ನವದೆಹಲಿ : ದೀಪಾವಳಿಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಹಬ್ಬಕ್ಕೂ ಮುನ್ನವೇ ಮಾರುಕಟ್ಟೆಗಳಲ್ಲಿ ಖರೀದಿ ಭರದಿಂದ ಸಾಗಿದೆ. ದೀಪಾವಳಿ ಹಬ್ಬವನ್ನು (Diwali 2021) ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಈ ಬಾರಿ ಈ ಹಬ್ಬವನ್ನು ನವೆಂಬರ್ 4 ರಂದು ಆಚರಿಸಲಾಗುತ್ತದೆ. ದೀಪಾವಳಿಯ ದಿನದಂದು ಮನೆಗಳಲ್ಲಿ ಗಣೇಶ-ಲಕ್ಷ್ಮೀ ಯನ್ನು ಪೂಜಿಸಲಾಗುತ್ತದೆ (Lakshmi Ganesha Pooja). ಈ ದಿನ ಗಣೇಶ-ಲಕ್ಷ್ಮೀ ಯನ್ನು ಪೂಜಿಸುವುದರಿಂದ ಸಂತೋಷ, ಸಮೃದ್ಧಿ ಸಿಗಲಿದೆ.
ಧನತ್ರಯೋದಶಿ ಖರೀದಿ :
ಸಾಮಾನ್ಯವಾಗಿ ಜನರು ವಿಗ್ರಹಗಳು, ಬೆಳ್ಳಿ ನಾಣ್ಯಗಳು, ಪೊರಕೆಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಧಂತೇರಸ್ ಅಥವಾ ಧನತ್ರಯೋದಶಿ ದಿನ (Dhantrayodashi) ಖರೀದಿಸುತ್ತಾರೆ. ನಾಳೆ ಧನ ತ್ರಯೋದಶಿಯನ್ನು ಆಚರಿಸಲಾಗುತ್ತದೆ. ಅದಕ್ಕೂ ಮುನ್ನ ಮನೆಯಲ್ಲಿ ಗಣೇಶ-ಲಕ್ಷ್ಮಿ ವಿಗ್ರಹವನ್ನು ತರುವಾಗ ಕೆಲವೊಂದು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರುವುದು ಬಹಳ ಮುಖ್ಯವಾಗಿರುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಗಣೇಶ-ಲಕ್ಷ್ಮಿಯ ವಿಗ್ರಹವನ್ನು (Lakshmi Ganesha Pooja) ಖರೀದಿಸಿದಾಗ ಅದು ಪ್ರತ್ಯೇಕವಾಗಿರಬಾರದು. ಎರಡರ ಸಂಯೋಜನೆಯ ವಿಗ್ರಹವನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸುತ್ತದೆ.
ಇದನ್ನೂ ಓದಿ: Monthly Horoscope: ಈ 6 ರಾಶಿಯವರಿಗೆ ಅದ್ಭುತವಾಗಿರಲಿದೆ ನವೆಂಬರ್, ಹೊಳೆಯಲಿದೆ ಅದೃಷ್ಟ
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ದೀಪಾವಳಿಯ ದಿನದಂದು ಗಣೇಶ-ಲಕ್ಷ್ಮಿಯರ ಕುಳಿತಿರುವ ಮೂರ್ತಿಯನ್ನು ಮಾತ್ರ ಪೂಜಿಸಬೇಕು. ದೇವತೆಗಳು ನಿಂತಿರುವ ಭಂಗಿಯಲ್ಲಿರುವ ವಿಗ್ರಹವನ್ನು ಎಂದಿಗೂ ಮನೆಗೆ ತರಲೇಬೇಡಿ. ಅಂತಹ ವಿಗ್ರಹ ಎಂದಿಗೂ ಮಂಗಳಕರವಾಗಿರುವುದಿಲ್ಲ.
ಮುರಿದ ವಿಗ್ರಹ ಎಂದಿಗೂ ಖರೀದಿಸಬೇಡಿ
ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಕೆಲವೊಮ್ಮೆ ತರಾತುರಿಯಲ್ಲಿ ಶಾಪಿಂಗ್ ಮಾಡುವಾಗ ವಿಗ್ರಹಗಳು ಮುರಿದು ಬೀಳುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಸಂದರ್ಭದಲ್ಲಿ ಮುರಿದ ವಿಗ್ರಹವನ್ನು ನಿಮ್ಮ ಮನೆಗೆ ತರಬೇಡಿ ಎಂಬುದನ್ನು ನೆನಪಿನಲ್ಲಿಡಿ. ಮುರಿದ ವಿಗ್ರಹವನ್ನು ಪೂಜಿಸುವುದು ಅಶುಭ. ಇನ್ನು ಗಣೇಶನ (Lord Ganesha) ವಿಗ್ರಹದಲ್ಲಿ ಸೊಂಡಿಲು ಎಡಕ್ಕೆ ತಿರುಗಿರಬೇಕು ಮತ್ತು ಆ ವಿಗ್ರಹದಲ್ಲಿ ಇಲಿ ಇರಬೇಕು ಎಂಬುದನ್ನು ನೆನಪಿನಲ್ಲಿಡಿ.
ಇದನ್ನೂ ಓದಿ: Dhanatrayodashi 2021: ಮನೆಯಲ್ಲಿ ಮೂರು ಪಟ್ಟು ಹೆಚ್ಚು ಸುಖ-ಸಮೃದ್ಧಿ ಬರಲು ಧನ ತ್ರಯೋದಶಿಯಂದು ಈ ಸಮಯದಲ್ಲಿ ಖರೀದಿ ಮಾಡಿ
ಗಣೇಶ-ಲಕ್ಷ್ಮೀಯ ವಿಗ್ರಹವನ್ನು ಖರೀದಿಸುತ್ತಿದ್ದರೆ, ಗಣೇಶನ ಕೈಯಲ್ಲಿ ಲಡ್ಡೂ ಹಿಡಿದಿರುವ ಫೋಟೋ ಅಥವಾ ವಿಗ್ರಹವನ್ನು ಪೂಜಿಸುವುದು ತುಂಬಾ ಹಿತಕರವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಲಕ್ಷ್ಮಿಯ (Godess Lakshmi) ವಿಗ್ರಹ ಅಥವಾ ಫೋಟೋ ಖರೀದಿಸುವಾಗ ಲಕ್ಷ್ಮೀಯ ಕೈಯಿಂದ ನಾಣ್ಯಗಳು ಬೀಳುತ್ತಿರುವ ಫೋಟೋವನ್ನೇ ಖರೀದಿಸಿ.
ಪ್ಲಾಸ್ಟಿಕ್ ಮೂರ್ತಿ ಪೂಜೆ ಅಶುಭ
ಇದಲ್ಲದೆ, ಆನೆ ಅಥವಾ ಕಮಲದ ಮೇಲೆ ಕುಳಿತಿರುವ ಲಕ್ಷ್ಮಿಯ ವಿಗ್ರಹವನ್ನು ಪೂಜಿಸುವುದು ಲಾಭದಾಯಕವೆಂದು ಪರಿಗಣಿಸಲಾಗಿದೆ. ದೀಪಾವಳಿಯಂದು ಮಣ್ಣಿನಿಂದ ಮಾಡಿದ ವಿಗ್ರಹವನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೆ, ನೀವು ಅಷ್ಟಧಾತು, ಬೆಳ್ಳಿ ಅಥವಾ ಹಿತ್ತಾಳೆಯ ವಿಗ್ರಹವನ್ನು ಸಹ ಪೂಜಿಸಬಹುದು. ಆದರೆ ಮನೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಪ್ಲಾಸ್ಟಿಕ್ ವಿಗ್ರಹಗಳನ್ನು ಪೂಜಿಸಬಾರದು ಎಂಬುದನ್ನು ನೆನಪಿನಲ್ಲಿಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ