Diya In Worship: ದೇವಿ-ದೇವತೆಗಳ ಮುಂದೆ ತುಪ್ಪದ ದೀಪ ಬೆಳಗಿ ಅಥವಾ ಎಳ್ಳೆಣ್ಣೆ ದೀಪ, ವಿಧಾನ ಮಾತ್ರ ಇದಾಗಿರಲಿ
Worship Diya - ದೇವಾನುದೇವತೆಗಳ ಆರಾಧನೆಯಲ್ಲಿ ದೀಪ ಬೆಳಗಿಸುವುದು ಶಾಸ್ತ್ರಗಳಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ಶಾಸ್ತ್ರಗಳ ಪ್ರಕಾರ, ವಿಧಿ-ವಿಧಾನಗಳಿಂದ ಪೂಜೆ ಮಾಡಲು ಸಾಧ್ಯವಾಗದವರು ದೇವರ ಮುಂದೆ ದೀಪವನ್ನು ಹಚ್ಚಿ ಪೂಜಿಸಬಹುದು. ಶಾಸ್ತ್ರಗಳಲ್ಲಿ ದೀಪವನ್ನು ಹಚ್ಚಲು ಕೆಲವು ವಿಶೇಷ ನಿಯಮಗಳನ್ನು ಹೇಳಲಾಗಿದೆ.
Deepak Puja Mantra: ಸಾಮಾನ್ಯವಾಗಿ ಮನೆ ಅಥವಾ ದೇವಸ್ಥಾನದಲ್ಲಿ ದೇವಾನುದೇವತೆಗಳ ಮುಂದೆ ದೀಪವನ್ನು ಬೆಳಗುತ್ತಾರೆ. ಇದಲ್ಲದೆ, ತುಳಸಿ ಗಿಡದ (Auspicious Plant) ಕೆಳಗೆ ಕೂಡ ಬೆಳಗ್ಗೆ ಮತ್ತು ಸಂಜೆ ಹೊತ್ತು ದೀಪವನ್ನು ಬೆಳಗಿಸಲಾಗುತ್ತದೆ (Deepak Mantra). ನಿಯಮಗಳ ಪ್ರಕಾರ ಪೂಜೆ ಮಾಡಲು ಸಾಧ್ಯವಾಗದವರು ಕೇವಲ ದೀಪವನ್ನು ಹಚ್ಚಿ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಬಹುದು ಎಂದು ಧಾರ್ಮಿಕ ಗ್ರಂಥಗಳಲ್ಲಿ ತಜ್ಞರು ಹೇಳಿದ್ದಾರೆ. ಆದರೆ ದೇವತೆಗಳ ಮುಂದೆ ಎಳ್ಳೆಣ್ಣೆ ಅಥವಾ ತುಪ್ಪದ ದೀಪವನ್ನು ಹೇಗೆ ಉರಿಸಬೇಕು ಎಂಬುದು ನಿಮಗೆ ತಿಳಿದಿದೆಯೇ? ಅಷ್ಟೇ ಅಲ್ಲ ಅದರಲ್ಲಿನ ಬೆಳಕು ಹೇಗಿರಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಪೂಜೆಯಲ್ಲಿ ದೀಪವನ್ನು ಬೆಳಗುವ ನಿಯಮಗಳೇನು?(Diya Lightning Rules)
ಧಾರ್ಮಿಕ ಗ್ರಂಥಗಳ ಪ್ರಕಾರ, ನೀವು ಮನೆ ಅಥವಾ ದೇವಸ್ಥಾನದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತುಪ್ಪ ಅಥವಾ ಎಳ್ಳೆಣ್ಣೆಯ ದೀಪವನ್ನು ಬೆಳಗಿಸಬಹುದು. ಆದರೆ, ತುಪ್ಪದ ದೀಪವನ್ನು ಅದರ ಎಡಭಾಗದಲ್ಲಿ ಅಂದರೆ ದೇವತೆಗಳ ಬಲಭಾಗದಲ್ಲಿ ಬೆಳಗಬೇಕು. ಇದಲ್ಲದೆ, ಎಳ್ಳೆಣ್ಣೆ ದೀಪವನ್ನು ನಿಮ್ಮ ಬಲಭಾಗದಲ್ಲಿ ಅಂದರೆ ದೇವತೆಗಳ ಎಡಭಾಗದಲ್ಲಿ ಬೆಳಗಬೇಕು.
ತುಪ್ಪದ ದೀಪದಲ್ಲಿ ಬಿಳಿ ಹತ್ತಿಯ ಬಳಕೆ ಮಾಡಬೇಕು ಎಂಬುದು ಧಾರ್ಮಿಕ ನಂಬಿಕೆ. ಇದೇ ವೇಳೆ, ಎಳ್ಳೆಣ್ಣೆ ದೀಪಕ್ಕೆ ಕೆಂಪು ದಾರದ ಬೆಳಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದಲ್ಲದೇ ಪೂಜೆಯ ಮಧ್ಯದಲ್ಲಿ ದೀಪ ಆರದಂತೆಯೂ ಎಚ್ಚರಿಕೆ ವಹಿಸಬೇಕು. ಹೀಗಾದರೆ ಪೂಜೆಯ ಫಲ ಪ್ರಾಪ್ತಿಯಾಗುವುದಿಲ್ಲ ಎನ್ನಲಾಗುತ್ತದೆ.
ಇದನ್ನೂ ಓದಿ-Hanuman Jayanti 2022: ಈ ರೀತಿ ಹನುಮನನ್ನು ಪೂಜಿಸಿದರೆ ಶನಿ ದೋಷದಿಂದ ಕೂಡ ಮುಕ್ತಿ ಸಿಗುತ್ತದೆ
ಶಾಸ್ತ್ರಗಳ ಪ್ರಕಾರ, ದೇವತೆಗಳ ವಿಗ್ರಹ ಅಥವಾ ಚಿತ್ರದ ಮುಂದೆ ದೀಪವನ್ನು ಬೆಳಗಿಸಬಾರದು. ಇದಲ್ಲದೆ, ಪ್ರತಿಮೆಯ ಹಿಂದೆ ಅಥವಾ ಸುತ್ತಲೂ ದೀಪವನ್ನು ಎಂದಿಗೂ ಬೆಳಗಿಸಬಾರದು. ಪೂಜೆಯಲ್ಲಿ ಒಡೆದ ದೀಪದ ಬಳಕೆಯನ್ನು ಸಹ ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ವಿಘಟಿತ ವಸ್ತುಗಳನ್ನು ಪೂಜೆಯಲ್ಲಿ ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.
ಇದನ್ನೂ ಓದಿ-Samudrik Shastra: ನಿಮ್ಮ ಶರೀರ ಸಂರಚನೆ ಈ ರೀತಿ ಇದ್ದರೆ, ಅಪಾರ ಧನವೃಷ್ಟಿಯ ಜೊತೆಗೆ ಸಫಲತೆ ನಿಮ್ಮದಾಗಲಿದೆ
(Declaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.