Vastu Tips: ಊಟ ಮಾಡುವಾಗ ವಾಸ್ತು ಶಾಸ್ತ್ರದ ಈ ಸಲಹೆಗಳನ್ನು ಮರೆಯಬೇಡಿ!
Vastu Tips For Meals And Dinner: ಜೀವನದಲ್ಲಿ ನಡೆಯುವ ಹಲವು ಸಂಗತಿಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಆದರೆ, ಜ್ಯೋತಿಷ್ಯದ ವಿಚಾರದಲ್ಲಿ ಈ ಸಣ್ಣಪುಟ್ಟ ಸಂಗತಿಗಳಿಗೂ ಕೂಡ ಮಹತ್ವವಿದೆ.
Vastu Tips For Meals And Dinner: ಜೀವನದಲ್ಲಿ ನಡೆಯುವ ಹಲವು ಸಂಗತಿಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಆದರೆ, ಜ್ಯೋತಿಷ್ಯದ ವಿಚಾರದಲ್ಲಿ ಈ ಸಣ್ಣಪುಟ್ಟ ಸಂಗತಿಗಳಿಗೂ ಕೂಡ ಮಹತ್ವವಿದೆ. ಸಮಯ ಇರುವಾಗ ಅವುಗಳತ್ತ ಗಮನ ನೀಡಿದರೆ, ಅದೃಷ್ಟವು ಫಟ್ ಅಂತ ಬದಲಾಗುತ್ತದೆ. ಇಂದು ನಾವು ಆಹಾರ ಸೇವಿಸುವಾಗ ಅನುಸರಿಸಬೇಕಾದ ಕೆಲ ಸಂಗತಿಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಸಂಗತಿಗಳನ್ನು ಸರಿಪಡಿಸಿಕೊಂಡರೆ ಅವು ನಿಮ್ಮ ಮನೆಯಲ್ಲಿಯೂ ಕೂಡ ಸಮೃದ್ಧಿಗೆ ಕಾರಣವಾಗಬಲ್ಲವು.
1. ವಾಸ್ತು ಶಾಸ್ತ್ರದ ಪ್ರಕಾರ ಆಹಾರ ಸೇವಿಸುವಾಗ ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಸಂಗತಿಗಳು ಆರೋಗ್ಯದ ದೃಷ್ಟಿಯಿಂದ ಸಂಗತಿಗಳಾಗಿವೆ, ಜೊತೆಗೆ ಅವುಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಮಹತ್ವವಿದೆ. ಆಹಾರ ಸೇವಿಸುವಾಗ ಈ ಸಂಗತಿಗಳನ್ನು ಪಾಲಿಸುವುದು ತುಂಬಾ ಸುಲಭ. ಈ ವಿಷಯಗಳನ್ನು ಸಮಯೋಚಿತವಾಗಿ ಕಾರ್ಯಗತಗೊಳಿಸಿದರೆ, ಅದೃಷ್ಟದ ಬೆಂಬಲ ನಿಮಗೆ ಸಿಗಲಾರಂಭಿಸುತ್ತದೆ.
2. ದಕ್ಷಿಣ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸಬಾರದು. ಈ ವಿಷಯವನ್ನು ಮನೆಯಲ್ಲಿ ಮಾತ್ರವಲ್ಲ, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿಯೂ ಅನುಸರಿಸಬೇಕು. ಈ ದಿಕ್ಕಿಗೆ ಮುಖಮಾಡಿ ತಿನ್ನುವುದರಿಂದ ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಬರಲಾರಂಭಿಸುತ್ತವೆ.
3. ಹಲವರಿಗೆ ಆಹಾರ ಸೇವಿಸುವಾಗ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀರಿನ ಗ್ಲಾಸನ್ನು ಯಾವಾಗಲೂ ಬಲಭಾಗದಲ್ಲಿ ಇಡಬೇಕು ಎಂಬುದನ್ನು ನೆನಪಿನಲ್ಲಿದೆ, ಏಕೆಂದರೆ ಎಡಗೈಯಿಂದ ನೀರನ್ನು ಕುಡಿಯುವುದು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಇನ್ನೊಂದೆಡೆ ಬಲಗೈಯಿಂದ ನೀರು ಕುಡಿಯುವುದು ಅದೃಷ್ಟವನ್ನು ಹೆಚ್ಚಿಸುತ್ತದೆ.
4. ಆಹಾರದ ಪ್ಲೇಟ್ ಅಥವಾ ತಟ್ಟೆಯಲ್ಲಿ ಕೈಗಳನ್ನು ಎಂದಿಗೂ ತೊಳೆಯಬಾರದು. ಈ ರೀತಿ ಮಾಡುವುದರಿಂದ ತಾಯಿ ಅನ್ನಪೂರ್ಣೆ ಮುನಿಸಿಕೊಳ್ಳುತ್ತಾಳೆ ಎನ್ನಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಈ ಅಭ್ಯಾಸವನ್ನು ತಪ್ಪು ಎಂದು ಹೇಳಲಾಗಿದೆ. ಆಹಾರದ ತಟ್ಟೆಯಲ್ಲಿ ಕೈಗಳನ್ನು ತೊಳೆಯುವುದರಿಂದ ನಿಮಗೆ ಬೆಂಬಲ ನೀಡುತ್ತಿರುವ ಅದೃಷ್ಟ ಮುನಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ-Marriage Tips: ಕಂಕಣ ಬಲ ಕೂಡಿಬರುತ್ತಿಲ್ಲವೇ, ಈ ಉಪಾಯ ಟ್ರೈ ಮಾಡಿ ನೋಡಿ!
5. ತಿನ್ನುವಾಗ ಆಹಾರದ ಒಂದು ಸಣ್ಣ ಭಾಗವನ್ನು ಯಾವಾಗಲೂ ತೆಗೆದು ತಟ್ಟೆಯ ಪಕ್ಕಕ್ಕೆ ಇರಿಸಬೇಕು. ಈ ಸಣ್ಣ ಭಾಗವನ್ನು ಇರುವೆಗಳಿಗಾಗಿ ಅಥವಾ ಪಕ್ಷಿಗಳಿಗಾಗಿ ಮರ ಅಥವಾ ಛಾವಣಿಯ ಮೇಲೆ ಇರಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಬರುವ ಸಮಸ್ಯೆಗಳು ದೂರಾಗುತ್ತವೆ.
ಇದನ್ನೂ ಓದಿ-Chanakya Niti: ಕೆಟ್ಟ ಸಂದರ್ಭಗಳಲ್ಲಿಯೂ ಕೂಡ ಈ ನಿಮ್ಮ ಗುಟ್ಟುಗಳು ನಿಮ್ಮ ಬಳಿಯೇ ಇರಲಿ... ಇಲ್ದಿದ್ರೆ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.