ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಮಧುಮೇಹ ಮತ್ತು ರಕ್ತದೊತ್ತಡದಂತಹ ರೋಗಗಳು ಸಾಮಾನ್ಯವಾಗಿದೆ. ವಯಸ್ಸಾದವರಿಂದ ಹಿಡಿದು ಹದಿಹರೆಯದವರವರೆಗೆ ಬಹುತೇಕ ಜನರು ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಆದರೆ ಬರಿಗಾಲಿನಲ್ಲಿ ನಡೆಯುವುದರಿಂದ, ನಾವು ಅಂತಹ ಸಮಸ್ಯೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡೆದುಹಾಕಬಹುದು ಎಂದು ನಿಮಗೆ ತಿಳಿದಿದೆಯೇ.


COMMERCIAL BREAK
SCROLL TO CONTINUE READING

ವಾಕಿಂಗ್ ಪ್ರಯೋಜನಗಳು?
ಇತ್ತೀಚಿನ ದಿನಗಳಲ್ಲಿ ನಾವು ಯಾವುದೇ ಕೆಲಸಕ್ಕೂ ಅಲೆದಾಡಬೇಕಾದ ಅವಶ್ಯಕತೆ ಇಲ್ಲ. ನಾವು ಕುಳಿತಲ್ಲಿಯೇ ನಮಗೆ ಬೇಕಾದ ಪ್ರಯೋಜನವನ್ನು ಪಡೆಯಬಹುದು. ಹೀಗಾಗಿ ದೈಹಿಕ ಚಲನೆ ತುಂಬಾ ಕಡಿಮೆಯಾಗಿದೆ.  ಇದಲ್ಲದೇ, ಕೆಟ್ಟ ಆಹಾರ ಪದ್ಧತಿ ಮತ್ತು ಪಾನೀಯಗಳಿಂದಾಗಿ ಅನೇಕ ರೀತಿಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ, ಸಾಮಾನ್ಯವಾಗಿ ಪಾದಗಳಲ್ಲಿ ಊತದ ಸಮಸ್ಯೆ ಇರುತ್ತದೆ, ಅದನ್ನು ನೀವು ಬರಿಗಾಲಿನಲ್ಲಿ ನಡೆಯುವುದರ ಮೂಲಕ ಜಯಿಸಬಹುದು. ಇದನ್ನು ಮಾಡುವುದರಿಂದ, ರಕ್ತದ ಹರಿವು ಸರಿಯಾಗುತ್ತದೆ ಮತ್ತು ಅದು ದೇಹದಲ್ಲಿ ಸರಿಯಾಗಿ ರಕ್ತ ಪರಿಚಲನೆ ಮಾಡಲು ಸಹಾಯಕವಾಗುತ್ತದೆ.


ಇದನ್ನೂ ಓದಿ-  Herbs For Hair: ನಿಮ್ಮ ಕೂದಲಿಗೆ ಹೊಸ ಲೈಫ್ ನೀಡುತ್ತೆ ಈ 5 ಗಿಡಮೂಲಿಕೆಗಳು


ಇದಲ್ಲದೇ, ಮಧುಮೇಹಿ (Diabetes) ರೋಗಿಗಳಿಗೆ ಸಾಮಾನ್ಯವಾಗಿ ಮಂಡಿ ನೋವಿನ ಸಮಸ್ಯೆಯೂ ಕಾಡುತ್ತದೆ. ಆದರೆ ಬರಿಗಾಲಿನಲ್ಲಿ ನಡೆಯುವ ಸೂತ್ರವು ಈ ಸಮಸ್ಯೆಯನ್ನು ತೊಡೆದುಹಾಕಲು ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ವಾಕಿಂಗ್ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನೂ ನಿಯಂತ್ರಿಸುತ್ತದೆ.


ನಿಮ್ಮ ಮೂಳೆಗಳು ಬಲವಾಗಿರುತ್ತವೆ:
ವಯಸ್ಸಿಗೆ ಮುನ್ನ ನಿಮ್ಮ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸಿದರೆ, ವಾಕಿಂಗ್ (Walking) ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ನಿರಂತರ ವಾಕಿಂಗ್ ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಅನ್ನು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ಬಲಪಡಿಸುತ್ತದೆ. ಹಾಗೆಯೇ, ದೃಷ್ಟಿ ಕಡಿಮೆಯಾಗುವುದನ್ನು ಸಹ ವಾಕಿಂಗ್ ಮೂಲಕ ಸರಿಪಡಿಸಬಹುದು.


ಇದನ್ನೂ ಓದಿ- Skin Care: ಫೇಸ್ ವಾಶ್ ವೇಳೆ ಎಂದಿಗೂ ಇಂತಹ ತಪ್ಪುಗಳನ್ನು ಮಾಡಬೇಡಿ


ನೀವು ಪ್ರತಿದಿನ ಬರಿಗಾಲಿನಲ್ಲಿ ನಡೆದರೆ, ದೇಹದಲ್ಲಿ ರಕ್ತದ ಹರಿವು ಚೆನ್ನಾಗಿರುತ್ತದೆ. ವಾಕಿಂಗ್ ಮಾಡುವಾಗ ಪಾದದ ಮೇಲೆ ಬೀಳುವ ಒತ್ತಡದಿಂದಾಗಿ, ಕಣ್ಣುಗಳು ಯಾವಾಗಲೂ ಫಿಟ್ ಆಗಿರುತ್ತವೆ ಮತ್ತು ಅವುಗಳ ಬೆಳಕು ಕೂಡ ಉತ್ತಮವಾಗಿ ಉಳಿಯುತ್ತದೆ. ದೇಹದ ನರಮಂಡಲಕ್ಕೆ ವಾಕಿಂಗ್ ಕೂಡ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.


ಬರಿಗಾಲಿನಲ್ಲಿ ನಡೆಯುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಕೂಡ ಸಹಾಯ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಬಿಪಿಯ ಸಮಸ್ಯೆ ಸಾಮಾನ್ಯವಾಗಿದೆ ಮತ್ತು ಜನರು ಅದಕ್ಕಾಗಿ ಹಲವು ವಿಧದ ಔಷಧಗಳನ್ನು ಸಹ ತೆಗೆದುಕೊಳ್ಳುತ್ತಾರೆ. ಆದರೆ ನೀವು ಪ್ರತಿದಿನವೂ ನಿಯಮಿತವಾಗಿ ವಾಕಿಂಗ್ ಮಾಡುವುದರಿಂದ ನಿಮ್ಮ ರಕ್ತದೊತ್ತಡದ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ