ಬೆಳ್ಳುಳ್ಳಿ ಸಿಪ್ಪೆ ಪ್ರಯೋಜನಗಳು: ಭಾರತೀಯ ಅಡುಗೆ ಮನೆಗಳಲ್ಲಿ ಬೆಳ್ಳುಳ್ಳಿ ಒಂದು ಪ್ರಮುಖ ಆಹಾರ ಪದರ್ಥವಾಗಿದೆ. ಬೆಳ್ಳುಳ್ಳಿ ಅಡುಗೆಯ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ವರದಾನವಾಗಿದೆ. ಸಾಮಾನ್ಯವಾಗಿ, ನಾವು ಬೆಳ್ಳುಳ್ಳಿ ಬಳಸುವಾಗ ಅದರ ಸಿಪ್ಪೆಯನ್ನು ನಿಷ್ಪ್ರಯೋಜಕವೆಂದು ಪರಿಗಣಿಸಿ, ಅದನ್ನು ಡಸ್ಟ್‌ಬಿನ್‌ಗೆ ಎಸೆಯುತ್ತೇವೆ. ಆದರೆ, ಬೆಳ್ಳುಳ್ಳಿ ಸಿಪ್ಪೆಯಿಂದಲೂ ಸಹ ಆರೋಗ್ಯಕ್ಕೆ ಅಪಾರ ಪ್ರಯೋಜನಗಳಿವೆ ಎಂದು ನಿಮಗೆ ತಿಳಿದಿದೆಯೇ? ಬೆಳ್ಳುಳ್ಳಿ ಸಿಪ್ಪೆ ನಮಗೆ ಹೇಗೆ ಪ್ರಯೋಜನಕಾರಿ ಆಗಿದೆ? ಅದನ್ನು ಯಾವ ರೀತಿ ಬಳಸಬೇಕು ಎಂದು ತಿಳಿಯೋಣ... 


COMMERCIAL BREAK
SCROLL TO CONTINUE READING

ಬೆಳ್ಳುಳ್ಳಿ ಸಿಪ್ಪೆಗಳ ಪ್ರಯೋಜನಗಳು:- 
ಬೆಳ್ಳುಳ್ಳಿಯ ಸಿಪ್ಪೆಗಳು ಆಂಟಿ-ವೈರಲ್, ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಲಕ್ಷಣಗಳಿಂದ ತುಂಬಿವೆ. ಈ ಸಿಪ್ಪೆಗಳನ್ನು ತರಕಾರಿಗಳು ಮತ್ತು ಸೂಪ್‌ಗಳಿಗೆ ಸೇರಿಸುವ ಮೂಲಕ ಬೇಯಿಸಬಹುದು, ಇದು ಆಹಾರದ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ.


ಚರ್ಮಕ್ಕೆ ಬಹಳ ಉಪಯೋಗ:
ಬೆಳ್ಳುಳ್ಳಿ ಸಿಪ್ಪೆಗಳು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವುದರಿಂದ, ಅವು ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗುತ್ತವೆ. ಬೆಳ್ಳುಳ್ಳಿ ಸಿಪ್ಪೆಯು ತುರಿಕೆ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ಪೀಡಿತ ಪ್ರದೇಶಗಳಲ್ಲಿ ಬೆಳ್ಳುಳ್ಳಿ ಮತ್ತು ಅದರ ಸಿಪ್ಪೆ ಸುಲಿದ ನೀರನ್ನು ಅನ್ವಯಿಸಬೇಕು. ಇದು ಮೊಡವೆಗಳನ್ನೂ ಹೋಗಲಾಡಿಸುತ್ತದೆ.


ಇದನ್ನೂ ಓದಿ- Pillow Benefits: ಕಾಲುಗಳ ಕೆಳಗೆ ದಿಂಬಿಟ್ಟು ಮಲಗುವುದರಿಂದ ಸಿಗುತ್ತೆ ಈ ದೊಡ್ಡ ಪ್ರಯೋಜನ


ಬೆಳ್ಳುಳ್ಳಿ ಸಿಪ್ಪೆ ಕೂದಲಿಗೂ ಪ್ರಯೋಜನಕಾರಿ:
ಬೆಳ್ಳುಳ್ಳಿಯ ಸಿಪ್ಪೆಯನ್ನು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ತಲೆಯಲ್ಲಿ ಹೊಟ್ಟು ಸಮಸ್ಯೆ ಇದ್ದರೆ, ನೀರು ಬೆರೆಸಿ ಬೆಳ್ಳುಳ್ಳಿ ಸಿಪ್ಪೆಯ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ, ಅದು ತಲೆಹೊಟ್ಟು ಮತ್ತು ಹೇನುಗಳನ್ನು ನಿವಾರಿಸುತ್ತದೆ. ಬೇಕಿದ್ದರೆ ಬೆಳ್ಳುಳ್ಳಿ ಸಿಪ್ಪೆಯ ನೀರನ್ನು ಕುದಿಸಿ ಕೂದಲಿಗೆ ಹಚ್ಚಿಕೊಳ್ಳಬಹುದು.


ಅಸ್ತಮಾ ರೋಗಿಗಳಿಗೆ ವರದಾನ:
ನಿಮಗೆ ಅಸ್ತಮಾ ಸಮಸ್ಯೆ ಇದ್ದರೆ ಮೊದಲು ಬೆಳ್ಳುಳ್ಳಿ ಸಿಪ್ಪೆಯನ್ನು ಚೆನ್ನಾಗಿ ರುಬ್ಬಿ ನಂತರ ಜೇನುತುಪ್ಪದೊಂದಿಗೆ ಬೆರೆಸಿ ಬೆಳಿಗ್ಗೆ ಮತ್ತು ಸಂಜೆ ಸೇವಿಸಿ. ಇದರಿಂದ ರೋಗದಿಂದ ಮುಕ್ತಿ ದೊರೆಯುತ್ತದೆ.


ಇದನ್ನೂ ಓದಿ- Pimples: ಮುಖದಲ್ಲಿರುವ ಮೊಡವೆ ಕಲೆ ಹೋಗಲಾಡಿಸಲು ಈ ಮನೆಮದ್ದು ಪ್ರಯತ್ನಿಸಿ


ಪಾದಗಳಲ್ಲಿ ಊತ ನಿವಾರಿಸಲು:
ಬೆಳ್ಳುಳ್ಳಿ ಸಿಪ್ಪೆಯಿಂದ ಪಾದಗಳ ಊತವೂ ಕಡಿಮೆಯಾಗುತ್ತದೆ. ಇದಕ್ಕಾಗಿ, ಬೆಳ್ಳುಳ್ಳಿಯ ಸಿಪ್ಪೆಗಳನ್ನು ನೀರಿನಲ್ಲಿ ಬೆರೆಸಿ ಅದನ್ನು ಕುದಿಸಿ ಮತ್ತು ಅದರಲ್ಲಿ ಪಾದಗಳನ್ನು ಮುಳುಗಿಸಿ. ಇದರಿಂದ ಶೀಘ್ರ ಪರಿಹಾರ ಸಿಗಲಿದೆ.

https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.