Bathroom Vastu Tips: ವಾಸ್ತು ಪ್ರಕಾರ ಮನೆಯಲ್ಲಿನ ಸ್ನಾನಗೃಹವು ತುಂಬಾ ಮುಖ್ಯವಾಗಿರುತ್ತದೆ. ವಾಸ್ತು ಸಲಹೆಗಳ ಪ್ರಕಾರ, ಬಾತ್ ರೂಮ್ ಕಟ್ಟುವಾಗ ವಾಸ್ತುವಿನ ಬಗ್ಗೆ ಸಾಕಷ್ಟು ಗಮನ ಕೊಡದಿರುವುದು ಆರ್ಥಿಕ ಮತ್ತು ಆರೋಗ್ಯ ನಷ್ಟಗಳಿಗೆ ಕಾರಣವಾಗಬಹುದು. ಜೊತೆಗೆ ಈ ವಾಸ್ತು ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿ ಮತ್ತು ಅಶುಭ ಶಕುನಗಳನ್ನು ತರಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಹೆಚ್ಚಾಗುತ್ತಿರುವ ತೂಕಕ್ಕೆ ಕಡಿವಾಣ ಹಾಕಬೇಕೇ? ಈ ಉಪಾಯ ಟ್ರೈ ಮಾಡಿ ನೋಡಿ!


ವಾಸ್ತುಶಾಸ್ತ್ರವು ಪ್ರಾಚೀನ, ಸಾಂಪ್ರದಾಯಿಕ ವಾಸ್ತುಶಿಲ್ಪದ ವಿಜ್ಞಾನವಾಗಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಸ್ನಾನಗೃಹ-ಶೌಚಾಲಯದ ನಿರ್ಮಾಣ ಮಾಡುವಾಗ ಕೈಗೊಳ್ಳಬೇಕಾದ ಕೆಲವು ಪ್ರಮುಖ ನಿಯಮಗಳನ್ನು ಹೇಳುತ್ತದೆ. ವಿಶೇಷವಾಗಿ ಅಟ್ಯಾಚ್’ಡ್ ಬಾತ್ರೂಮ್-ಶೌಚಾಲಯಕ್ಕೆ ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ, ಇಲ್ಲದಿದ್ದರೆ ಜೀವನವು ನಕಾರಾತ್ಮಕತೆಯಿಂದ ತುಂಬಿರುತ್ತದೆ.


ನೀವು ಮನೆಯಲ್ಲಿ ಅಟ್ಯಾಚ್’ಡ್ ಬಾತ್ರೂಮ್ ನಿರ್ಮಿಸಲು ಬಯಸಿದರೆ ಅಥವಾ ನಿಮ್ಮ ಕೋಣೆಗೆ ಬಾತ್ರೂಮ್ ಅನ್ನು ಜೋಡಿಸಲು ಬಯಸಿದರೆ, ನೀವು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ನೀವು ಜಾಗರೂಕರಾಗಿರದಿದ್ದರೆ ವಾಸ್ತು ಪ್ರಕಾರ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು.


ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡುವಾಗ ಅಟ್ಯಾಚ್ಡ್ ಬಾತ್ ರೂಂಗಳನ್ನು ನಿರ್ಮಿಸಲಾಗುತ್ತದೆ. ಆದರೆ ಇದು ಗಂಡ-ಹೆಂಡತಿ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮಲಗುವಾಗ ನಿಮ್ಮ ಪಾದಗಳನ್ನು ಸ್ನಾನಗೃಹದ ಕಡೆಗೆ ಇಡಬೇಡಿ, ಇದು ಗಂಡ ಮತ್ತು ಹೆಂಡತಿಯ ನಡುವೆ ಜಗಳವನ್ನು ಹೆಚ್ಚಿಸುತ್ತದೆ.


ಮಲಗುವಾಗ ಯಾವಾಗಲೂ ಬಾತ್ ರೂಂ ಬಾಗಿಲು ಮುಚ್ಚಿಡಿ. ಇಲ್ಲದಿದ್ದರೆ, ವೈವಾಹಿಕ ಜೀವನದಲ್ಲಿ ವಿವಾದಗಳು ಹೆಚ್ಚಾಗುತ್ತವೆ. ಕೆಲವೊಮ್ಮೆ ವಿಷಯ ವಿಚ್ಛೇದನದ ಹಂತಕ್ಕೆ ಹೋಗುತ್ತದೆ. ಇದರೊಂದಿಗೆ ಮನೆಯ ಆರ್ಥಿಕ ಸ್ಥಿತಿಯೂ ಹದಗೆಡಲು ಪ್ರಾರಂಭಿಸುತ್ತದೆ.


ಅಟ್ಯಾಚ್ಡ್ ಬಾತ್ ರೂಂ ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ವಾಸ್ತು ದೋಷಗಳನ್ನು ತೊಡೆದುಹಾಕಲು ನಿಮ್ಮ ಬಾತ್ರೂಮ್’ನಲ್ಲಿ ಗಾಜಿನ ಬಟ್ಟಲನ್ನು ಇರಿಸಿ. ಅದರಲ್ಲಿ ಉಪ್ಪು ತುಂಬಿಸಿ. ಒಂದು ವಾರ ಬಾತ್ ರೂಂನಲ್ಲಿ ಈ ರೀತಿ ಬಿಡಿ. ಇದರ ನಂತರ, ಆ ಉಪ್ಪನ್ನು ಸಿಂಕ್‌ನ ಕೆಳಗೆ ಫ್ಲಶ್ ಮಾಡಿ ಮತ್ತು ನಂತರ ಮತ್ತೊಮ್ಮೆ ಬೌಲ್’ನಲ್ಲಿ ಉಪ್ಪನ್ನು ತುಂಬಿಸಿ.


ಈ ಪರಿಹಾರವು ಸ್ನಾನಗೃಹಕ್ಕೆ ಸಂಬಂಧಿಸಿದ ವಾಸ್ತು ದೋಷವನ್ನು ತೆಗೆದುಹಾಕುತ್ತದೆ. ಇನ್ನು ಟಾಯ್ಲೆಟ್ ಸೀಟ್ ಅನ್ನು ಯಾವಾಗಲೂ ಮುಚ್ಚಬೇಕು, ಏಕೆಂದರೆ ಅದು ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ, ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ.


ಇದನ್ನೂ ಓದಿ: ಸುಂದರವಾದ, ಕಾಂತಿಯುತ ತ್ವಚೆ ನಿಮ್ಮದಾಗಬೇಕೆ! ಹಾಗಿದ್ದರೆ ಈ ಜ್ಯೂಸ್ ಅನ್ನು ನಿತ್ಯ ಸೇವಿಸಿ


(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.