ಧನತ್ರಯೋದಶಿಗೆ ಕೂಡಿ ಬಂದಿದೆ ಶುಭ ಯೋಗ, ಈ ಮುಹೂರ್ತದಲ್ಲಿ ಖರೀದಿ ಮಾಡಿದರೆ ಸಿಗಲಿದೆ ಮೂರು ಪಟ್ಟು ಲಾಭ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು ತ್ರಿಪುಷ್ಕರ ಯೋಗ ರೂಪುಗೊಳ್ಳುತ್ತಿದೆ. ಅಂದರೆ 3 ಪ್ರಮುಖ ಗ್ರಹಗಳ ಸಂಯೋಜನೆ ಆಗಲಿದೆ. ಸೂರ್ಯ, ಬುಧ ಮತ್ತು ಮಂಗಳ ಒಂದೇ ರಾಶಿಯಲ್ಲಿ ತುಲಾ ರಾಶಿಯಲ್ಲಿ ಇರಲಿದೆ.
ನವದೆಹಲಿ : Dhanteras 2021 Shubh Muhurat : ಇಂದು ಅಂದರೆ ನವೆಂಬರ್ 2ರಂದು ಧನತ್ರಯೋದಶಿಯೊಂದಿಗೆ ದೀಪಾವಳಿ ಹಬ್ಬ (Diwali-2021) ಆರಂಭವಾಗಿದೆ. ಧನತ್ರಯೋದಶಿ ದಿನದಂದು ದೀರ್ಘಕಾಲದವರೆಗೆ ಉಪಯುಕ್ತ ವಸ್ತುಗಳನ್ನು ಖರೀದಿಸುವ ಪ್ರವೃತ್ತಿ ಇದೆ. ಈ ದಿನದಂದು ಖರೀದಿ ಮಾಡಿದರೆ ವರ್ಷವಿಡೀ ಮನೆಯಲ್ಲಿ ಸಮೃದ್ಧಿ ತುಂಬಿರುತ್ತದೆ ಎಂದು ನಂಬಲಾಗಿದೆ. ಆದರೆ, ಇಂದು ತ್ರಿಪುಷ್ಕರ ಯೋಗ ರೂಪುಗೊಂಡಿರುವುದರಿಂದ ಈ ಬಾರಿಯ ಧನತ್ರಯೋದಶಿ (Dhantrayodashi) ಇನ್ನಷ್ಟು ವಿಶೇಷವಾಗಿದೆ. ಈ ಯೋಗದಲ್ಲಿ ಖರೀದಿಸಿದ ವಸ್ತುಗಳು 3 ಪಟ್ಟು ಲಾಭವನ್ನು ನೀಡುತ್ತವೆ.
ಬಹಳ ಅದೃಷ್ಟದ ಸಂಯೋಗ :
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಇಂದು ತ್ರಿಪುಷ್ಕರ ಯೋಗ ರೂಪುಗೊಳ್ಳುತ್ತಿದೆ. ಅಂದರೆ 3 ಪ್ರಮುಖ ಗ್ರಹಗಳ ಸಂಯೋಜನೆ ಆಗಲಿದೆ. ಸೂರ್ಯ, ಬುಧ ಮತ್ತು ಮಂಗಳ ಒಂದೇ ರಾಶಿಯಲ್ಲಿ ತುಲಾ ರಾಶಿಯಲ್ಲಿ (Libra) ಇರಲಿದೆ. ತುಲಾ ರಾಶಿಯ ಅಧಿಪತಿಯಾದ ಶುಕ್ರನು (Venus) ಸಾಂಸಾರಿಕ ಸುಖಗಳಿಗೆ ಕಾರಣವಾಗಿರುವ ಗ್ರಹವಾಗಿರುವುದರಿಂದ ಈ ಸಂಯೋಗದ ಸಮಯದಲ್ಲಿ ಸಾಂಸಾರಿಕ ಸುಖಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ. ಹಾಗಾಗಿ, ಈ ಶುಭ ಮುಹೂರ್ತದಲ್ಲಿ ಮಾಡಿದ ಖರೀದಿಯು ಬಹಳಷ್ಟು ಲಾಭವನ್ನು ನೀಡುತ್ತದೆ. ಅಲ್ಲದೆ, ಲಕ್ಷ್ಮೀಯ ಕೃಪೆಯಿಂದ (Godess Lakshmi), ಮನೆಯಲ್ಲಿ ವರ್ಷವಿಡೀ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ. ತ್ರಿಪುಷ್ಕರ ಯೋಗ ಹೂಡಿಕೆ ಮಾಡಲು ಅತ್ಯುತ್ತಮವಾದ ಯೋಗ ಎಂದು ಹೇಳಲಾಗಿದೆ. ಈ ಯೋಗದಲ್ಲಿ ಚಿನ್ನ ಮತ್ತು ಬೆಳ್ಳಿ, ವಾಹನಗಳು, ಮನೆಗಳನ್ನು ಖರೀದಿಸುವುದು ತುಂಬಾ ಮಂಗಳಕರವಾಗಿದೆ.
ಇದನ್ನೂ ಓದಿ : Dhanteras 2021 Shopping: ಧನತ್ರಯೋದಶಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಏನನ್ನು ಖರೀದಿಸಿದರೆ ಉತ್ತಮ
ಶಾಪಿಂಗ್ ಮಾಡಲು ಶುಭ ಮುಹೂರ್ತ :
ಈ ವರ್ಷ, ಧನತ್ರಯೋದಶಿಯಂದು ಖರೀದಿಯ ಶುಭ ಮುಹೂರ್ತ (shoping muhrta) ನವೆಂಬರ್ 2 ರಂದು ಅಂದರೆ ಇಂದು ಸೂರ್ಯೋದಯದೊಂದಿಗೆ ಪ್ರಾರಂಭವಾಗಿದೆ. ಇದು ಬೆಳಿಗ್ಗೆ 11:30 ರವರೆಗೆ ಇರುತ್ತದೆ. ಈ ಸಮಯದಲ್ಲಿ ತ್ರಿಪುಷ್ಕರ ಯೋಗ ಇರುತ್ತದೆ. ಇದಾದ ನಂತರ ಮಧ್ಯಾಹ್ನ 01:30 ರವರೆಗೆ ಅಮೃತ ಯೋಗ ಇರುತ್ತದೆ. ಈ ಸಮಯವು ಖರೀದಿಗೆ ತುಂಬಾ ಅನುಕೂಲಕರವಾಗಿದೆ. ಇದರ ನಂತರ, ಸಂಜೆ 06:16 ರಿಂದ ರಾತ್ರಿ 10:21 ರವರೆಗೆ, ಇದು ಖರೀದಿಗೆ ಮಂಗಳಕರ ಸಮಯವಾಗಿರುತ್ತದೆ.
ಮತ್ತೊಂದೆಡೆ, ಧನ್ವಂತರಿ, ಮಹಾಲಕ್ಷ್ಮೀ ಮತ್ತು ಕುಬೇರ ದೇವನನ್ನು ಕೂಡ ಈ ದಿನ ಪೂಜಿಸಲಾಗುತ್ತದೆ. ಪೂಜೆಯ ಶುಭ ಮುಹೂರ್ತ ಸಂಜೆ 06.18 ರಿಂದ ರಾತ್ರಿ 8.14 ರವರೆಗೆ ಇರುತ್ತದೆ.
ಇದನ್ನೂ ಓದಿ : Dhanatrayodashi 2021: ಈ ಬಾರಿಯ ಧನತ್ರಯೋದಶಿಯ ದಿನದಂದು ಶೇ.20 ಡಿಸ್ಕೌಂಟ್ ನಲ್ಲಿ ಚಿನ್ನದ ನಾಣ್ಯ ಖರೀದಿಗೆ ಅವಕಾಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ