ನಾಲ್ಕು ಶುಭ ಯೋಗಗಳಲ್ಲಿ ವಸಂತ ಪಂಚಮಿ ಆಚರಣೆ, ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿ ಈ ಪರ್ವ

Vasanta Panchami 2023: ಈ ಬಾರಿ ಜನವರಿ 26 ರಂದು ನಾಲ್ಕು ಶುಭಯೋಗಗಳಲ್ಲಿ ವಸಂತ ಪಂಚಮಿಯ ಮಹಾಪರ್ವವನ್ನು ಆಚರಿಸಲಾಗುತ್ತಿದೆ. ಮಾಘ ಶುಕ್ಲ ಪಂಚಮಿಯ ತಿಥಿ 25 ರ ಸಾಯಂಕಾಲ ಆರಂಭಗೊಳ್ಳುತ್ತಿದೆ. ಹೀಗಾಗಿ ಉದಯ ತಿಥಿಗೆ ಅನುಗುಣವಾಗಿ ಜನವರಿ 26 ರಂದು ವಸಂತ ಪಂಚಮಿ ಆಚರಿಸಲಾವುದು.   

Written by - Nitin Tabib | Last Updated : Jan 24, 2023, 04:27 PM IST
  • ಈ ವರ್ಷ ರಾಜ ಪಂಚಕದಲ್ಲಿ ವಸಂತ ಪಂಚಮಿ ಹಬ್ಬ ಬಂದಿದೆ.
  • ರಾಜ ಪಂಚಕವು ಅಶುಭ ಪರಿಣಾಮವನ್ನು ಬೀರುವುದಿಲ್ಲ.
  • ಈ ಪಂಚಕದಲ್ಲಿ ನೀವು ಆಸ್ತಿ, ಹಣ ಅಥವಾ ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ಮೂಲಕ ಯಶಸ್ಸನ್ನು ಪಡೆಯಬಹುದು.
ನಾಲ್ಕು ಶುಭ ಯೋಗಗಳಲ್ಲಿ ವಸಂತ ಪಂಚಮಿ ಆಚರಣೆ, ವಿದ್ಯಾರ್ಥಿಗಳಿಗೆ ಅತ್ಯಂತ ಪ್ರಯೋಜನಕಾರಿ ಈ ಪರ್ವ title=
ನಾಲ್ಕು ಶುಭಯೋಗಗಳಲ್ಲಿ ವಸಂತ ಪಂಚಮಿ ಆಚರಣೆ

Vasanta Panchami 2023: ಈ ಬಾರಿ ಜನವರಿ 26 ರಂದು ನಾಲ್ಕು ಶುಭಯೋಗಗಳಲ್ಲಿ ವಸಂತ ಪಂಚಮಿಯ ಮಹಾಪರ್ವವನ್ನು ಆಚರಿಸಲಾಗುತ್ತಿದೆ. ಮಾಘ ಶುಕ್ಲ ಪಂಚಮಿಯ ತಿಥಿ 25 ರ ಸಾಯಂಕಾಲ ಆರಂಭಗೊಳ್ಳುತ್ತಿದೆ. ಹೀಗಾಗಿ ಉದಯ ತಿಥಿಗೆ ಅನುಗುಣವಾಗಿ ಜನವರಿ 26 ರಂದು ವಸಂತ ಪಂಚಮಿ ಆಚರಿಸಲಾವುದು.ಧಾರ್ಮಿಕ ದೃಷ್ಟಿಯಿಂದ ಈ ಉತ್ಸವ ವಿದ್ಯಾರ್ಥಿಗಳ ಪಾಲಿಗೆ ತುಂಬಾ ಲಾಭಕಾರಿಯಾಗಿದೆ. ವಸಂತ ಪಂಚಮಿಯ ದಿನದಿಂದ ವಸಂತ ಕಾಲ ಆರಂಭವಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ದಿನ ಸೃಷ್ಟಿಯಲ್ಲಿ ತಾಯಿ ಸರಸ್ವತಿ ಪ್ರಕಟಗೊಂಡಳು ಎಂದು ಭಾವಿಸಲಾಗುತ್ತದೆ. 

ಕಲೆ ಹಾಗೂ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ವಸಂತ ಪಂಚಮಿ ತುಂಬಾ ವಿಶೇಷವಾಗಿದೆ ಎನ್ನಲಾಗುತ್ತದೆ. ವಸಂತ ಪಂಚಮಿಯ ದಿನ ಹಳದಿ ಬಣ್ಣಕ್ಕೂ ಪ್ರಾಧಾನ್ಯತೆ ನೀಡಲಾಗುತ್ತದೆ. ವಿದ್ಯೆಯ ಆರಂಭ ಅಥವಾ ಯಾವುದೇ ಕೆಲಸ ವನ್ನು ಆರಂಭಿಸಲು ಈ ದಿನ ಅತ್ಯುತ್ತಮ ಎಂದು ಭಾವಿಸಲಾಗುತ್ತದೆ. ಈ ಬಾರಿ ನಾಲ್ಕು ಶುಭ ಯೋಗಗಳಲ್ಲಿ ವಸಂತ ಪಂಚಮಿ ಉತ್ಸವವನ್ನು ಆಚರಿಸಲಾಗುತ್ತಿದೆ. ಸರಸ್ವತಿ ವಂದನೆ ಹಾಗೂ ಪೂಜನೆಗೆ ಈಗಾಗಲೇ ಎಲ್ಲರೂ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಶಾಲಾ ಕಾಲೇಜುಗಳಲ್ಲಿ ಗೀತ, ಸಂಗೀತ, ನಾಟಕ, ಎಕಾಂಕಿ, ಚಿತ್ರಕಲೆ, ಪೇಂಟಿಂಗ್ ಇತ್ಯಾದಿ ಸ್ಪರ್ಧೆಗಳ ಆಯೋಜನೆಯನ್ನು ನಡೆಸಲಾಗುತ್ತದೆ. 

4 ಶುಭ ಯೋಗಗಳ ನಿರ್ಮಾಣ
ಜ್ಯೋತಿಷ್ಯ ಪಂಡಿತರ ಪ್ರಕಾರ, ಜನವರಿ 26 ರ ವಸಂತ ಪಂಚಮಿಯ ದಿನದಂದು ನಾಲ್ಕು ಶುಭ ಯೋಗಗಳಾದ ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ, ಶಿವಯೋಗ ಮತ್ತು ಸಿದ್ಧ ಯೋಗಗಳು ರೂಪುಗೊಂಡಿವೆ. ಜನವರಿ 23 ಸೋಮವಾರದಂದು ಪ್ರಾರಂಭವಾದ ಪಂಚಕವೂ ಇದೆ. ಈ ದಿನ ಶಿವನು ಕೈಲಾಸದಲ್ಲಿ ನೆಲೆಸುತ್ತಾನೆ ಎಂಬ ಪ್ರತೀತಿ ಕೂಡ ಇದೆ.
>> ಶಿವಯೋಗ: ಪ್ರಾತಃಕ್ಕಾಲದಿಂದ ಮಧ್ಯಾಹ್ನ 03:29 ರವರೆಗೆ
>> ಸಿದ್ಧ ಯೋಗ: ಜನವರಿ 27 ರಂದು ಮಧ್ಯಾಹ್ನ 03:29 ರಿಂದ 01:22 ರವರೆಗೆ
>> ಸರ್ವಾರ್ಥ ಸಿದ್ಧಿ ಯೋಗ: ಸಂಜೆ 06:57 ರಿಂದ ಮರುದಿನ 07:12 ರವರೆಗೆ
>> ರವಿಯೋಗ: ಸಂಜೆ 06:57 ರಿಂದ ಮರುದಿನ ಬೆಳಗ್ಗೆ 07:12 ರವರೆಗೆ

ವಸಂತ ಪಂಚಮಿಯಂದು ರಾಜ ಪಂಚಕ
ಈ ವರ್ಷ ರಾಜ ಪಂಚಕದಲ್ಲಿ ವಸಂತ ಪಂಚಮಿ ಹಬ್ಬ ಬಂದಿದೆ. ರಾಜ ಪಂಚಕವು ಅಶುಭ ಪರಿಣಾಮವನ್ನು ಬೀರುವುದಿಲ್ಲ. ಈ ಪಂಚಕದಲ್ಲಿ ನೀವು ಆಸ್ತಿ, ಹಣ ಅಥವಾ ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ಮೂಲಕ ಯಶಸ್ಸನ್ನು ಪಡೆಯಬಹುದು. ರಾಜ ಪಂಚಕದ ಅವಧಿಯಲ್ಲಿ ಪಟ್ಟಾಭಿಷೇಕವನ್ನು ನೆರವೇರಿಸಲಾಗುತ್ತದೆ. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ-ನೀವು ಮಲಗುವ ಶೈಲಿ ನಿಮ್ಮ ವ್ಯಕ್ತಿತ್ವದ ಗುಟ್ಟು ಬಹಿರಂಗಪಡಿಸುತ್ತದೆ... ಎಚ್ಚರ!

ವಸಂತ ಪಂಚಮಿಯ ದಿನ ಶಿವವಾಸ ಕೂಡ ಇದೆ
ವಸಂತ ಪಂಚಮಿಯ ದಿನವು ಅತ್ಯಂತ ಮಂಗಳಕರವಾಗಿದೆ. ಸರಸ್ವತಿ ಪೂಜೆಯ ದಿನದಂದು ಶಿವನು ಕೈಲಾಸಕ್ಕೆ ಬಂದು ನೆಲೆಸುವ ಕಾರಣ ಈ ದಿನ ಶಿವ ಭಕ್ತರಿಗೂ ಕೂಡ ಸಂತಸದ ದಿನ. ಈ ದಿನ ಬೆಳಗ್ಗೆ 10 ಗಂಟೆ 28 ನಿಮಿಷಗಳ ಕಾಲ ಕೈಲಾಸದಲ್ಲಿ ಶಿವನ ವಾಸ ಇರುತ್ತದೆ, ನಂತರ ಆತನ ವಾಸ ನಂದಿಯ ಮೇಲೆ ಇರುತ್ತದೆ. ಶಿವವಾಸದ ಕಾಲದಲ್ಲಿ ರುದ್ರಾಭಿಷೇಕವನ್ನು ಮಾಡಲಾಗುತ್ತದೆ. ವಸಂತ ಪಂಚಮಿಯಂದು ರುದ್ರಾಭಿಷೇಕ ಮಾಡಬಯಸುವವರಿಗೆ ಸಮಯ ಅತ್ಯಂತ ಮಂಗಳಕರವಾಗಿದೆ.

ಇದನ್ನೂ ಓದಿ-ದೇಹದ ಈ ಭಾಗಕ್ಕೆ ಆಲಿವ್ ಎಣ್ಣೆ ಹಚ್ಚಿ, ಹಲವು ಆರೋಗ್ಯಕರ ಲಾಭ ನಿಮ್ಮದಾಗಿಸಿಕೊಳ್ಳಿ

ವಸಂತ ಪಂಚಮಿಯ ಪೂಜೆಗೆ ಅತ್ಯಂತ ಮಂಗಳಕರ ಮುಹೂರ್ತ
ಜನವರಿ 26 ರಂದು ಸರಸ್ವತಿ ಪೂಜೆಯ ಮುಹೂರ್ತವು ಬೆಳಗ್ಗೆ 07:12 ರಿಂದ ಮಧ್ಯಾಹ್ನ 12:34 ರವರೆಗೆ ಇರುತ್ತದೆ. ಈ ಸಮಯದಲ್ಲಿ ನೀವು ಸರಸ್ವತಿ ದೇವಿಯನ್ನು ಪೂಜಿಸಬೇಕು. ಈ ಪೂಜೆ ನೆರವೇರಿಸಲು ತಾಯಿ ಸರಸ್ವತಿಗೆ ಹಳದಿ ಬಣ್ಣದ ಸೀರೆ ಅಥವಾ ವಸ್ತ್ರವನ್ನು ಅರ್ಪಿಸಬೇಕು. ಬಳಿಕ ಕುಂಕುಮ, ಚಂದನ, ಅರಿಶಿಣ, ಕೇಸರಿ, ಹಳದಿ ಅಥವಾ ಬಿಳಿ ಬಣ್ಣದ ಹೂವುಗಳು, ಹಳದಿ ಬಣ್ಣದ ಮಿಠಾಯಿ ಹಾಗೂ ಅಕ್ಷತೆಯನ್ನು ಅರ್ಪಿಸಬೇಕು. ಈಗ ಪೂಜೆಯ ಸ್ಥಾನದಲ್ಲಿ ವಾದ್ಯಗಳನ್ನು, ಪುಸ್ತಕ ಇತ್ಯಾದಿಗಳನ್ನಿಟ್ಟು ಅವುಗಳಿಗೆ ಪೂಜೆ ಸಲ್ಲಿಸಬೇಕು. ಈಗ ತಾಯಿ ಸರಸ್ವತಿಯ ವಂದನೆಯನ್ನು ಮಾಡಬೇಕು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News