Vastu Tips: ದಕ್ಷಿಣ ದಿಕ್ಕಿನಲ್ಲಿ ಮರೆತೂ ಕೂಡ ಈ ಸಸ್ಯಗಳನ್ನು ನೆಡಬೇಡಿ, ಹಣಕಾಸಿನ ಮುಗ್ಗಟ್ಟು ಎದುರಾಗುತ್ತದೆ

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಿಡಗಳನ್ನು ನೆಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರವಾಗುತ್ತದೆ ಎನ್ನಲಾಗಿದೆ. ಮರ, ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮನೆಯ ವಾಸ್ತು ದೋಷಗಳು ಕೂಡ ನಿವಾರಣೆಯಾಗುತ್ತವೆ. 

Vastu Tips: ವಾಸ್ತು ಶಾಸ್ತ್ರದ  (Vastu Tips) ಪ್ರಕಾರ ಮನೆಯಲ್ಲಿ ಗಿಡಗಳನ್ನು (Plants) ನೆಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರವಾಗುತ್ತದೆ ಎನ್ನಲಾಗಿದೆ. ಮರ, ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ ನೆಟ್ಟರೆ ಮನೆಯ ವಾಸ್ತು ದೋಷಗಳು (Vastu Dosh) ಕೂಡ ನಿವಾರಣೆಯಾಗುತ್ತವೆ. ಇನ್ನೊಂದೆಡೆ, ತಪ್ಪು ದಿಕ್ಕಿನಲ್ಲಿ ನೆಟ್ಟ ಮರಗಳು ಮತ್ತು ಸಸ್ಯಗಳು ನಕಾರಾತ್ಮಕ ಶಕ್ತಿಯ (Negative Energy) ಸಂಚಾರಕ್ಕೆ ಕಾರಣವಾಗುತ್ತವೆ. ಯಾವ 5 ಗಿಡಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ಮನೆಯಲ್ಲಿ ಸಂತೋಷ (Positive Energy) ಸದಾ ನೆಲೆಸಿರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Hanuman Jayanti 2022: ಈ ರೀತಿ ಹನುಮನನ್ನು ಪೂಜಿಸಿದರೆ ಶನಿ ದೋಷದಿಂದ ಕೂಡ ಮುಕ್ತಿ ಸಿಗುತ್ತದೆ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)

 

ಇದನ್ನೂ ನೋಡಿ-


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1, ತುಳಸಿ ಗಿಡ  - ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದು ತುಂಬಾ ಶುಭ. ಇದನ್ನು ಮನೆಯಲ್ಲಿ ನೆಡುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ತುಳಸಿಯನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಏಕೆಂದರೆ ಈ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಇದನ್ನು ಯಾವಾಗಲೂ ಪೂರ್ವ, ಉತ್ತರ ಅಥವಾ ಪೂರ್ವೋತ್ತರ ದಿಕ್ಕಿನಲ್ಲಿ ನೆಡಬೇಕು.

2 /5

2. ಶಮಿ ಗಿಡ -ವಾಸ್ತು ಶಾಸ್ತ್ರದ ಪ್ರಕಾರ ಶಮಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ವಾಸ್ತವದಲ್ಲಿ, ಈ ದಿಕ್ಕಿನಲ್ಲಿ ಶಮಿ ಗಿಡವನ್ನು ನೆಡುವುದು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಸಸ್ಯವನ್ನು ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಶಮಿ ಗಿಡವನ್ನು ಈ ದಿಕ್ಕಿನಲ್ಲಿ ನೆಟ್ಟರೆ ವಾಸ್ತು ದೋಷ ನಿವಾರಣೆಯಾಗುತ್ತದೆ.

3 /5

3. ರೋಸ್ಮರಿ ಗಿಡ - ವಾಸ್ತು ಶಾಸ್ತ್ರದ ಪ್ರಕಾರ ರೋಸ್ಮರಿ ಗಿಡವನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರ ಸಂಭವಿಸುತ್ತದೆ. ಇದಲ್ಲದೆ, ಈ ಸಸ್ಯವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು.

4 /5

4. ಮನಿ ಪ್ಲಾಂಟ್  - ವಾಸ್ತು ಶಾಸ್ತ್ರದ ಪ್ರಕಾರ ಮನೆ ಮತ್ತು ಕಛೇರಿಯಲ್ಲಿ ಮನಿ ಪ್ಲಾಂಟ್ ಇಡುವುದು ಶುಭಕರ ಎನ್ನಲಾಗಿದೆ. ಮನಿ ಪ್ಲಾಂಟ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಅಗ್ನಿಕೋನದಲ್ಲಿ (ಅಂದರೆ ಆಗ್ನೇಯ ದಿಕ್ಕಿನಲ್ಲಿ) ಇಡುವುದು ತುಂಬಾ ಶುಭಕರ.

5 /5

5. ಬಾಳೆಗಿಡ - ಬಾಳೆಗಿಡ ವಿಷ್ಣುವಿಗೆ ಅತ್ಯಂತ ಪ್ರಿಯವಾದ ಗಿಡ ಎಂಬ ಧಾರ್ಮಿಕ ನಂಬಿಕೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇದು ಇರಬಾರದು. ಇದನ್ನು ಈಶಾನ್ಯದಲ್ಲಿ ನೆಡುವುದು ಅತ್ಯಂತ ಸೂಕ್ತ.