ಬೆಳಕಿನ ಹಬ್ಬದಂದು ಗ್ರಹಣದ ಕರಿಛಾಯೆ .! ಈ ದಿನ ಮಾಡಬೇಕು ದೀಪಾವಳಿ ಲಕ್ಷ್ಮೀ ಪೂಜೆ.!

  ಈ ಬಾರಿಯ ನರಕ ಚತುರ್ದಶಿಯ ಮಾರನೇ ದಿನ ಸೂರ್ಯಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಪೂಜೆ, ಅಂಗಡಿ ಪೂಜೆ ಗೋಪೂಜೆ ಮಾಡುವ ಮುಹೂರ್ತದಲ್ಲಿ ಕೂಡಾ ಬದಲಾವಣೆಯಾಗಲಿದೆ.

Written by - Ranjitha R K | Last Updated : Oct 21, 2022, 03:13 PM IST
  • ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ.
  • ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ.
  • ದೀಪಾವಳಿ ಹಬ್ಬಕ್ಕೆ ಹಬ್ಬಕ್ಕೆ ಗ್ರಹಣದ ಕಾರ್ಮೋಡ
 ಬೆಳಕಿನ ಹಬ್ಬದಂದು ಗ್ರಹಣದ ಕರಿಛಾಯೆ .! ಈ ದಿನ ಮಾಡಬೇಕು ದೀಪಾವಳಿ ಲಕ್ಷ್ಮೀ ಪೂಜೆ.!  title=
Deepavali 2022

ಬೆಂಗಳೂರು : ಸನಾತನ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಹಬ್ಬವನ್ನು ಅತ್ಯಂತ ಉತ್ಸಾಹ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಇದಕ್ಕೂ ಮುನ್ನ ಧನ್ತೇರಸ್ ಮತ್ತು ನರಕ ಚತುರ್ದಶಿ ಹಬ್ಬ ಬರುತ್ತದೆ.  ನಂತರ ಲಕ್ಷ್ಮೀ ಪೂಜೆ, ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. 

ಹಬ್ಬಕ್ಕೆ ಗ್ರಹಣದ ಕಾರ್ಮೋಡ  :
ಈ ಬಾರಿಯ ನರಕ ಚತುರ್ದಶಿಯ ಮಾರನೇ ದಿನ ಸೂರ್ಯಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಪೂಜೆ, ಅಂಗಡಿ ಪೂಜೆ ಗೋಪೂಜೆ ಮಾಡುವ ಮುಹೂರ್ತದಲ್ಲಿ ಕೂಡಾ ಬದಲಾವಣೆಯಾಗಲಿದೆ. ಸೂರ್ಯಗ್ರಹಣ ಇರುವ ಹಿನ್ನೆಲೆಯಲ್ಲಿ ಹಬ್ಬದ ಪೂಜೆಯ ಬಗ್ಗೆ ಜನರಲ್ಲಿ ಗೊಂದಲ ಮೂಡಿದೆ. 

ಇದನ್ನೂ ಓದಿ : Shani Margi 2022: ಶನಿಯ ಚಲನೆಯಲ್ಲಿ ಬದಲಾವಣೆ, ಈ ರಾಶಿಯವರ ಮೇಲೆ ಪರಿಣಾಮ!

ಧನ್ತೇರಸ್ : 
ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಧನ್ತೇರಸ್ ಆಚರಿಸಲಾಗುತ್ತದೆ. ಈ ಬಾರಿ ಈ  ತಿಥಿ ಅಕ್ಟೋಬರ್ 22 ಮತ್ತು 23 ಎರಡು ದಿನಗಳಲ್ಲಿ ಬೀಳುತ್ತಿದೆ. ಜ್ಯೋತಿಷಿಗಳ ಪ್ರಕಾರ, ಅಕ್ಟೋಬರ್ 22 ರಂದು ಧನ್ತೇರಸ್ ಹಬ್ಬವನ್ನು ಆಚರಿಸುವುದು ಹೆಚ್ಚು ಮಂಗಳಕರವಾಗಿರುತ್ತದೆ.

ನರಕ ಚತುರ್ದಶಿ :
ನರಕ ಚತುರ್ದಶಿಯನ್ನು ದೀಪಾವಳಿಗೂ ಮುನ್ನ ಅಂದರೆ  ಧನ್ತೇರಸ್ ಮರುದಿನ ಆಚರಿಸಲಾಗುತ್ತದೆ. ಈ ಬಾರಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕವು ಅಕ್ಟೋಬರ್ 23 ರಂದು ಸಂಜೆ 6.04 ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 24 ರ ಸಂಜೆ 5:28 ರವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನರಕ ಚತುರ್ದಶಿಯನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ.

ಇದನ್ನೂ ಓದಿ : ಶನಿ ದೋಷ ಪರಿಹಾರಕ್ಕಾಗಿ ನೀಲ ಮಣಿಯ ಬದಲಿಗೆ ಈ ಮರದ ಬೇರನ್ನು ತೋಳಿಗೆ ಕಟ್ಟಿಕೊಂಡರೂ ಸಿಗುವುದು ಪರಿಹಾರ .!

ಲಕ್ಷ್ಮೀ ಪೂಜೆ :
ಲಕ್ಷ್ಮೀ ಪೂಜೆ, ಗೋವರ್ಧನ ಪೂಜೆಯನ್ನು ಪ್ರತಿ ವರ್ಷನರಕ ಚತಿರ್ದಶಿಯ  ಮರುದಿನ ಆಚರಿಸಲಾಗುತ್ತದೆ. ಆದರೆ, ಈ ಬಾರಿ ಸೂರ್ಯಗ್ರಹಣದಿಂದಾಗಿ ಅದರಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ನರಕ ಚತುರ್ದಶಿಯ ಮಾರನೇ ದಿನ  ಅಂದರೆ ಅಕ್ಟೋಬರ್ 25 ರಂದು ಸೂರ್ಯಗ್ರಹಣ ಇರುತ್ತದೆ.  ಸೂರ್ಯಗ್ರಹಣದಂದು ಪೂಜೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ  ಲಕ್ಷ್ಮೀ ಪೂಜೆಯನ್ನು  ಅಕ್ಟೋಬರ್ 25ರ ಬದಲಾಗಿ ಅಕ್ಟೋಬರ್ 26ರಂದು ಆಚರಿಸಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News