ಅತ್ಯಂತ ಸ್ವಾರ್ಥಿಗಳಂತೆ ಈ ಮೂರು ರಾಶಿಯವರು, ನಿಮ್ಮ ಸುತ್ತ ಮುತ್ತ ಇದ್ದರೆ ಹುಷಾರಾಗಿರಿ

ತಮ್ಮ ಕೆಲಸವನ್ನು ಪೂರೈಸಲು, ಈ ರಾಶಿಯವರು ಯಾರಿಗೆ ಬೇಕಾದರೂ ಎಷ್ಟು ಬೇಕಾದರೂ ಕಿರುಕುಳ ನೀಡುತ್ತಾರೆ.   

Written by - Ranjitha R K | Last Updated : Sep 29, 2021, 02:46 PM IST
  • ಕೆಲವು ರಾಶಿಚಕ್ರದ ಜನರು ಸ್ವಾರ್ಥಿಗಳು
  • ಈ ರಾಶಿಯವರು ಸುಲಭವಾಗಿ ನಂಬಿಕೆಯನ್ನು ಮುರಿಯುತ್ತಾರೆ
  • ಈ ರಾಶಿಯವರು ನಿಮ್ಮ ಸುತ್ತ ಇದ್ದಾರೆಯೇ
ಅತ್ಯಂತ ಸ್ವಾರ್ಥಿಗಳಂತೆ ಈ ಮೂರು ರಾಶಿಯವರು, ನಿಮ್ಮ ಸುತ್ತ ಮುತ್ತ ಇದ್ದರೆ ಹುಷಾರಾಗಿರಿ   title=
ಕೆಲವು ರಾಶಿಚಕ್ರದ ಜನರು ಸ್ವಾರ್ಥಿಗಳು (file photo)

ನವದೆಹಲಿ : ತಮ್ಮ ಬಗ್ಗೆ ಮಾತ್ರ ಯೋಚಿಸುವ ಅದೆಷ್ಟೋ ಜನರನ್ನು ನಾವು ನಮ್ಮ ಸುತ್ತಮುತ್ತ ಕಾಣುತ್ತೇವೆ. ಅಂತಹ ಜನರು ತಮ್ಮ ಸಣ್ಣ ಸಣ್ಣ ಲಾಭಕ್ಕಾಗಿ ಇತರರಿಗೆ ದೊಡ್ಡ ಹಾನಿ ಮಾಡುವುದಕ್ಕೂ ಹಿಂಜರಿಯುವುದಿಲ್ಲ. ಈ ರಾಶಿಯವರು  (Zodiac sign) ಇತರರ ನಂಬಿಕೆಯನ್ನು ಮುರಿಯುವುದು, ಇತರರಿಗೆ ಹಾನಿ ಮಾಡುವುದು ಇಂಥ ಕೆಲಸವನ್ನು ಬಹಳ ಸುಲಭವಾಗಿ ಮಾಡಿ ಮುಗಿಸುತ್ತಾರೆ. ಇನ್ನು ತಮ್ಮ ಕೆಲಸವನ್ನು ಪೂರೈಸಲು, ಯಾರಿಗೆ ಬೇಕಾದರೂ ಎಷ್ಟು ಬೇಕಾದರೂ ಕಿರುಕುಳ ನೀಡುತ್ತಾರೆ.  ಆದರೆ ಇತರರು ಸಹಾಯ ಕೇಳಿದಾಗ, ಮಾತ್ರ ಅಷ್ಟೇ ಸುಲಭವಾಗಿ ಬೆನ್ನು ತಿರುಗಿಸುತ್ತಾರೆ. 

ಈ ರಾಶಿಚಕ್ರದ ಜನರು ಬಹಳ ಸ್ವಾರ್ಥಿಗಳು :
ತುಲಾ (Libra): 
ಈ ರಾಶಿಚಕ್ರದ (Zodiac Sign) ಜನರು ಪ್ರತಿಯೊಂದು ವಿಷಯದಲ್ಲೂ ಸಾಕಷ್ಟು ಸಮತೋಲಿತರಾಗಿದ್ದರೂ, ಅವರ ಪ್ರಯೋಜನಕ್ಕೆ ಬಂದಾಗ, ಕೇವಲ ತಮಗೆ ಮಾತ್ರ ಆದ್ಯತೆ ನೀಡುತ್ತಾರೆ. ತಮ್ಮ ಅನುಕೂಲಕ್ಕಾಗಿ ಯಾರಿಗೆ ಬೇಕಾದರೂ ಹಾನಿ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಅಲ್ಲದೆ, ಯಾರಿಗೆ ಮೋಸ ಮಾಡುವುದಕ್ಕೂ ಹಿಂಜರಿಯುವುದಿಲ್ಲ. 

ಇದನ್ನೂ ಓದಿ : October 2021 Horoscope: ಅಕ್ಟೋಬರ್‌ನಲ್ಲಿ 4 ಗ್ರಹಗಳ ರಾಶಿ ಪರಿವರ್ತನೆ, ಯಾವ ರಾಶಿಯ ಮೇಲೆ ಹೆಚ್ಚು ಪ್ರಭಾವ ತಿಳಿಯಿರಿ

ಕುಂಭ (Aquarius) : 
ಕುಂಭ ರಾಶಿಯವರು (Aquarius) ತುಂಬಾ ಸಿಹಿಯಾಗಿ, ಮೃದುವಾಗಿ ಮಾತನಾಡುತ್ತಾರೆ. ಎಲ್ಲರೆದುರು ಸಭ್ಯವಾಗಿ ಕಾಣುತ್ತಾರೆ ಆದರೆ ಒಳಗಿನಿಂದ ಮಾತ್ರ ಅವರು ತುಂಬಾ ಸ್ವಾರ್ಥಿಗಳು. ಇವರ ಮೃದು ಸ್ವಭಾವದಿಂದ ಜನ ಇವರ ಮಾತನ್ನು ಸುಲಭವಾಗಿ ನಂಬುತ್ತಾರೆ. ಇವರ ಮಾತನ್ನು ನಂಬಿ ಅಷ್ಟೇ ಬೇಗ ಮೋಸ ಹೋಗುತ್ತಾರೆ. ಈ ರಾಶಿಯವರು ಯಾರಿಗಾದರೂ ಮೋಸ ಮಾಡಿದರೆ, ಅಥವಾ ಮನಸ್ಸು ನೋಯಿಸಿದರೆ  ತಲೆಕೆಡಿಸಿಕೊಳ್ಳುವುದಿಲ್ಲ. 

ಮೀನ ರಾಶಿ (Pisces): 
ಮೀನ ರಾಶಿಯ (Pisces) ಜನರು ಯಾವಾಗಲೂ ತಮ್ಮಗಷ್ಟೇ ಆದ್ಯತೆ ನೀಡುತ್ತಾರೆ. ತಮ್ಮ ಲಾಭಕ್ಕಾಗಿ ಯಾವ ಮಟ್ಟಿಗೆ ಬೇಕಾದರೂ ಹೋಗುತ್ತಾರೆ. ಅವರು ಇತರರ ವಿಶ್ವಾಸ ಕಳೆದುಕೊಳ್ಳುವುದು ಸಹಜ. ಅಂತಹ ಜನರನ್ನು ಕುರುಡಾಗಿ ನಂಬುವುದನ್ನು ತಪ್ಪಿಸುವುದು ಒಳ್ಳೆಯದು. 

ಇದನ್ನೂ ಓದಿ : Financial Problem Remedies: ಹಣದ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲವೇ? ಸ್ನಾನ ಮಾಡುವಾಗ ಈ ಕ್ರಮ ಕೈಗೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News