Bruhaspati Gochar 2023: ಗ್ರಹಗಳ ನಡೆ ಓರ್ವ ವ್ಯಕ್ತಿಯ ಸಮಯವನ್ನು ನಿರ್ಧರಿಸುತ್ತವೆ. ಒಂದು ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಿದಾಗ ಅಥವಾ ತನ್ನ ನಡೆಯನ್ನು ಬದಲಾಯಿಸಿದಾಗ, ಅದು ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಈ ಚಲನೆಯು ಕೆಲವು ಕೆಲ ರಾಶಿಗಳ ಜನರ ಪಾಲಿಗೆ ತುಂಬಾ ಮಂಗಳಕರವಾಗಿದ್ದರೆ, ಕೆಲವರಿಗೆ ಇದು ಮಧ್ಯಮ ಅಥವಾ ಅಶುಭ ಸಾಬೀತಾಗುತ್ತದೆ. ಜ್ಯೋತಿಷ್ಯದಲ್ಲಿ, ಗುರುವನ್ನು ದೇವಗುರು  ಎಂದು ಕರೆಯಲಾಗುತ್ತದೆ. ಅತ್ಯಂತ ಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ದೇವಗುರು ಬೃಹಸ್ಪತಿ ಏಪ್ರಿಲ್ 1, 2023 ರಂದು ರಾತ್ರಿ 7.12 ಕ್ಕೆ ಮೀನ ರಾಶಿಯಲ್ಲಿ ಅಸ್ತಮಿಸಲಿದ್ದಾರೆ. ಇದಾದ ನಂತರ ಮೇ ಮೊದಲ ವಾರದಲ್ಲಿ ದೇವಗುರು ಮೇಷ ರಾಶಿಯಲ್ಲಿ ಉದಯಿಸಲಿದ್ದಾರೆ. ಗುರುಗ್ರಹದ ಸ್ಥಾನ ಪಲ್ಲಟದ ಪ್ರಭಾವ ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ ನಕಾರಾತ್ಮಕ ಪರಿಣಾಮವು ಕೆಲ ರಾಶಿಗಳ ಜನರ ಮೇಲೆ ಮೇಲೆ ಕಂಡುಬರುತ್ತದೆ. ಗುರುವು ಅಸ್ತಮಿಸಿದಾಗ, ಸಾಮಾನ್ಯವಾಗಿ ಶುಭ ಕಾರ್ಯಗಳನ್ನು ನಿಷೇಧಿಸಲಾಗುತ್ತದೆ. ಗುರುಗ್ರಹದ ಅಸ್ತಮಿಸುವುದರಿಂದ ಯಾವ ಸ್ಥಳೀಯರು ಎಚ್ಚರದಿಂದಿರಬೇಕು ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

1. ಮೇಷ ರಾಶಿ: ಮೇಷ ರಾಶಿಯ ಜನರು ಈ ಅವಧಿಯಲ್ಲಿ ತುಂಬಾ ಜಾಗರೂಕರಾಗಿರಬೇಕು. ಮೇಷ ರಾಶಿಯವರಿಗೆ ಒಂಬತ್ತು ಮತ್ತು ಹನ್ನೆರಡನೆಯ ಮನೆಯ ಅಧಿಪತಿ ಗುರು. ಕೆಲಸದ ಸ್ಥಳದಲ್ಲಿ ಕಠಿಣ ಪರಿಶ್ರಮದ ಹೊರತಾಗಿಯೂ, ನಿಮ್ಮ ಮತ್ತು ಅಧಿಕಾರಿಗಳ ನಡುವೆ ಕೆಲ ಭಿನ್ನಾಭಿಪ್ರಾಯಗಳು ತಲೆದೂರಬಹುದು. ಕೆಲ ಕೆಲಸಗಳಿಗಾಗಿ ನಿಮ್ಮನ್ನು ಬಲವಂತವಾಗಿ ವಿದೇಶಕ್ಕೆ ಕಳುಹಿಸುವ ಸಾಧ್ಯತೆ ಇದೆ. ಇದರಿಂದಾಗಿ ನೀವು ಕಿರಿಕಿರಿಯನ್ನು ಅನುಭವಿಸುವಿರಿ.

2. ವೃಷಭ ರಾಶಿ: ದೇವಗುರುವಿನ ಅಸ್ತದಿಂದ, ಕೆಲಸದ ಸ್ಥಳದಲ್ಲಿನ ಅತೃಪ್ತಿ ನಿಮ್ಮ ಉದ್ವೇಗವನ್ನು ಹೆಚ್ಚಿಸಬಹುದು. ಪ್ರಯತ್ನಗಳಲ್ಲಿಯೂ ಅಡೆತಡೆಗಳು ಎದುರಾಗುತ್ತವೆ. ಈ ರಾಶಿಯವರಿಗೆ ಗುರು ಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ.

3. ಮಿಥುನ ರಾಶಿ: ಗುರುಗ್ರಹದ ಅಸ್ತ ವ್ಯಾಪಾರದಲ್ಲಿ ಪಾರ್ಟ್ನರ್ಶಿಪ್ ಸಂಬಂಧದ ಮೇಲೆ ಪರಿಣಾಮ ಬೀರಬಹುದು, ಈ ಕಾರಣದಿಂದಾಗಿ ವ್ಯಾಪಾರದ ಮೇಲೆ ಪರಿಣಾಮ ಉಂಟಾಗಬಹುದು. ವೃತ್ತಿಪರವಾಗಿ ಈ ರಾಶಿಯ ಜನರು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಹೊಂದಬಹುದು.

4. ಕರ್ಕ ರಾಶಿ: ಕರ್ಕ ರಾಶಿಯವರು ಈ ಅವಧಿಯಲ್ಲಿ ಸಣ್ಣ ಕೆಲಸಗಳನ್ನೂ ಪೂರ್ಣಗೊಳಿಸಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಅಡೆತಡೆಗಳನ್ನು ಸಹ ಎದುರಿಸಬೇಕಾಗಬಹುದು. ಈ ರಾಶಿಯ ಆರನೇ ಮತ್ತು ಒಂಬತ್ತನೇ ಮನೆಯ ಅಧಿಪತಿ ಗುರು.

5. ಸಿಂಹ ರಾಶಿ: ಈ ಅವಧಿ ನಿಮ್ಮ ಇಮೇಜ್ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಇದರೊಂದಿಗೆ ಸ್ನೇಹಿತರು ಮತ್ತು ಆತ್ಮೀಯರೊಂದಿಗಿನ ಸಂಬಂಧವೂ ಹದಗೆಡಬಹುದು.

6. ಕನ್ಯಾ ರಾಶಿ: ಅಧಿಕಾರಿಗಳು ಕನ್ಯಾ ರಾಶಿಯವರ ಮೇಲೆ ಹೆಚ್ಚಿನ ಕೆಲಸದ ಒತ್ತಡವನ್ನು ಹೇರಬಹುದು. ಉದ್ಯೋಗದಲ್ಲಿ ಬದಲಾವಣೆ ಕೂಡ ಆಗಬಹುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ಮಾಡುತ್ತಿದ್ದರೆ, ಈ ಸಮಯದಲ್ಲಿ ನೀವು ನಷ್ಟವನ್ನು ಭರಿಸಬೇಕಾಗಬಹುದು.

7. ತುಲಾ ರಾಶಿ: ಈ ರಾಶಿಯವರಿಗೆ ಗುರು ಗ್ರಹ ಮೂರು ಮತ್ತು ಆರನೇ ಮನೆಯ ಅಧಿಪತಿ. ಕೆಲಸದ ಸ್ಥಳದಲ್ಲಿ ಕಾರ್ಯಗಳಲ್ಲಿ ನೆಮ್ಮದಿ ಇರುತ್ತದೆ. ಆದರೆ ಅಧಿಕಾರಿಗಳೊಂದಿಗಿನ ಸಂಬಂಧದಲ್ಲಿ ಕೆಲವು ಸಮಸ್ಯೆಗಳಿರಬಹುದು. ಈ ಕಾರಣದಿಂದ ನಿಮ್ಮ ಚಿಂತೆಗಳೂ ಹೆಚ್ಚಾಗುತ್ತವೆ. ತಮ್ಮ ಸ್ವಂತ ವ್ಯವಹಾರವನ್ನು ನಡೆಸುತ್ತಿರುವ ಜನರು ಈ ಅವಧಿಯಲ್ಲಿ ಲಾಭವನ್ನು ಪಡೆಯುತ್ತಾರೆ, ಆದರೆ ಅವರು ನಿರೀಕ್ಷೆಗಿಂತ ಕಡಿಮೆ ಲಾಭ ಪಡೆಯುವ ಸಾಧ್ಯತೆಯಿದೆ.

8. ವೃಶ್ಚಿಕ ರಾಶಿ: ಈ ರಾಶಿಯವರಿಗೆ ಗುರು ಗ್ರಹ ಎರಡನೇ ಮತ್ತು ಐದನೇ ಮನೆಯ ಅಧಿಪತಿ. ಈ ಅವಧಿಯಲ್ಲಿ ನೀವು ಹಣದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದಲ್ಲದೆ, ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ, ಸಹೋದ್ಯೋಗಿಗಳಿಂದ ಹೆಚ್ಚಿನ ಸಹಕಾರವನ್ನು ಪಡೆಯದಿರುವಂತಹ ಸಮಸ್ಯೆ ನಿಮಗೆ ಎದುರಾಗಬಹುದು.

9. ಧನು ರಾಶಿ: ಗುರುವಿನ ಅಸ್ತದಿಂದ ಧನು ರಾಶಿಯವರಿಗೆ ನಿಧಾನ ಗತಿಯಲ್ಲಿ ಫಲಿತಾಂಶ ಸಿಗಲಿದೆ. ಉದ್ಯೋಗ ನಷ್ಟದಂತಹ ಸಮಸ್ಯೆಗಳೂ ಎದುರಾಗಬಹುದು. ಕೆಲವು ಕಾರಣಗಳಿಗಾಗಿ, ಕೆಲಸದ ಸ್ಥಳದಲ್ಲಿ ನಿಮ್ಮ ಖ್ಯಾತಿಯು ಮೇಲೂ ಪರಿಣಾಮ ಉಂಟಾಗಬಹುದು.

10. ಮಕರ ರಾಶಿ: ಗುರುವಿನ ಅಸ್ತದಿಂದ ಹಿರಿಯರೊಂದಿಗಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸಬಹುದು. ನೀವು ಉದ್ಯೋಗದಲ್ಲಿ ವಿಧಿ ಇಲ್ಲದೆ ಸ್ವಲ್ಪ ಭರವಸೆಯೊಂದಿಗೆ ಕುಳಿತುಕೊಳ್ಳಬೇಕಾದ ಪ್ರಸಂಗ ಎದುರಾಗಬಹುದು.

11. ಕುಂಭ ರಾಶಿ: ಕುಂಭ ರಾಶಿಯವರಿಗೆ ಜೀವನದಲ್ಲಿ ಎಂದೂ ಯೋಚಿಸದಂತಹ ಘಟನೆಗಳು ಎದುರಾಗಬಹುದು. ಉದಾಹರಣೆಗೆ ಉದ್ಯೋಗ ಬದಲಾವಣೆ. ಜೀವನದಲ್ಲಿ ಹಠಾತ್ ಬದಲಾವಣೆಗಳು ಮತ್ತು ವೈಫಲ್ಯವನ್ನು ತಂದೊಡ್ಡಲಿದೆ.


ಇದನ್ನೂ ಓದಿ-ನಾಲ್ಕು ಶುಭ ಯೋಗಗಳಲ್ಲಿ ವಸಂತ ಪಂಚಮಿ ಆಚರಣೆ, ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿ ಈ ಪರ್ವ

12. ಮೀನ ರಾಶಿ: ಕೆಲಸದ ಹೊರೆ ಹೆಚ್ಚಾಗಲಿದೆ. ಇದರಿಂದಾಗಿ ಮಾನಸಿಕ ಒತ್ತಡ ಉಂಟಾಗಬಹುದು. ವ್ಯಾಪಾರ ಮಾಡುವ ಜನರು ನಷ್ಟವನ್ನು ಎದುರಿಸಬೇಕಾಗಬಹುದು. ಯಾವುದೇ ಹೊಸ ವ್ಯವಹಾರವನ್ನು ಪ್ರಾರಂಭಿಸದಿರುವುದು ಉತ್ತಮ.


ಇದನ್ನೂ ಓದಿ-ಈ ನಾಲ್ಕು ರಾಶಿಗಳ ಜನರ ಮೇಲೆ ಶನಿಯ ಸಾಡೆಸಾತಿ ಪ್ರಭಾವ ಶೂನ್ಯಕ್ಕೆ ಸಮಾನ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.