ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ನ್ಯಾಯದ ದೇವರು ಎಂದು ಪರಿಗಣಿಸಲಾದ ಶನಿ ಗ್ರಹವು ಅಕ್ಟೋಬರ್ 23 ರಿಂದ ಮಕರ ರಾಶಿಯಲ್ಲಿ ನೇರ ಚಲನೆ ಆರಂಭಿಸಲಿದ್ದಾರೆ. ಇಲ್ಲಿಂದ ಜನವರಿ 17 2023 ರವರೆಗೆ ಶನಿ ದೇವರು ನೇರ ಚಲನೆಯಲ್ಲಿಯೇ ಸಾಗಲಿದ್ದಾರೆ. ಅಲ್ಲದೆ, ಈ ಸಮಯದಲ್ಲಿ ಶನಿಯು ಮಂಗಳನ ನಕ್ಷತ್ರವಾದ ಧನಿಷ್ಟ ನಕ್ಷತ್ರದಲ್ಲಿ ಉಳಿಯುತ್ತಾನೆ. ಶನಿ ಮತ್ತು ಮಂಗಳ ಪರಸ್ಪರ ದ್ವೇಷದ ಭಾವನೆಯನ್ನು ಹೊಂದಿದೆ. ಈ ರೀತಿಯಾಗಿ ಶನಿ ಮತ್ತು ಮಂಗಳನ ಅಶುಭ ಯೋಗವು ರೂಪುಗೊಳ್ಳುತ್ತದೆ. ಇದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಶನಿಯ ಪಥದ ಬದಲಾವಣೆಯಿಂದಾಗಿ, ಐದು ರಾಶಿಯವರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ.
ಈ ರಾಶಿಯವರ ಮೇಲೆ ಕೃಪಾ ದೃಷ್ಟಿ ಹರಿಸಲಿದ್ದಾನೆ ಶನಿ ಮಹಾತ್ಮ :
ಮಕರ ರಾಶಿ - ಶನಿಯು ಮಕರ ರಾಶಿಯಲ್ಲಿ ತನ್ನ ಪಥ ಬದಲಿಸಲಿದ್ದಾನೆ. ಇದೀಗ ಮಕರ ರಾಶಿಯವರಿಗೆ ಶನಿ ಸಾಡೇ ಸಾತಿ ನಡೆಯುತ್ತಿದ್ದರೂ, ಶನಿಯ ಪಥ ಬದಲಾವಣೆಯಿಂದ ಸಾಕಷ್ಟು ಪರಿಹಾರ ಸಿಗಲಿದೆ. ನಿಂತು ಹೋಗಿದ್ದ ಕೆಲಸಗಳು ಪ್ರಾರಂಭವಾಗುತ್ತವೆ. ಹಣಕಾಸಿನ ತೊಂದರೆಗಳು ದೂರವಾಗುತ್ತವೆ.
ಇದನ್ನೂ ಓದಿ : Dhanteras 2022: ಧನತ್ರಯೋದಶಿಯಲ್ಲಿ ಪಾತ್ರೆಗಳನ್ನು ಏಕೆ ಖರೀದಿಸಲಾಗುತ್ತದೆ ಗೊತ್ತಾ?
ಕುಂಭ ರಾಶಿ - ಕುಂಭ ರಾಶಿಯವರ ಮೇಲೆ ಕೂಡಾ ಶನಿ ಸಾಡೇಸಾತಿಯ ಪ್ರಭಾವ ಇರಲಿದೆ. ಶನಿಯ ಪಥ ಬದಲಾಗುವುದರಿಂದ ಕುಂಭ ರಾಶಿಯವರ ಸಮಸ್ಯೆಗಳು ದೂರವಾಗುವುದು. ತಾವು ಮಾಡುವ ಕೆಲಸ ಕಾರ್ಯಗಳಲ್ಲಿ ಶುಭ ಫಲ ಸಿಗುವುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಆದಾಯ ಉತ್ತಮವಾಗಲಿದೆ.
ಧನು ರಾಶಿ - ಈ ಸಮಯದಲ್ಲಿ ಧನು ರಾಶಿಯವರಿಗೂ ಕೂಡಾ ಶನಿ ಸಾಡೇ ಸಾತಿ ನಡೆಯುತ್ತಿದೆ. ಅಕ್ಟೋಬರ್ 23 ರಿಂದ ಶನಿಯ ನೇರ ಸಂಚಾರವು ಅವರಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿನಿರೀಕ್ಷಿಸುತ್ತಿರುವ ಬಡ್ತಿ ಈ ಸಮಯದಲ್ಲಿ ಸಿಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ.
ಇದನ್ನೂ ಓದಿ : ದೀಪಾವಳಿ ಮುನ್ನಾ ದಿನ ಈ ವಸ್ತುಗಳನ್ನು ದಾನ ಮಾಡಿದರೆ ಎದುರಾಗುವುದೇ ಇಲ್ಲ ಹಣದ ಸಮಸ್ಯೆ
ಮಿಥುನ ರಾಶಿ- ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಶನಿ ಧೈಯ್ಯಾ ನಡೆಯುತ್ತಿದೆ. ಮಿಥುನ ರಾಶಿಯವರಿಗೆ ಶನಿಯ ನೇರ ಸಂಚಾರದಿಂದ ಪರಿಹಾರ ಸಿಗಲಿದೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಬರಲಿವೆ. ಆರ್ಥಿಕ ಲಾಭವಾಗಲಿದೆ. ನಿಂತು ಹೋಗಿದ್ದ ಕೆಲಸ ಪೂರ್ಣಗೊಳ್ಳಲಿದೆ.
ತುಲಾ ರಾಶಿ - ತುಲಾ ರಾಶಿಯ ಜನರ ಮೇಲೂ ಶನಿ ಧೈಯ್ಯಾ ಪ್ರಭಾವವಿದೆ. ಶನಿಯ ನೆರೆ ಚಲನೆ ಆರಂಭವಾದ ತಕ್ಷಣ ತುಲಾ ರಾಶಿಯವರು ದೊಡ್ಡ ಮಟ್ಟದ ಲಾಭ ಪಡೆಯಲಿದ್ದಾರೆ. ತುಲಾ ರಾಶಿಯವರ ಆದಾಯ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಯಾವುದೇ ದೊಡ್ಡ ಕೆಲಸವನ್ನು ಕುಟುಂಬದ ಸದಸ್ಯರ ಸಹಾಯದಿಂದ ಪೂರ್ಣಗೊಳಿಸುವುದು ಸಾಧ್ಯವಾಗುತ್ತದೆ. ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಹಣ ಸಿಗುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.