Diwali 2021: ದೀಪಾವಳಿಯ ನಂತರ ಈ ದಿನಾಂಕವನ್ನು ನೆನಪಿಡಿ, ಈ ರಾಶಿಯವರ ಮೇಲೆ ವಿಶೇಷ ಪರಿಣಾಮ
ದೀಪಾವಳಿಯ ನಂತರ ಮತ್ತೊಂದು ಪ್ರಮುಖ ದಿನಾಂಕ ಸಮೀಪಿಸುತ್ತಿದೆ. ಈ ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 19 ರಂದು ಸಂಭವಿಸಲಿದೆ. ಈ ಗ್ರಹಣವು ನೆರಳು ಚಂದ್ರಗ್ರಹಣವಾಗಿರುತ್ತದೆ, ಇದನ್ನು ಪೆನಂಬ್ರಾಲ್ ಎಂದೂ ಕರೆಯುತ್ತಾರೆ.
ಬೆಂಗಳೂರು: ಇಡೀ ದೇಶವೇ ದೀಪಾವಳಿ ಹಬ್ಬದ ತಯಾರಿಯಲ್ಲಿ ತೊಡಗಿದೆ. ದೀಪಾವಳಿ ಮುಗಿದ ಬಳಿಕ ಮತ್ತೊಂದು ದಿನಾಂಕವು ಬಹಳ ಮುಖ್ಯವಾಗಿದೆ. 2021 ರ ಕೊನೆಯ ಚಂದ್ರಗ್ರಹಣ ಶೀಘ್ರದಲ್ಲೇ ಸಂಭವಿಸಲಿದೆ. ದೀಪಾವಳಿಯ ನಂತರ, ವರ್ಷದ ಕೊನೆಯ ಚಂದ್ರಗ್ರಹಣವು ಶುಕ್ರವಾರ, ನವೆಂಬರ್ 19, 2021 ರಂದು ಸಂಭವಿಸುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ರೀತಿಯ ಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಎಲ್ಲಾ ಪ್ರಾಣಿಗಳು ಮತ್ತು ಮಾನವರ ಮೇಲೆ ನಕಾರಾತ್ಮಕ ಪರಿಣಾಮ (Negative Effect) ಬೀರುತ್ತದೆ.
ಚಂದ್ರಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಎಂದು ಹೇಳಲಾಗುತ್ತದೆ. 2021 ರಲ್ಲಿ, ಮೊದಲ ಚಂದ್ರಗ್ರಹಣವು 26 ಮೇ 2021 ರಂದು ಸಂಭವಿಸಿತು ಮತ್ತು 2021 ರ ಕೊನೆಯ ಚಂದ್ರಗ್ರಹಣವು (Last lunar eclipse of 2021) ನವೆಂಬರ್ 19 ರಂದು ನಡೆಯಲಿದೆ. ಈ ಗ್ರಹಣವು ದ್ವಾದಶ ರಾಶಿಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ಅದಾಗ್ಯೂ, ಈ ಬಾರಿಯ ಗ್ರಹಣವು ಒಂದು ರಾಶಿಯವರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಈ ರಾಶಿಯವರ ಮೇಲೆ ಚಂದ್ರಗ್ರಹಣದ ವಿಶೇಷ ಪರಿಣಾಮ:
ಈ ವರ್ಷದ ಕೊನೆಯ ಚಂದ್ರಗ್ರಹಣವು (Lunar Eclipse) ವೃಷಭ ರಾಶಿಯಲ್ಲಿ ಸಂಭವಿಸಲಿದೆ. ಹಾಗಾಗಿ ಈ ರಾಶಿಯವರ ಮೇಲೆ ವಿಶೇಷ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಇದು ಭಾಗಶಃ ಚಂದ್ರಗ್ರಹಣವಾಗಿರುತ್ತದೆ, ಆದ್ದರಿಂದ ಇದು ಸೂತಕ ಅವಧಿಯನ್ನು ತೆಗೆದುಕೊಳ್ಳುವುದಿಲ್ಲ. ಈ ಗ್ರಹಣವು ಭಾರತದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಮಾತ್ರ ಸ್ವಲ್ಪ ಸಮಯದವರೆಗೆ ಗೋಚರಿಸುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ- Diwali 2021: ದೀಪಾವಳಿಯಲ್ಲಿ ಮನೆಯ ಮುಖ್ಯ ಬಾಗಿಲಿನಲ್ಲಿ ಈ ವಸ್ತುಗಳನ್ನು ಇಟ್ಟರೆ ವರ್ಷ ಪೂರ್ತಿ ಹಣ ಬರುತ್ತದೆ
2021ರ ಕೊನೆಯ ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ?
ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರಗಳ ಪ್ರಕಾರ, ದೀಪಾವಳಿಯ ನಂತರ ವರ್ಷದ ಕೊನೆಯ ಚಂದ್ರಗ್ರಹಣವು 19 ನವೆಂಬರ್ 2021 ರಂದು ಸಂಭವಿಸಲಿದೆ. ಹಿಂದೂ ಪಂಚಾಂಗದ ಪ್ರಕಾರ, 2078 ರ ವಿಕ್ರಮ ಸಂವತ್‌ನಲ್ಲಿ ಕಾರ್ತಿಕ ಮಾಸದ ಹುಣ್ಣಿಮೆಯಂದು ಚಂದ್ರಗ್ರಹಣವು ಕೃತ್ತಿಕಾ ನಕ್ಷತ್ರ ಮತ್ತು ವೃಷಭ ರಾಶಿಯಲ್ಲಿ ಸಂಭವಿಸಲಿದೆ. ಈ ಚಂದ್ರಗ್ರಹಣವು ನವೆಂಬರ್ 19 ರಂದು ರಾತ್ರಿ 11:34 ಕ್ಕೆ ಪ್ರಾರಂಭವಾಗಿ ಮುಂಜಾನೆ 05:33 ಕ್ಕೆ ಕೊನೆಗೊಳ್ಳಲಿದೆ.
ಚಂದ್ರಗ್ರಹಣಗಳಲ್ಲಿ ಮೂರು ವಿಧಗಳಿವೆ :
* ಸಂಪೂರ್ಣ ಚಂದ್ರ ಗ್ರಹಣ
* ಭಾಗಶಃ ಚಂದ್ರಗ್ರಹಣ ಮತ್ತು
* ಚಂದ್ರ ಗ್ರಹಣ
ನವೆಂಬರ್ 19 ರಂದು ನೆರಳು ಚಂದ್ರಗ್ರಹಣ (Shadow Lunar Eclipse) ಇರುತ್ತದೆ, ಇದನ್ನು ಪೆನಂಬ್ರಲ್ ಎಂದೂ ಕೂಡ ಕರೆಯುತ್ತಾರೆ.
ನೆರಳು ಚಂದ್ರಗ್ರಹಣ ಎಂದರೇನು?
ಚಂದ್ರಗ್ರಹಣ ಪ್ರಾರಂಭವಾಗುವ ಮೊದಲು ಚಂದ್ರನು ಭೂಮಿಯ ನೆರಳನ್ನು ಪ್ರವೇಶಿಸುತ್ತಾನೆ. ಚಂದ್ರನು ಭೂಮಿಯ ನಿಜವಾದ ನೆರಳನ್ನು ಪ್ರವೇಶಿಸಿದಾಗ, ಅದನ್ನು ಸಂಪೂರ್ಣ ಚಂದ್ರಗ್ರಹಣವೆಂದು ಪರಿಗಣಿಸಲಾಗುತ್ತದೆ. ನೆರಳು ಗ್ರಹಣವನ್ನು ನಿಜವಾದ ಚಂದ್ರಗ್ರಹಣವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷ್ಯದಲ್ಲಿ ಕೂಡ ನೆರಳಿಗೆ ಗ್ರಹಣದ ಸ್ಥಾನಮಾನ ನೀಡಿಲ್ಲ.
ಇದನ್ನೂ ಓದಿ- Diwali 2021: ದೀಪಾವಳಿಯಂದು ದೇವಿ ಲಕ್ಷ್ಮಿಯ ಆಗಮನದ ಸಂಕೇತ ನೀಡುತ್ತವೆ ಈ 5 ಸಂಗತಿಗಳು
ಚಂದ್ರಗ್ರಹಣವು ಒಂದು ಪ್ರಮುಖ ಖಗೋಳ ಘಟನೆಯಾಗಿದೆ. ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ, ಚಂದ್ರನು ಸಂಪೂರ್ಣವಾಗಿ ಅಥವಾ ಭಾಗಶಃ ಮುಚ್ಚಲ್ಪಡುತ್ತಾನೆ/ ಮರೆಯಾಗುತ್ತಾನೆ. ಸೂರ್ಯ, ಭೂಮಿ ಮತ್ತು ಚಂದ್ರರು ನೇರ ರೇಖೆಯಲ್ಲಿ ಬರುತ್ತಾರೆ, ಅದನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಗ್ರಹಣ ಪೂರ್ಣವಾದಾಗ ಅದರ ಪರಿಣಾಮ ಹೆಚ್ಚು. ಸಂಪೂರ್ಣ ಚಂದ್ರಗ್ರಹಣವಿರುವಾಗ ಮಾತ್ರ ಸೂತಕದ ನಿಯಮಗಳನ್ನು ಪಾಲಿಸುವುದು ಸೂಕ್ತ. ಆದರೆ ನೆರಳು ಚಂದ್ರಗ್ರಹಣ ವಿದ್ದರೆ ಸೂತಕದ ನಿಯಮಗಳನ್ನು ಹೆಚ್ಚು ಪಾಲಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ