ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜಾತಕದಲ್ಲಿ ಧನ ಯೋಗ ಇದೆಯೋ ಎನ್ನುವ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾನೆ.ಲಕ್ಷ್ಮಿ ದೇವಿಯ ಆಶೀರ್ವಾದವು ಜಾತಕದಲ್ಲಿ ಕಂಡು ಬಂದರೆ ವ್ಯಕ್ತಿ ಕೋಟ್ಯಾಧಿಪತಿಯಾಗುವುದನ್ನು ಯಾರೂ ತಡೆಯಲು ಸಾಧ್ಯವಾಗುವುದಿಲ್ಲ. ಗ್ರಹಗಳ ಸ್ಥಾನವನ್ನು ನೋಡುವ ಮೂಲಕ ಭವಿಷ್ಯದಲ್ಲಿ ಈ ಮಗು ತುಂಬಾ ಶ್ರೀಮಂತವಾಗಲಿದೆ ಎನ್ನುವುದು ತಿಳಿದರೆ  ಪೋಷಕರ ಅರ್ಧಕ್ಕಿಂತ ಹೆಚ್ಚು ಚಿಂತೆಗಳು ದೂರವಾಗುತ್ತವೆ.ಒಂದಕ್ಕಿಂತ ಹೆಚ್ಚು ಗ್ರಹಗಳ ಸಂಯೋಜನೆಯಿಂದ ಯೋಗವು ರೂಪುಗೊಳ್ಳುತ್ತದೆ. 


COMMERCIAL BREAK
SCROLL TO CONTINUE READING

ಮಹಾಭಾಗ್ಯ ಯೋಗ ಸಾಕು :
ಕಷ್ಟಪಟ್ಟು ದುಡಿದು ಹಣ ಗಳಿಸುವುದಕ್ಕೂ ಮಿತಿ ಇದೆ. ಶ್ರೀಮಂತರಾಗಲು ಶ್ರಮದ ಜೊತೆಗೆ ಅದೃಷ್ಟದ ಬಲವೂ ಬಹಳ ಮುಖ್ಯ. ಜಾತಕದಲ್ಲಿ ಅದೃಷ್ಟದ ಬೆಂಬಲವಿದ್ದರೆ ಕಣ್ಣು ಮಿಟುಕಿಸುವ ಒಳಗೆ ವ್ಯಕ್ತಿ ಸಿರಿವಂತನಾಗಿ ಬಿಡುತ್ತಾನೆ.ಮಹಾಭಾಗ್ಯ ಯೋಗ ಹುಡುಗರು ಮತ್ತು ಹುಡುಗಿಯರಿಬ್ಬರ ಜಾತಕದಲ್ಲಿ ವಿಭಿನ್ನವಾಗಿ ರೂಪುಗೊಳ್ಳುತ್ತದೆ ಎಂಬುದು ನೆನಪಿನಲ್ಲಿಡಬೇಕಾದ ವಿಷಯ.ನಾಲ್ಕು ಸ್ಥಿತಿಗಳು ಇದ್ದಾಗ ಮಾತ್ರ ಮಹಾಭಾಗ್ಯ ಯೋಗವು ರೂಪುಗೊಳ್ಳುತ್ತದೆ. 


ಇದನ್ನೂ ಓದಿ : ಗುರುವಿನಿಂದಾಗಿ ಈ ರಾಶಿಯವರಿಗೆ ಕುಬೇರ ರಾಜಯೋಗ : ಇನ್ನೊಂದು ವರ್ಷದವರೆಗೆ ಹರಿದು ಬರುವುದು ಸಂಪತ್ತಿನ ಸುಧೆ


ಗಂಡು ಮಗು -  ಮಗುವು ಹಗಲಿನಲ್ಲಿ ಹುಟ್ಟಬೇಕು.ಅಂದರೆ ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ. ಜನ್ಮ ಲಗ್ನವು ಮೇಷ, ಮಿಥುನ, ಸಿಂಹ, ತುಲಾ, ಧನು, ಕುಂಭ ಮುಂತಾದ ಬೆಸವಾಗಿರಬೇಕು. 


ಮೇಷ, ಮಿಥುನ, ಸಿಂಹ, ತುಲಾ, ಧನು, ಕುಂಭ ಮುಂತಾದ ಬೆಸ ರಾಶಿಯಲ್ಲಿ ಸೂರ್ಯನೂ ಇರಬೇಕು. 


ಹೆಣ್ಣು ಮಗು -  ಹೆಣ್ಣು ಮಗು ರಾತ್ರಿಯಲ್ಲಿ ಅಂದರೆ ಸೂರ್ಯಾಸ್ತ ಮತ್ತು ಸೂರ್ಯೋದಯದ ನಡುವೆ ಹುಟ್ಟಬೇಕು.  


ಜನನದ ಸಮಯದಲ್ಲಿ, ಲಗ್ನವು ವೃಷಭ, ಕರ್ಕ, ಕನ್ಯಾ, ವೃಶ್ಚಿಕ, ಮಕರ, ಮೀನಗಳಂತೆ ಸಮ ರಾಶಿಯಲ್ಲಿಯೂ ಇರಬೇಕು,


ವೃಷಭ, ಕರ್ಕ, ಕನ್ಯಾ, ವೃಶ್ಚಿಕ, ಮಕರ, ಮೀನ ಮುಂತಾದ ಸಮ ರಾಶಿಯಲ್ಲಿ ಸೂರ್ಯನೂ ಇರಬೇಕು. 


ಇದನ್ನೂ ಓದಿ : ಶೀಘ್ರದಲ್ಲೇ ಮುಖಾಮುಖಿಯಾಗಲಿದ್ದಾರೆ ಶನಿ-ಬುಧ: ವೃತ್ತಿ ಬದುಕಿನಲ್ಲಿ ಭಾರೀ ಜಯ ಸಾಧಿಸಲಿದ್ದಾರೆ ಈ ರಾಶಿಯ ಜನ


ಕೋಟ್ಯಾಧಿಪತಿಯಾಗುವುದು ಖಂಡಿತಾ :  
ಜಾತಕದಲ್ಲಿ ಎರಡನೇ ಮನೆ ಹಣ ಅಂದರೆ ಬ್ಯಾಂಕ್ ಮತ್ತು 11 ನೇ ಮನೆ ಲಾಭ ಅಂದರೆ ಆದಾಯ. ಈ ಎರಡು ಮನೆಗಳ ಅಧಿಪತಿ ಗ್ರಹವು ತನ್ನ ಸ್ವಂತ ಮನೆಯಲ್ಲಿದ್ದರೆ ಅದನ್ನು ಜ್ಯೋತಿಷ್ಯ ಭಾಷೆಯಲ್ಲಿ ಸ್ವಗ್ರಾಹಿ ಎಂದು ಕರೆಯಲಾಗುತ್ತದೆ. ಆಗ ಆ ವ್ಯಕ್ತಿ ಶ್ರೀಮಂತನಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ.


ಲಾಭದ ಮನೆಯ ಅಧಿಪತಿ ಖಜಾನೆಯ ಮನೆಗೆ ಹೋದರೆ ಮತ್ತು ಖಜಾನೆಯ ಮನೆಯ ಅಧಿಪತಿ ಲಾಭದ ಮನೆಗೆ ಹೋದರೆ ಪರಿಸ್ಥಿತಿ ತುಂಬಾ ಒಳ್ಳೆಯದು.  ಮಗುವಿನ ಜಾತಕದಲ್ಲಿ ಈ ಪರಿಸ್ಥಿತಿ ಇದ್ದರೆ, ಮಗು ಭವಿಷ್ಯದಲ್ಲಿ ಕೋಟ್ಯಾಧಿಪತಿಯಾಗುವುದು ಖಂಡಿತಾ. ಇದು ಬಾಲ್ಯದಲ್ಲಿಯೇ ಕಂಡುಕೊಳ್ಳಬಹುದಾದ ಸತ್ಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.