Diwali 2022: ಓರ್ವ ರಾಕ್ಷೆಸನ ಕಾರಣ ಭಾರತದ ಈ ರಾಜ್ಯದಲ್ಲಿ ದೀಪಾವಳಿ ಆಚರಿಸಲಾಗುವುದಿಲ್ಲವಂತೆ
Diwali 2022: ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ದೀಪಾವಳಿಯನ್ನು ಸಾಕಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಆದರೆ ಭಾರತದಲ್ಲಿ ದೀಪಾವಳಿಯನ್ನು ಆಚರಿಸದೆ ಇರುವ ಒಂದೇ ಒಂದು ರಾಜ್ಯವಿದೆ ಎಂದು ನಿಮಗೆ ಹೇಳಿದರೆ ನೀವು ನಂಬುವಿರಾ? ಹೌದು, ಈ ರಾಜ್ಯದ ಒಂದು ಸ್ಥಳವನ್ನು ಹೊರತುಪಡಿಸಿ, ದೀಪಾವಳಿಯನ್ನೂ ಆಚರಿಸಲಾಗುವುದಿಲ್ಲ ಹಾಗೂ ಲಕ್ಷ್ಮಿ-ಗಣೇಶನ ಪೂಜೆಯನ್ನು ಕೂಡ ನೆರವೇರಿಸಲಾಗುವುದಿಲ್ಲ.
Diwali 2022: ದೇಶದೆಲ್ಲೆಡೆ ದೀಪಾವಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ದೀಪಾವಳಿ ಹಬ್ಬದಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ದೀಪಾವಳಿಯ ದಿನದಂದು ಲಕ್ಷ್ಮಿ ಮತ್ತು ಗಣಪತಿಯನ್ನು ಪೂಜಿಸಲಾಗುತ್ತದೆ. ಇದರೊಂದಿಗೆ ಜನರು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುತ್ತಾರೆ ಮತ್ತು ಪ್ರಸಾದವನ್ನು ವಿತರಿಸುತ್ತಾರೆ. ಭಾರತವನ್ನು ಹೊರತುಪಡಿಸಿ, ಪ್ರಪಂಚದ ಇತರ ಹಲವು ದೇಶಗಳಲ್ಲಿ ದೀಪಾವಳಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ, ಆದರೆ ಭಾರತದಲ್ಲಿ ದೀಪಾವಳಿಯನ್ನು ಆಚರಿಸದ ಒಂದೇ ಒಂದು ರಾಜ್ಯವಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.
ಮಹಾಬಲಿ ರಾಕ್ಷೆಸ ಇದಕ್ಕೆ ಕಾರಣ
ಈ ರಾಜ್ಯದ ಒಂದು ಸ್ಥಳವನ್ನು ಹೊರತುಪಡಿಸಿ, ದೀಪಾವಳಿಯನ್ನು ಆಚರಿಸಲಾಗುವುದಿಲ್ಲ ಅಥವಾ ಲಕ್ಷ್ಮಿ-ಗಣೇಶನಿಗೆ ಪೂಜೆಯನ್ನು ನಡೆಸಲಾಗುವುದಿಲ್ಲ. ಇದಲ್ಲದೆ, ಜನರು ದೀಪಗಳನ್ನು ಸಹ ಹಚ್ಚುವುದಿಲ್ಲ ಮತ್ತು ಪಟಾಕಿಗಳನ್ನು ಸಹ ಸಿಡಿಸುವುದಿಲ್ಲ. ಇಲ್ಲಿ ದೀಪಾವಳಿ ಕೂಡ ಸಾಮಾನ್ಯ ದಿನದಂತೆಯೇ ಇರುತ್ತದೆ. ಕೇರಳ ರಾಜ್ಯದಲ್ಲಿ ಪ್ರತಿ ಹಬ್ಬವನ್ನು ಆಚರಿಸಲಾಗುತ್ತದೆ, ಆದರೆ ದೀಪಾವಳಿ ಹಬ್ಬವನ್ನು ಆಚರಿಸಲಾಗುವುದಿಲ್ಲ. ಕೇರಳ ರಾಜ್ಯದಲ್ಲಿ ದೀಪಾವಳಿಯನ್ನು ಕೊಚ್ಚಿಯಲ್ಲಿ ಮಾತ್ರ ಆಚರಿಸಲಾಗುತ್ತದೆ. ಈ ರಾಜ್ಯದ ಜನರು ದೀಪಾವಳಿಯನ್ನು ಏಕೆ ಆಚರಿಸುವುದಿಲ್ಲ ಎಂಬ ಪ್ರಶ್ನೆ ಇದೀಗ ನಿಮ್ಮ ಮನದಲ್ಲಿಯೂ ಕೂಡ ಮೂಡಿರಬಹುದಲ್ಲವೇ.
ಇದನ್ನೂ ಓದಿ-ಅಕಾಲ ಮೃತ್ಯುವಿನಿಂದ ಪಾರಾಗಬೇಕಾದರೆ ನರಕ ಚತುರ್ದಶಿ ದಿನ ಈ ಕೆಲಸ ಮಾಡಿ .!
ಕೇರಳದಲ್ಲಿ ಜನರು ಓರ್ವ ರಾಕ್ಷೆಸನ ಕಾರಣದಿಂದ ದೀಪಾವಳಿಯನ್ನು ಆಚರಿಸುವುದಿಲ್ಲ. ಒಂದು ಕಾಲದಲ್ಲಿ ಕೇರಳದಲ್ಲಿ ಮಹಾಬಲಿ ರಾಕ್ಷಸನ ಆಳ್ವಿಕೆ ಇತ್ತು. ಅಲ್ಲಿನ ಜನರು ಆತನನ್ನು ಆರಾಧಿಸುತ್ತಾರೆ. ಅಲ್ಲಿನ ಜನರು ದೀಪಾವಳಿಯನ್ನು ಮಹಾಬಲಿ ಎಂಬ ರಾಕ್ಷಸನನ್ನು ಸೋಲಿಸಿದ ದಿನ ಎಂದು ಪರಿಗಣಿಸುತ್ತಾರೆ. ಇದರಿಂದಾಗಿ ಅಲ್ಲಿನ ಜನರು ದೀಪಾವಳಿಯನ್ನು ಆಚರಿಸುವುದಿಲ್ಲ ಮತ್ತು ಈ ದಿನವು ಅವರಿಗೆ ಸಾಮಾನ್ಯ ದಿನವಾಗಿದೆ. ಕೇರಳದಲ್ಲಿ ದೀಪಾವಳಿಯನ್ನು ಆಚರಿಸದಿರಲು ಬೇರೆ ಕಾರಣಗಳಿವೆ. ಕೇರಳ ರಾಜ್ಯದಲ್ಲಿ ಹಿಂದೂ ಧರ್ಮದಲ್ಲಿ ನಂಬಿಕೆ ಇರುವವರು ಕಡಿಮೆ. ಇದರಿಂದಾಗಿ ರಾಜ್ಯದಲ್ಲಿ ದೀಪಾವಳಿ ಆಚರಣೆ ಇಲ್ಲಕ್ಕೆ ಸಮಾನವಾಗಿದೆ.
ಇದನ್ನೂ ಓದಿ-ಇನ್ನು ಮೂರು ದಿನಗಳಲ್ಲಿ ಶನಿದೇವನ ಪಥದಲ್ಲಿ ಬದಲಾವಣೆ, ಈ ರಾಶಿಯವರ ಕಷ್ಟಗಳಿಗೆ ಬೀಳುವುದು ವಿರಾಮ.!
ಇತರ ಕಾರಣಗಳಿವೆ
ಇನ್ನೊಂದು ಕಾರಣ ಎಂದರೆ ಅಲ್ಲಿನ ಹವಾಮಾನ. ಈ ಸಮಯದಲ್ಲಿ ಕೇರಳದಲ್ಲಿ ಭಾರಿ ಮಳೆಯಾಗುತ್ತದೆ. ಇದರಿಂದಾಗಿ ಅಲ್ಲಿ ಪಟಾಕಿ, ದೀವಟಿಗೆಗಳನ್ನು ಹಚ್ಚುವುದಿಲ್ಲ. ಇದಲ್ಲದೇ ಅಲ್ಲಿ ಆಚರಿಸಲಾಗುವ ಓಣಂ ಹಬ್ಬವೂ ಒಂದು ಕಾರಣವೆಂದು ಪರಿಗಣಿಸಲಾಗಿದೆ. ಓಣಂ ಅಲ್ಲಿನ ಜನರಿಗೆ ಪ್ರಮುಖ ಹಬ್ಬವಾಗಿದೆ. ಕೇರಳದಲ್ಲಿ ಓಣಂ ಅನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಮತ್ತು ಈ ಹಬ್ಬವು ದೀಪಾವಳಿಯ ಒಂದು ತಿಂಗಳ ಮೊದಲು ಬರುತ್ತದೆ. ಕೇರಳದ ಜನರು ಈ ಹಬ್ಬದಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಅದಕ್ಕಾಗಿಯೇ ಅವರು ದೀಪಾವಳಿಗೆ ಹಣವನ್ನು ಖರ್ಚು ಮಾಡುವುದಿಲ್ಲ. ರಾವಣನನ್ನು ಗೆದ್ದು ತನ್ನ 14 ವರ್ಷಗಳ ವನವಾಸವನ್ನು ಮುಗಿಸಿ ಶ್ರೀರಾಮನು ಅಯೋಧ್ಯೆಗೆ ಹಿಂದಿರುಗಿದಾಗ, ದೇಶದಾದ್ಯಂತ ದೀಪವನ್ನು ಬೆಳಗಿಸಿ ದೀಪಾವಳಿಯನ್ನು ಆಚರಿಸಲಾಯಿತು ಎಂಬುದು ಐತಿಹ್ಯ. ಈ ಹಬ್ಬವನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.