Leaves For Weight Loss: ಪ್ರಸ್ತುತ, ಬಹುತೇಕ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಸಮಸ್ಯೆ ಸ್ಥೂಲಕಾಯತೆ. ಸ್ಥೂಲಕಾಯತೆ ಅಥವಾ ಅತಿಯಾದ ತೂಕ ಹೆಚ್ಚಳವು ಕೇವಲ ದೇಹದ ಆಕಾರವನ್ನು ವಿರೂಪಗೊಳಿಸುವುದು ಮಾತ್ರವಲ್ಲ,  ಆರೋಗ್ಯ ಸಮಸ್ಯೆಗಳನ್ನು ಕೂಡ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ತ್ವರಿತವಾಗಿ ತೂಕ ಕಳೆದುಕೊಳ್ಳಲು ಜಿಮ್‌ಗೆ ಹೋಗುವುದನ್ನು ಪರಿಗಣಿಸುತ್ತಾರೆ. ಆದರೆ, ಎಷ್ಟೇ ಕಠಿಣ ಡಯಟ್ ಅನುಸರಿಸಿದರು, ಗಂಟೆಗಟ್ಟಲೆ ಜಿಮ್‌ಗೆ ಹೋಗಿ ತಾಲೀಮು ನಡೆಸಿದರೂ ನಿರೀಕ್ಷಿತ ಫಲಿತಾಂಶ ಸಿಗದೆ ಜನರು ಬೇಸರಗೊಳ್ಳುತ್ತಾರೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು ನಿಮ್ಮ ಡಯಟ್ನಲ್ಲಿ ಕೆಲವು ಗಿಡಮೂಲಿಕೆಗಳನ್ನು ಸೇರಿಸುವುದರಿಂದ ಸುಲಭವಾಗಿ ತೂಕ ಕಳೆದುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಆಯುರ್ವೇದ ತಜ್ಞರ ಪ್ರಕಾರ, ನಮಗೆ ಸುಲಭವಾಗಿ ಲಭ್ಯವಿರುವ ಕೆಲವು ಗಿಡಮೂಲಿಕೆಗಳ ಸಹಾಯದಿಂದ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. ಹೌದು, ದುಬಾರಿ ಜಿಮ್‌ಗೆ ಹೋಗದೆಯೇ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಕೆಲವು ಸೊಪ್ಪುಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಅಂತಹ ವಿಶೇಷ ಸೊಪ್ಪುಗಳ ಬಗ್ಗೆ ತಿಳಿಯೋಣ...  


ಈ ಗಿಡಮೂಲಿಕೆಗಳನ್ನು ತಿನ್ನುವ ಮೂಲಕ ಆರೋಗ್ಯಕರವಾಗಿ ತೂಕವನ್ನು ಕಳೆದುಕೊಳ್ಳಬಹುದು:- 
ಕರಿಬೇವಿನ ಸೊಪ್ಪು: 

ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಬಹುತೇಕ ಖಾದ್ಯಗಳಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಕರಿಬೇವಿನ ಸೊಪ್ಪು ಕೂಡ ತೂಕ ಇಳಿಕೆಯಲ್ಲಿ ರಾಮಬಾಣದಂತೆ ಎಂದು ಹೇಳಲಾಗುತ್ತದೆ. ನಾಲ್ಕೈದು ಕರಿಬೇವಿನ ಸೊಪ್ಪುಗಳನ್ನು ತೊಳೆದು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ  ಅಡಾನ್ನು ಜಗಿದು ತಿನ್ನುವುದರಿಂದ ಶೀಘ್ರದಲ್ಲೇ ನಿಮಗೆ ಫಲಿತಾಂಶ ಗೋಚರಿಸುತ್ತದೆ. 


ಇದನ್ನೂ ಓದಿ- ಧೂಮಪಾನ ಮಾಡುವ ಸ್ಥಳಗಳಲ್ಲಿ ನೀವು ನಿಲ್ಲುತ್ತೀರಾ..? ಹಾಗಾದರೆ ಈ ಸ್ಟೋರಿ ನೋಡಿ...


ಕೊತ್ತಂಬರಿ ಸೊಪ್ಪು:
ಆಹಾರದ ರುಚಿ ಹೆಚ್ಚಿಸುವ ಕೊತ್ತಂಬರಿ ಸೊಪ್ಪು ಫೈಬರ್ ನಿಂದ ಸಮೃದ್ಧವಾಗಿದೆ. ಕೊತ್ತಂಬರಿ ಸೊಪ್ಪಿನ ಬಳಕೆಯಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಜೊತೆಗೆ ಆರೋಗ್ಯಕರ ತೂಕ ಇಳಿಕೆಗೂ ಪ್ರಯೋಯಜನಕಾರಿಯಾಗಿದೆ. 


ರೋಸ್ಮರಿ: 
ರೋಸ್ಮರಿಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ, ಇದು ಔಷಧೀಯ ಗುಣಗಳಿಂದ ಭರಿತವಾಗಿದ್ದು, ತೂಕ ಇಳಿಕೆಯಲ್ಲಿ ಸಹಕಾರಿಯಾಗಿದೆ. ಅಷ್ಟೇ ಅಲ್ಲ, ಈ ಸೊಪ್ಪು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಮೂಲಕ ಮಧುಮೇಹದಿಂದ ರಕ್ಷಿಸುತ್ತದೆ. 


ಓರೆಗಾನೊ:
ಓರೆಗಾನೊವನ್ನು ಸಾಮಾನ್ಯವಾಗಿ ಇಟಾಲಿಯನ್ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಓರೆಗಾನೊ ಪಾಲಿಫಿನಾಲ್ಗಳು ಮತ್ತು ಫ್ಲೇವನಾಯ್ಡ್ಗಳಂತಹ ಜೈವಿಕ ಸಕ್ರಿಯ ಸಂಯುಕ್ತಗಳನ್ನು ಹೊಂದಿದ್ದು, ನಿಯನಿತವಾಗಿ ಇದನ್ನು ಬಳಸುವುದರಿಂದ ಶೀಘ್ರದಲ್ಲೇ ತೂಕ ಕಳೆದುಕೊಳ್ಳಬಹುದು. 


ಇದನ್ನೂ ಓದಿ- ಬಳೆ ಕೇವಲ ಶೃಂಗಾರ ಸಾಧನವಲ್ಲ! ಇದು ಕೈಯ್ಯಲ್ಲಿದ್ದರೆ ಆರೋಗ್ಯಕ್ಕಿದೆ ಲಾಭ!


ಪಾರ್ಸ್ಲಿ:
ಪಾರ್ಸ್ಲಿ ಎಲೆಗಳು ಕೊಬ್ಬನ್ನು ಸುಡುವ ಮೂಲಿಕೆಯಾಗಿದೆ. ಪಾರ್ಸ್ಲಿ ಸೇವನೆಯು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳುವಲ್ಲಿಯೂ ಮಹತ್ವದ ಪಾತ್ರವಹಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.