Marriage Tips: ಕಂಕಣ ಬಲ ಕೂಡಿಬರುತ್ತಿಲ್ಲವೇ, ಈ ಉಪಾಯ ಟ್ರೈ ಮಾಡಿ ನೋಡಿ!

Marriage Tips: ಅಡಿಕೆಯನ್ನು ಕೇವಲ ಪೂಜೆಗಾಗಿ ಮಾತ್ರವೇ ಬಳಸಲಾಗುವುದಿಲ್ಲ. ವೃತ್ತಿಜೀವನ, ನೌಕರಿಯಲ್ಲಿ ಯಶಸ್ಸಿಗಾಗಿಯೂ ಇದು ಒಂದು ಅದ್ಭುತ ಉಪಾಯ ಸಾಬೀತಾಗುತ್ತದೆ.  

Written by - Nitin Tabib | Last Updated : Apr 21, 2023, 11:11 PM IST
  • ಕಂಕಣ ಬಲ ಕೂಡಿ ಬರಲು, ಒಂದು ಅಡಿಕೆಯನ್ನು ತೆಗೆದುಕೊಂಡು ಅದನ್ನು ರಕ್ಷಾ ಸೂತ್ರದಲ್ಲಿ ಸುತ್ತಿ.
  • ನಂತರ ಅದಕ್ಕೆ ಅಕ್ಷತೆ, ಕುಂಕುಮ ಮತ್ತು ಹೂವುಗಳಿಂದ ಪೂಜಿಸಿ.
  • ಇದಾದ ನಂತರ ಗುರುವಾರದಂದು ವಿಷ್ಣು ದೇವಾಲಯಕ್ಕೆ ಹೋಗಿ ಅದನ್ನು ಅಲ್ಲಿ ಇರಿಸಿ.
Marriage Tips: ಕಂಕಣ ಬಲ ಕೂಡಿಬರುತ್ತಿಲ್ಲವೇ, ಈ ಉಪಾಯ ಟ್ರೈ ಮಾಡಿ ನೋಡಿ! title=

 Betel Nut Remedies For Marriage:  ಜೀವನದಲ್ಲಿ ಅಂದುಕೊಂಡ ಯಶಸ್ಸು ಸಿಗದೇ ಹೋದಲ್ಲಿ ಅಥವಾ ವ್ಯಾಪಾರ, ಉದ್ಯೋಗದಲ್ಲಿ ಯಾವುದೇ ಪ್ರಗತಿ ಕಾಣದೆ ಹೋದರೆ, ಅದಕ್ಕೆ ವಾಸ್ತು ಶಾಸ್ತ್ರದಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಹಿಂದೂ ಧರ್ಮದಲ್ಲಿ ಪೂಜೆಗೆ ಬೇಕಾಗುವ ಅತ್ಯಗತ್ಯ ಸಾಮಗ್ರಿಗಳಲ್ಲಿ ಅಡಿಕೆ ಕೂಡ ಒಂದು. ಅದಿಲ್ಲದೆ ಪೂಜೆ ಅಪೂರ್ಣ, ಪೂಜೆಯ ವೇಳೆ ವೀಳ್ಯದೆಲೆಯಲ್ಲಿ ಅಡಿಕೆಯನ್ನು  ಇಟ್ಟು ಪೂಜಿಸುವುದು ಸಾಕಷ್ಟು ಶ್ರೇಯಸ್ಕರ ಎನ್ನಲಾಗುತ್ತದೆ, ಆದರೆ ಈ ಅಡಿಕೆಗೆ ಸಂಬಂಧಿಸಿದ ಕೆಲ ವಿಶಿಷ್ಟ ಉಪಾಯಗಳಿವೆ. ಅಡಿಕೆಯ ಈ ವಾಸ್ತು ಪರಿಹಾರಗಳು ನಿಮ್ಮ ಜೀವನದಲ್ಲಿ ಯಶಸ್ಸು ತರುತ್ತದೆ. ಅಡಿಕೆಗೆ ಸಂಬಂಧಿಸಿದ ಈ ನಿರ್ಧಿಷ್ಟ ಉಪಾಯಗಳನ್ನು ಅಳವಡಿಸಿಕೊಂಡರೆ, ಉದ್ಯೋಗದಲ್ಲಿ ಪ್ರಗತಿ ಕಂಡುಬರುತ್ತದೆ, ಮದುವೆಯ ಸಾಧ್ಯತೆಗಳು ಹೆಚ್ಚಾಗುತ್ತವೆ.

ಅಡಿಕೆಯನ್ನು ಗಣೇಶ್-ಲಕ್ಷ್ಮಿಯ ರೂಪವೆಂದು ಪರಿಗಣಿಸುತ್ತಾರೆ. ಯಾವುದೇ ಪೂಜೆಯಲ್ಲಿ ಅಡಿಕೆಗೆ ವಿಶೇಷ ಮಹತ್ವವಿದೆ. ಅಡಿಕೆ ಮಚ್ಚೆಗಳನ್ನು ಕಟ್ಟಿ ಅರ್ಪಿಸುವುದರಿಂದ ಗಣೇಶ ಪ್ರಸನ್ನನಾಗುತ್ತಾನೆ.

ಅಡಿಕೆಯ ಪರಿಹಾರಗಳು
ಅಡಿಕೆಯ ಮೇಲೆ ಜನೇವು ಅಥವಾ ಗೆಜವಸ್ತ್ರವನ್ನು ಅರ್ಪಿಸಿ ಮತ್ತು ಅದನ್ನು ಪೂಜಾ ಸ್ಥಳದಲ್ಲಿ ಅಥವಾ ಮನೆಯ ತಿಜೋರಿಯಲ್ಲಿ ಇರಿಸಿ, ಇದು ನಿಮ್ಮ ಸಂಪತ್ತನ್ನು ಹೆಚ್ಚಿಸುತ್ತದೆ.

ಅಕ್ಷತೆ ಮತ್ತು ಕುಂಕುಮವನ್ನು ಹಚ್ಚುವ ಮೂಲಕ ಪ್ರತಿದಿನ ತಿಜೋರಿಯಲ್ಲಿ ಇರಿಸಲಾಗಿರುವ ಅಡಿಕೆಯನ್ನು ಪೂಜಿಸಿ, ಇದು ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ಅಡಿಕೆಗೆ ಕುಂಕುಮದ ತಿಲಕ ಹಚ್ಚಿ ನಂತರ ಗಣೇಶ ದೇವಸ್ಥಾನಕ್ಕೆ ಹೋಗಿ ಶ್ರೀ ಗಣೇಶನಿಗೆ ಅದನ್ನು ಅರ್ಪಿಸಿ.

ಅಡಿಕೆಗೆ ಗುಲಾಲ್ ಹಚ್ಚಿ ಅದನ್ನು ಬೆಳ್ಳಿಯ ಪೊಟ್ಟಣದಲ್ಲಿಟ್ಟು ನಿಮ್ಮ ವ್ಯಾಪಾರದ ಸ್ಥಳದಲ್ಲಿ ಇರಿಸಿ.

ಕಂಕಣ ಬಲ ಕೂಡಿ ಬರಲು, ಒಂದು ಅಡಿಕೆಯನ್ನು ತೆಗೆದುಕೊಂಡು ಅದನ್ನು ರಕ್ಷಾ ಸೂತ್ರದಲ್ಲಿ ಸುತ್ತಿ. ನಂತರ ಅದಕ್ಕೆ ಅಕ್ಷತೆ, ಕುಂಕುಮ ಮತ್ತು ಹೂವುಗಳಿಂದ ಪೂಜಿಸಿ. ಇದಾದ ನಂತರ ಗುರುವಾರದಂದು ವಿಷ್ಣು ದೇವಾಲಯಕ್ಕೆ ಹೋಗಿ ಅದನ್ನು ಅಲ್ಲಿ ಇರಿಸಿ. ಹೀಗೆ ಮಾಡುವುದರಿಂದ, ಮದುವೆಯ ಯೋಗ ರೂಪುಗೊಳ್ಳುತ್ತದೆ. ಮದುವೆಯ ಬಳಿಕ, ಆ ಅಡಿಕೆಯನ್ನು ನೀರಿನಲ್ಲಿ ವಿಸರ್ಜಿಸಿ.

ನೀವು ವೃತ್ತಿ ಅಥವಾ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಬಯಸುತ್ತಿದ್ದರೆ, ಹಸುವಿನ ತುಪ್ಪದಲ್ಲಿ ಕುಂಕುಮವನ್ನು ಬೆರೆಸಿ ಮತ್ತು ಅಡಿಕೆಯ ಮೇಲೆ ಸ್ವಸ್ತಿಕ ಬರೆಯಿರಿ. ನಂತರ ರಕ್ಷಾಸೂತ್ರದಲ್ಲಿ ಅಡಿಕೆಯನ್ನು ಸುತ್ತಿ ಅದನ್ನು ಸ್ಥಾಪಿಸಿ. ಇದರಿಂದ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ-Guru Asnwini Gochar 2023: ಸುಖ-ಐಶ್ವರ್ಯಕಾರಕ ದೇವಗುರು ಬೃಹಸ್ಪತಿಯ ಅಶ್ವಿನಿ ನಕ್ಷತ್ರ ಪ್ರವೇಶ, ಈ ರಾಶಿಗಳ ಜನರಿಗೆ ಭರ್ಜರಿ ಲಾಭ!

ಮನೆಯಿಂದ ಹೊರಡುವ ಮೊದಲು ಅಡಿಕೆ ಮತ್ತು ವೀಳ್ಯದೆಲೆಯನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ, ಇದರಿಂದ ಖಂಡಿತವಾಗಿಯೂ ನಿಮಗೆ ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಲಭಿಸುತ್ತದೆ.

ಇದನ್ನೂ ಓದಿ-May 2 ರಂದು ಸ್ವರಾಶಿಯನ್ನು ತೊರೆದು ಮಿಥುನ ರಾಶಿಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News