Shani dev and Shami Plant: ಈ ಬಾರಿಯ ಧನತ್ರಯೋದಶಿಯ ಹಾಗೂ ದೀಪಾವಳಿಯ ದಿನ ಗ್ರಹ-ನಕ್ಷತ್ರಗಳ ಅದ್ಭುತ ಸಂಯೋಜನೆ ನೆರವೇರುತ್ತಿದೆ. ಅಕ್ಟೋಬರ್ 22ರ ಸಂಜೆಯಿಂದ ಕಾರ್ತಿಕ ಮಾಸದ ತ್ರಯೋದಶಿ ತಿಥಿ ಆರಂಭಗೊಳ್ಳುತ್ತಿದೆ. ಇದು ಅಕ್ಟೋಬರ್ 23ರವರೆಗೆ ಇರಲಿದೆ. ಅದೇ ದಿನ ಶನಿ ತನ್ನ ಸ್ವರಾಶಿಯಾಗಿರುವ ಮಕರ ರಾಶಿಯಲ್ಲಿ ನೇರ ನಡೆಯನ್ನು ಅನುಸರಿಸಲಿದ್ದಾನೆ. ಶಮಿ ವೃಕ್ಷದ ಜೊತೆಗೆ ಶನಿಯ ವಿಶೇಷ ಸಂಬಂಧವಿದೆ. ಶಮಿ ಶನಿಗೆ ಇಷ್ಟವಾದ ಗಿಡ. ಇನ್ನೊಂದೆಡೆ  ಧನತ್ರಯೋದಶಿಯ ದಿನ ಧನ ಕುಬೇರನ ದಿನ. ಹೀಗಿರುವಾಗ ಧನತ್ರಯೋದಶಿ ದಿನ ಶಮಿ ವೃಕ್ಷವನ್ನು ನೆಡುವುದರಿಂದ ಶನಿ ದೇವ ಹಾಗೂ ಧನ ಕುಬೇರ ಇಬ್ಬರ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಶಮಿ ವೃಕ್ಷ ತಾಯಿ ಲಕ್ಷ್ಮಿಗೂ ಕೂಡ ಇಷ್ಟವಾಗುವ ವೃಕ್ಷ.


COMMERCIAL BREAK
SCROLL TO CONTINUE READING

ಶಮಿ ಗಿಡವನ್ನು ನೆಡಿ
ಸನಾತನ ಸಂಸ್ಕೃತಿಯಲ್ಲಿ, ಶಮಿ ವೃಕ್ಷಕ್ಕೆ ಪೂಜ್ಯನೀಯ ಮತ್ತು ಪವಾಡದ ಸಸ್ಯವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶಮಿ ಗಿಡವನ್ನು ಸಂಪತ್ತು ನೀಡುವ ಸಸ್ಯವೆಂದು ಪರಿಗಣಿಸಲಾಗಿದೆ. ಶಮಿ ವೃಕ್ಷಕ್ಕೆ ಪೂಜೆ ನಡೆಯುವ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಎನ್ನಲಾಗುತ್ತದೆ. ಅಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ಅಪಾರ ಕೃಪೆ ಇರುತ್ತದೆ. ಹಾಗೆಯೇ ಶನಿದೇವನೂ ಅಂತಹ ಮನೆಯ ಮೇಲೆ ತನ್ನ ಕೃಪೆ ತೋರುತ್ತಾನೆ. ವಿಶೇಷವಾಗಿ ಶನಿಯ ಸಾಡೇ ಸಾತಿ ಹಾಗೂ ಎರಡೂವರೆ ವರ್ಷಗಳ ಕಾಟದಿಂದ ಬಳುತ್ತಿರುವವರು ಶಮಿ ಗಿಡವನ್ನು ಪೂಜೆಸಬೇಕು. 


ಇದನ್ನೂ ಓದಿ-Dhanatrayodashi 2022: ರಾಶಿಗಳಿಗೆ ಅನುಗುಣವಾಗಿ ಏನನ್ನು ಖರೀದಿಸಬೇಕು/ಖರೀದಿಸಬಾರದು?


ಶಮಿಯನ್ನು ಪೂಜಿಸುವುದರಿಂದ ಆಗುವ ಪ್ರಯೋಜನಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನತ್ರಯೋದಶಿ ಅಥವಾ ದೀಪಾವಳಿಯಂದು ಮನೆಯಲ್ಲಿ ಶಮಿ ಗಿಡವನ್ನು ನೆಟ್ಟು ಅದಕ್ಕೆ ವಿಶೇಷ ಪೂಜೆ ಸಲ್ಲಿಸಿ. ಇದಾದ ಬಳಿಕ ನಿತ್ಯ ಬೆಳಗ್ಗೆ ಸ್ನಾನ ಮಾಡಿ ಶಮಿ ಗಿಡಕ್ಕೆ ಪವಿತ್ರ ಜಲವನ್ನು ಅರ್ಪಿಸಿ. ಹಾಗೆಯೇ ಸಾಯಂಕಾಲ ಶಮಿಯ ಕೆಳಗೆ ತುಪ್ಪದ ದೀಪವನ್ನು ಬೆಳಗಿ. ಇದರಿಂದ ಮನೆಯ ಋಣಾತ್ಮಕ ಶಕ್ತಿ ನಾಶವಾಗುತ್ತದೆ. ನೀವು ಬಹಳಷ್ಟು ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯುವಿರಿ. ಮನೆಯ ಸದಸ್ಯರು ವೇಗವಾಗಿ ಪ್ರಗತಿ ಹೊಂದುತ್ತಾರೆ. ಜೀವನದ ತೊಂದರೆಗಳು ದೂರವಾಗುತ್ತವೆ.


ಇದನ್ನೂ ಓದಿ-Diwali 2022: ಓರ್ವ ರಾಕ್ಷೆಸನ ಕಾರಣ ಭಾರತದ ಈ ರಾಜ್ಯದಲ್ಲಿ ದೀಪಾವಳಿ ಆಚರಿಸಲಾಗುವುದಿಲ್ಲವಂತೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.