ನವದೆಹಲಿ : ಧಾರ್ಮಿಕ ಗ್ರಂಥಗಳ ಪ್ರಕಾರ, ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನಾಂಕದಂದು ಧಂತೇರಸ್ ಹಬ್ಬವನ್ನು (Dhanteras 2021) ಆಚರಿಸಲಾಗುತ್ತದೆ. ಯಾವುದೇ ರೀತಿಯ ಖರೀದಿಗೆ ಈ ದಿನ ಅತ್ಯಂತ ಶುಭ ಎಂದು ಹೇಳಲಾಗುತ್ತದೆ. ಈ ದಿನ, ಸಂಪತ್ತಿನ ದೇವರುಗಳಾದ ಕುಬೇರ ಮತ್ತು ಧನ್ವಂತರಿಯನ್ನು ವಿಧಿವತ್ತಾಗಿ ಪೂಜಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಧಂತೇರಾಸ್ ದಿನ (Dhanteras 2021) ಕೆಲವು ವಿಶೇಷ ಕ್ರಮಗಳನ್ನು ಅನುಸರಿಸುವುದರಿಂದ ಆ ಸಮಸ್ಯೆಗಳನ್ನು ತೊಡೆದು ಹಾಕಬಹುದು ಎಂದು ಜ್ಯೋತಿಷ್ಯದಲ್ಲಿ (astrology) ಹೇಳಲಾಗಿದೆ. ಈ ಕ್ರಮಗಳನ್ನು ಅನುಸರಿಸುವುದರಿಂದ , ಕುಟುಂಬದಲ್ಲಿ ಸಂತೋಷ ಸಮೃದ್ದಿ ತುಂಬಿರುತ್ತದೆ ಮತ್ತು ಎಲ್ಲಾ ದುಃಖಗಳು ದೂರವಾಗುತ್ತವೆ. 


ಇದನ್ನೂ ಓದಿ : Tulasi Puja: ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ನಿವಾರಿಸಲು ತುಳಸಿಯನ್ನು ಈ ರೀತಿ ಪೂಜಿಸಿ


ಕೊತ್ತಂಬರಿ ಖರೀದಿಸಿ :
ಧಂತೇರಾಸ್ ನಲ್ಲಿ ಹಳದಿ ಲೋಹ ಅಂದರೆ ಚಿನ್ನ ಅಥವಾ ಹಿತ್ತಾಳೆಯನ್ನು ಖರೀದಿಸುವುದು ವಾಡಿಕೆ. ಈ ಲೋಹಗಳನ್ನು ಖರೀದಿಸಲು ಸಾಧ್ಯವಾಗದಿದ್ದರೆ, ಕೊತ್ತಂಬರಿ ಸೊಪ್ಪು (Coriander) ಮತ್ತು ಹಳದಿ ಚಿಪ್ಪುಗಳನ್ನು ಖಂಡಿತವಾಗಿಯೂ ಖರೀದಿಸಿ. ಧಂತೇರಸ್ ದಿನದಂದು ಕೊತ್ತಂಬರಿ ಸೊಪ್ಪನ್ನು ಖರೀದಿಸಿದರೆ ಮನೆಯಲ್ಲಿ ಲಕ್ಷ್ಮೀ (Godess Lakshmi) ನೆಲೆಸುತ್ತಾಳೆ ಎನ್ನುವುದು ನಂಬಿಕೆ.  ಈ ದಿನ ಕೊತ್ತಂಬರಿ  ಸೊಪ್ಪು ಖರೀದಿಸುವುದರಿಂದ ಮನೆಯಲ್ಲಿನ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ. 


ಪ್ರಾಣಿಗಳನ್ನು ಪೂಜಿಸಿ :
ಗೋವನ್ನು ಭಾರತೀಯ ಸಂಸ್ಕೃತಿಯ ಮೂಲ ಸಂಕೇತವೆಂದು ಕರೆಯಲಾಗುತ್ತದೆ. 2021 ರ ಧಂತೇರಾಸ್ ದಿನದಂದು ಜನರು  ಹಸುವನ್ನು ಪೂಜಿಸುತ್ತಾರೆ. ಗೋವನ್ನು ಲಕ್ಷ್ಮಿಯ ಸಂಕೇತ ಎಂದು ಕೂಡಾ ನಂಬಲಾಗಿದೆ. ಧಂತೇರಾಸ್‌ ದಿನದಂದು ಹಸುವನ್ನು ಪೂಜಿಸುವುದರಿಂದ ಕುಟುಂಬದಲ್ಲಿನ ದುಃಖಗಳು ನೋವುಗಳು ದೂರವಾಗುತ್ತವೆ. 


ಅರಿಶಿನವನ್ನು ದಾನ ಮಾಡಿ :
ಅರಿಶಿನ (Turmeric) ಒಂದು ಅತ್ಯಂತ ಪರಿಣಾಮಕಾರಿ ಔಷಧವಾಗಿದೆ. ಧಂತೇರಾಸ್ ದಿನದಂದು ಅರಿಶಿನವನ್ನು ಖರೀದಿಸಿ ತನ್ನಿ. ನಂತರ, ಅದನ್ನು ಹೊಲಿಯದ ಬಟ್ಟೆಯಲ್ಲಿ ಇಟ್ಟು ಆನ್ನು ದೇವರ ಮನೆಯಲ್ಲಿ ಇಡಿ. ನಂತರ ಆ ಅರಿಶಿನವನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು (Negetive energy) ಮನೆಯಿಂದ ದೂರವಾಗುತ್ತವೆ ಮತ್ತು ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ. 


ಇದನ್ನೂ ಓದಿ : Garuda Purana: ಎಚ್ಚರ! ಈ ಮೂರು ಕೆಟ್ಟ ಅಭ್ಯಾಸಗಳು ನಿಮ್ಮ ಕುಟುಂಬದ ಸುಖ-ಶಾಂತಿಯನ್ನು ಕಸಿದುಕೊಳ್ಳುತ್ತವೆ


ಪಂಚ ದೇವತೆಗಳನ್ನು ಪೂಜಿಸಿ :
ಧಂತೇರಾಸ್ ದಿನದಂದು ಲಕ್ಷ್ಮೀ,  ಗಣೇಶ (Lord Ganesha), ಕುಬೇರ, ಧನ್ವಂತರಿ ಮತ್ತು ಯಮರಾಜನನ್ನು ಪೂಜಿಸಿ. ಈ ಐದು ದೇವತೆಗಳನ್ನು ಪೂಜಿಸಿದರೆ ಮನೆಯಲ್ಲಿನ ದುಷ್ಟ ಶಕ್ತಿಗಳು  ನಾಶವಾಗುತ್ತವೆ. ಈ ಕಾರಣದಿಂದಾಗಿ, ಮನೆಯಲ್ಲಿ ಸಂಪತ್ತು ಹೆಚ್ಚುತ್ತಾ ಹೋಗುತ್ತದೆ. 


ಧಂತೇರಾಸ್  ದಿನ ದೀಪ ದಾನ ಮಾಡಿ : 
ದೀಪವನ್ನು ದಾನ ಮಾಡುವುದನ್ನು ಭಾರತೀಯ ಸಂಸ್ಕೃತಿಯಲ್ಲಿ ಯಾವಾಗಲೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧಂತೇರಾಸ್ 2021 ರಲ್ಲಿ ದೀಪ ದಾನಕ್ಕೆ ವಿಶೇಷ ಮಹತ್ವವಿದೆ. ಹೀಗೆ ಮಾಡುವುದರಿಂದ ಯಮರಾಜನು ಸಂತುಷ್ಟನಾಗುತ್ತಾನೆ ಮತ್ತು ಕುಟುಂಬದಲ್ಲಿ ಅಕಾಲಿಕ ಮರಣವನ್ನು ತಪ್ಪಿಸಬಹುದು.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ