Dhanatrayodashi 2022 Rituals: ಧನತ್ರಯೋದಶಿಯ ದಿನ ಚಿನ್ನ, ಬೆಳ್ಳಿ ಅಥವಾ ಪಾತ್ರೆ ಇತ್ಯಾದಿಗಳನ್ನು ಖರೀದಿಸುವ ಸಂಪ್ರದಾಯವಿದೆ, ಆದರೆ ಈ ದಿನ ಬರಿಗೈಯಲ್ಲಿ ಮನೆಗೆ ಪ್ರವೇಶಿಸಬಾರದು ಎಂಬುದು ನಿಮಗೆ ತಿಳಿದಿದೆಯೇ. ನೀವೂ ಕೂಡ ಧನತ್ರಯೋದಶಿಯ ದಿನ ಹೊಸ ಪಾತ್ರೆಗಳನ್ನು ಅಥವಾ ಚಿನ್ನ ಬೆಳ್ಳಿ ನಾಣ್ಯಗಳನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಅವುಗಳನ್ನು ತೆಗೆದುಕೊಂಡು, ನೀವು ಮನೆಗೆ ಪ್ರವೇಶಿಸುವಾಗ, ಮೂರು ವಸ್ತುಗಳಲ್ಲಿ ಒಂದನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಖಾಲಿ ಪಾತ್ರೆಗಳು, ನಾಣ್ಯಗಳೊಂದಿಗೆ ಮನೆಗೆ ಪ್ರವೇಶಿಸುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ಗೃಹಪ್ರವೇಶದ ಸಮಯದಲ್ಲಿ ಯಾವ ಮೂರು ವಸ್ತುಗಳನ್ನು ಹೊಂದಿರಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಪಾತ್ರೆಯಲ್ಲಿ ಈ ಮೂರು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಹಾಕಿ
ನೀವು ಪಾತ್ರೆಗಳನ್ನು ಖರೀದಿಸುತ್ತಿದ್ದರೆ, ಧನತ್ರಯೋದಶಿಯ ದಿನ ಒಂದಲ್ಲ, ಎರಡು ಪಾತ್ರೆಗಳನ್ನು ಖರೀದಿಸಬೇಕು ಮತ್ತು ಎರಡನ್ನೂ ನೀರು, ಸಿಹಿತಿಂಡಿಗಳು ಅಥವಾ ಧಾನ್ಯದಿಂದ ತುಂಬಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಒಂದು ಪಾತ್ರೆಯನ್ನು ಧನತ್ರಯೋದಶಿಗಾಗಿ ಖರೀದಿಸಲಾಗುತ್ತದೆ ಮತ್ತು ಮತ್ತೊಂದನ್ನು ದೀಪಾವಳಿಯಂದು ಲಕ್ಷ್ಮಿ-ಗಣೇಶ ಪೂಜೆಗೆ ಖರೀದಿಸಬೇಕು. ಇವುಗಳಲ್ಲಿ ಯಾವುದನ್ನೂ ಅದರಲ್ಲಿ ಹಾಕಲು ನಿಮ್ಮಿಂದ ಸಾಧ್ಯವಾಗದಿದ್ದರೆ, ಅದರಲ್ಲಿ ನೀವು ತುಳಸಿ ದಳವನ್ನು ಹಾಕಿ ಕೂಡ ಮನೆಯನ್ನು ಪ್ರವೇಶಿಸಬಹುದು.


ಚಿನ್ನ ಮತ್ತು ಬೆಳ್ಳಿಯೊಂದಿಗೆ ಮನೆ ಪ್ರವೇಶಿಸುವಾಗ ಈ ಸಂಗತಿಗಳನ್ನು ಅವುಗಳ ಜೊತೆಗೆ ಇರಿಸಿ
ನೀವು ಧನತ್ರಯೋದಶಿಯ ದಿನ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಿದ್ದರೆ, ಮನೆಗೆ ಪ್ರವೇಶಿಸುವಾಗ ನಿಮ್ಮೊಂದಿಗೆ ಸಿಹಿತಿಂಡಿಯನ್ನು ನೀವು ಹೊಂದಿರಬೇಕು. ನೀವು ಬಯಸಿದರೆ ಸಕ್ಕರೆ, ಬೆಲ್ಲ ಅಥವಾ ಸಿಹಿತಿಂಡಿಗಳನ್ನು ಇಟ್ಟುಕೊಳ್ಳಬಹುದು. ಅದು ಸಾಧ್ಯವಾಗದಿದ್ದರೆ ತುಳಸಿ ಎಲೆಗಳನ್ನು ತೆಗೆದುಕೊಂಡು ಮನೆಗೆ ಪ್ರವೇಶಿಸಿ.


7 ಧಾನ್ಯಗಳು ತುಂಬಾ ಮಂಗಳಕರ
ಧನತ್ರಯೋದಶಿಯ ದಿನ, ಶಾಪಿಂಗ್ ಮುಗಿಸಿ ಮನೆಗೆ ಬರುವಾಗ ಏಳು ಬಗೆಯ ಧಾನ್ಯಗಳನ್ನು ನಿಮ್ಮೊಂದಿಗೆ ತಂದರೆ, ನಿಮ್ಮ ಮನೆಯಲ್ಲಿ ಎಂದಿಗೂ ಆಹಾರ, ಸಂಪತ್ತು ಮತ್ತು ಅದೃಷ್ಟದ ಕೊರತೆ ಇರುವುದಿಲ್ಲ. ಈ ಏಳು ಧಾನ್ಯಗಳಲ್ಲಿ ನೀವು ಬಾರ್ಲಿ, ಬಿಳಿ ಎಳ್ಳು, ಭತ್ತ, ಗೋಧಿ, ಕರಿಬೇವು, ಹೆಸರು ಬೇಳೆ ಅಥವಾ ಉದ್ದಿನಬೇಳೆ, ಬೇಳೆ ಮತ್ತು ಅಕ್ಕಿಯನ್ನು ಸೇರಿಸಬೇಕು.


ಇದನ್ನೂ ಓದಿ-Dhanatrayodashi Old Broom Remedies: ಹಳೆ ಪೊರಕೆಯು ಅದೃಷ್ಟದ ಬಾಗಿಲು ತೆರೆಯುತ್ತದೆ, ಧನತ್ರಯೋದಶಿ ದಿನ ಚಿಕ್ಕ ಉಪಾಯ ಅನುಸರಿಸಿ


ಧನತ್ರಯೋದಶಿಯ ದಿನ ಯಾವ ಪಾತ್ರೆಗಳನ್ನು ಖರೀದಿಸಬಾರದು?
ಧನತ್ರಯೋದಶಿಯ ದಿನ ಕಬ್ಬಿಣ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಬದಲಾಗಿ, ನೀವು ಹಿತ್ತಾಳೆ ಅಥವಾ ಯಾವುದೇ ಶುದ್ಧ ಲೋಹದ ಪಾತ್ರೆಗಳನ್ನು ಖರೀದಿಸಬೇಕು. ಕಬ್ಬಿಣ ಮತ್ತು ಇಂಗಾಲದ ಮಿಶ್ರಣದಿಂದ ಉಕ್ಕನ್ನು ತಯಾರಿಸಲಾಗುತ್ತದೆ. ಆದ್ದರಿಂದ ಇದು ಅಶುದ್ಧ ಲೋಹವಾಗಿದೆ, ಹೀಗಾಗಿ ಅವುಗಳನ್ನು ಮನೆಗೆ ತರುವುದನ್ನು ತಪ್ಪಿಸಬೇಕು.


ಇದನ್ನೂ ಓದಿ-ದೀಪಾವಳಿ ರಾಶಿ ಫಲ : ಮುಂದಿನ ದೀಪಾವಳಿಯವರೆಗೆ ಈ ರಾಶಿಯವರ ಕೈ ಹಿಡಿಯಲಿದ್ದಾಳೆ ಅದೃಷ್ಟ ಲಕ್ಷ್ಮೀ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.