಲಿ ಯಾವುದೇ ಸಾಧನೆ ಮಾಡಬಹುದು. ಹೊಸ ಉದ್ಯೋಗ, ಬಡ್ತಿ, ಇನ್‌ಕ್ರಿಮೆಂಟ್ ಪಡೆಯುವ ಸಾಧ್ಯತೆಗಳಿವೆ. ವ್ಯಾಪಾರಸ್ಥರ ಲಾಭ ಹೆಚ್ಚಾಗಲಿದೆ.


ಇದನ್ನೂ ಓದಿ-Astro Tips: ಜಾತಕದಲ್ಲಿ ಈ ಗ್ರಹದ ದುರ್ಬಲ ಸ್ಥಾನ ಕೆಲಸ ಕಾರ್ಯಗಳಲ್ಲಿ ವಿಘ್ನಕ್ಕೆ ಕಾರಣ, ಈ ನಾಲ್ಕು ಉಪಾಯ ಅನುಸರಿಸಿ


ಸೂರ್ಯನ ಗೋಚರದಿಂದ ವೃಶ್ಚಿಕ ರಾಶಿಯವರಿಗೆ ಭಾರಿ ಲಾಭ
ಡಿಸೆಂಬರ್ 16 ರಂದು ಸೂರ್ಯ ಸಂಕ್ರಮಣ ನೆರವೇರಲಿದೆ. ಸೂರ್ಯನು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಂದಹಾಗೆ, 5 ರಾಶಿಗಳ ಜನರಿಗೆ ಸೂರ್ಯನ ಈ ಗೋಚರ ಮಂಗಳಕರವೆಂದು ಸಾಬೀತಾಗಲಿದೆ. ಆದರೆ ವೃಶ್ಚಿಕ ರಾಶಿಯ ಜನರು ಸೂರ್ಯನ ಈ ಸ್ಥಾನ ಪಲ್ಲಟದಿಂದ ಗರಿಷ್ಟ ಲಾಭವನ್ನು ಪಡೆಯಲಿದ್ದಾರೆ. ಈ ಅವಧಿಯಲ್ಲಿ ನಿಮ್ಮ  ಆತ್ಮವಿಶ್ವಾಸ ಮತ್ತು ಪ್ರಭಾವ ಹೆಚ್ಚಾಗಲಿದೆ. ಭಾರಿ ಘನತೆ ಮತ್ತು ಗೌರವ ಪ್ರಾಪ್ತಿಯಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.


ಇದನ್ನೂ ಓದಿ-Betel Nut Benefits: ಕಂಕಣ ಬಲ ಕೂಡಿ ಬರಲು, ವೃತ್ತಿಜೀವನದಲ್ಲಿನ ಯಶಸ್ಸಿಗಾಗಿ ಅಡಿಕೆಯ ಈ ಉಪಾಯಗಳನ್ನು ಮಾಡಿ ನೋಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.