ನವದೆಹಲಿ : ಧನತ್ರಯೋದಶಿಗೆ ಹೊಸ ವಸ್ತುಗಳನ್ನು ಖರೀದಿಸುವುದು ಅತ್ಯಂತ ಶುಭಾವಾಗಿರುತ್ತದೆ. ಈ ದಿನ ಮನೆಯಲ್ಲಿ ಹೊಸ ಪೊರಕೆ (new broom) ಖರೀದಿಸಿ ತರಬೇಕು ಎಂಬ ನಂಬಿಕೆಯೂ ಇದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ ಎನ್ನಲಾಗಿದೆ. ಅಲ್ಲದೆ, ಆಕೆಯ ಅನುಗ್ರಹ ಸದಾ ನಿಮ್ಮ ಮೇಲಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಹೊಸ ಪೊರಕೆಯನ್ನು ಖರೀದಿಸಿದ ನಂತರ, ಕೆಲವು ವಿಷಯಗಳನ್ನು ನೆನೆಪಿನಲ್ಲಿಡಬೇಕು. 


COMMERCIAL BREAK
SCROLL TO CONTINUE READING

ನಕಾರಾತ್ಮಕ ಶಕ್ತಿಗಳನ್ನು ತೆಗೆದುಹಾಕಲಾಗುತ್ತದೆ :
ಪೊರಕೆಯನ್ನು ಲಕ್ಷ್ಮೀ ದೇವಿಯ (Godess Lakshmi) ಸಂಕೇತವೆಂದು ಪರಿಗಣಿಸಲಾಗುತ್ತದೆ. ಧನ್ತೇರಸ್ ದಿನದಂದು ಪೊರಕೆಯನ್ನು ಖರೀದಿಸಿದರೆ, ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಎಂದು ನಂಬಲಾಗಿದೆ. ಹಣಕಾಸಿನ ಅಡಚಣೆಗಳಿಂದ ತೊಂದರೆಗೊಳಗಾಗಿದ್ದರೆ, ಈ ದಿನ ಪೊರಕೆ ಖರೀದಿಸುವುದು ಒಳ್ಳೆಯದು. ಇದು ನಕಾರಾತ್ಮಕ ಶಕ್ತಿಗಳನ್ನು (Negeive energy) ತೊಡೆದುಹಾಕುತ್ತದೆ ಮನೆಯಲ್ಲಿ ಧನಾತ್ಮಕತೆ ನೆಲೆಯಾಗುತ್ತದೆ. 


ಇದನ್ನೂ ಓದಿ : ನರಕ ಚತುರ್ದಶಿ ದಿನ ಮುಂಜಾನೆ ಸ್ನಾನ ಮಾಡುವುದರ ಹಿಂದಿದೆ ಈ ಕಾರಣ


ಹಳೆಯ ಪೊರಕೆ ಬಳಸಬೇಡಿ :
ಧನ್ತೇರಸ್ ನಂತರ ಹಳೆಯ ಪೊರಕೆಯನ್ನು ಬಳಸಬೇಡಿ. ಸಾಧ್ಯವಾದರೆ, ಧನ್ತೇರಸ್ ಮಧ್ಯರಾತ್ರಿಯೇ ಹಳೆಯ ಪೊರಕೆಯನ್ನು ಮನೆಯಿಂದ ಹೊರ ಹಾಕುವುದು ಒಳ್ಳೆಯದು. 


ಬಿಳಿ ದಾರವನ್ನು ಕಟ್ಟಿಕೊಳ್ಳಿ :
ಹೊಸ ಪೊರಕೆಗೆ (new broom) ಬಿಳಿ ಬಣ್ಣದ ದಾರವನ್ನು ಕಟ್ಟಿಕೊಳ್ಳಿ. ಹೀಗೆ ಮಾಡಿದರೆ ಲಕ್ಷ್ಮಿಯ (godess lakhmi) ಕೃಪೆ ಸದಾ ಉಳಿಯುತ್ತದೆ. ಮತ್ತು  ಆರ್ಥಿಕ ಸ್ಥಿತಿ ಕೂಡಾ ಉತ್ತಮವಾಗಿ ಉಳಿಯುತ್ತದೆ. ದೀಪಾವಳಿಯ ದಿನದಂದು ದೇವಾಲಯಕ್ಕೆ ಪೊರಕೆಯನ್ನು ದಾನ ಮಾಡಬಹುದು. ಹಾಗೆ ಮಾಡುವುದು ಕೂಡಾ ಶುಭವಾಗಿರುತ್ತದೆ. 


ಪೊರಕೆಯನ್ನು ಕಾಲಿನಿಂದ ತುಳಿಯಬೇಡಿ : 
ಪೊರಕೆಯನ್ನು ನಿಂತ ಭಂಗಿಯಲ್ಲಿ ಯಾವತ್ತು ಇರಿಸಬಾರದು.  ಪೊರಕೆಯನ್ನು ಯಾವಾಗಲೂ ನೆಲದ ಮೇಲೆ ಮಲಗಿಸಿಡಬೇಕು. ಪೊರಕೆಯ ಮೇಲೆ ಕಾಲಿಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ.  ಪೊರಕೆಯನ್ನು ಯಾವಾಗಲೂ ಮನೆಯ ಮೂಲೆಯಲ್ಲಿ ಮರೆಮಾಡಿ ಇಡಬೇಕು.


ಇದನ್ನೂ ಓದಿ :  Narak Chaturdashi 2021: ಇಂದು ರಾತ್ರಿ 14 ದೀಪಗಳನ್ನು ಬೆಳಗಿಸುವುದರ ಹಿಂದಿನ ಮಹತ್ವವಿದು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ