Shani Upay: ಹೊಸ ವರ್ಷಕ್ಕೂ ಮುನ್ನ ಶನಿವಾರ ಸಂಜೆಯೊಳಗೆ ಈ ಉಪಾಯ ಮಾಡಿ! ವರ್ಷವಿಡೀ ಸಂಕಷ್ಟ ನಿಮ್ಮ ಹತ್ತಿರವೂ ಸುಳಿಯಲ್ಲ
Shani Dev 2023 Astrology In Kannada: ನಾಳೆ ವರ್ಷ 2022ರ ಕೊನೆಯ ಶನಿವಾರವಿದ್ದು, ತುಂಬಾ ವಿಶೇಷವಾಗಿದೆ. ಈ ಬಾರಿಯ ಶನಿವಾರದಂದು ಕೆಲ ಉಪಾಯಗಳನ್ನು ಮಾಡಿದರೆ, ಶನಿ ದೇವ ತುಂಬಾ ಪ್ರಸನ್ನನಾಗಲಿದ್ದಾನೆ ಮತ್ತು ನೀವು ವರ್ಷವಿಡಿ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುವಿರಿ.
Shani Dev Upay: 2022 ರ ಕೊನೆಯ ದಿನ ಅಂದರೆ ಡಿಸೆಂಬರ್ 31 ಶನಿವಾರ ಬರುತ್ತದೆ. ಈ ದಿನದಂದು ಶನಿಗೆ ಸಂಬಂಧಿಸಿದ ಕೆಲವು ಉಪಾಯಗಳನ್ನು ಮಾಡುವುದರಿಂದ ಮುಂಬರುವ ಹೊಸ ವರ್ಷವು ನಿಮಗೆ ಸಂತೋಷವನ್ನು ನೀಡುತ್ತದೆ. ಹೊಸ ವರ್ಷದ ಮುನ್ನಾ ದಿನದಂದು ಮಾಡಿದ ಈ ಶನಿ ಪರಿಹಾರಗಳು ನಿಮ್ಮನ್ನು ಎಲ್ಲಾ ತೊಂದರೆಗಳು ಮತ್ತು ದುಃಖಗಳಿಂದ ರಕ್ಷಿಸುತ್ತದೆ. ಇದರಿಂದ ನಿಮ್ಮ ಮಲಗಿಕೊಂಡ ಭಾಗ್ಯ ಕೂಡ ಎಚ್ಚೆತ್ತುಕೊಳ್ಳುತ್ತದೆ ಮತ್ತು 2023 ರಲ್ಲಿ ನೀವು ಭಾರಿ ಯಶಸ್ಸನ್ನು ಪಡೆಯುವಿರಿ.
ಸಾಡೆಸಾತಿಯಿಂದ ಪರಿಹಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವನ ಸಾಡೆಸಾತಿ ಹಾಗೂ ಎರಡೂವರೆ ವರ್ಷಗಳ ಕಾಟ ತುಂಬಾ ಕಷ್ಟ ಕೊಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಶನಿ ದೇವರನ್ನು ಮೆಚ್ಚಿಸಲು ಉಪಾಯಗಳನ್ನು ತೆಗೆದುಕೊಳ್ಳಬೇಕು. ಶನಿಯ ಕೃಪೆಯಿಂದ ಎಲ್ಲಾ ತೊಂದರೆಗಳು ದೂರಾಗಿ ಪ್ರಗತಿಯ ಹಾದಿ ಸುಗಮಗೊಳ್ಳುತ್ತವೆ. 2023 ರ ಆರಂಭದಲ್ಲಿಯೇ ಶನಿಯ ರಾಶಿ ಪರಿವರ್ತನೆ ಸಂಭವಿಸಲಿದೆ, ಇಂತಹ ಪರಿಸ್ಥಿತಿಯಲ್ಲಿ ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ಶನಿಯ ಸಾಡೇಸಾತಿ ಮತ್ತು ಕರ್ಕ ಮತ್ತು ವೃಶ್ಚಿಕ ರಾಶಿಯ ಮೇಲೆ ಶನಿ ಎರಡೂವರೆ ವರ್ಷಗಳ ಕಾಟ ಆರಂಭಗೊಳ್ಳಲಿದೆ. ಹೀಗಾಗಿ, ಶನಿಗೆ ಸಂಬಂಧಿಸಿದ ಈ ಪರಿಹಾರಗಳನ್ನು ಈ ಜನರು ಮಾಡಬೇಕು. ಇದಕ್ಕಾಗಿ, ನಾಳೆ 31 ಡಿಸೆಂಬರ್ 2022, ಶನಿವಾರ ಸಂಜೆ, ಶನಿ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ. ಎಣ್ಣೆಯಲ್ಲಿ ಕಪ್ಪು ಎಳ್ಳನ್ನು ಹಾಕಲು ಮರೆಯದಿರಿ. ಇದರ ನಂತರ ಶನಿ ಸ್ತೋತ್ರ ಪಠಿಸಿ. ನಿಮಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೂ, ಶನಿ ದೇವನನ್ನು ಧ್ಯಾನಿಸಿ ಮತ್ತು ಶನಿ ಸ್ತೋತ್ರವನ್ನು ಪಠಿಸಿ. ಇದು ಹೊಸ ವರ್ಷದಲ್ಲಿ ಸಂತೋಷ, ಸಮೃದ್ಧಿ, ಯಶಸ್ಸು ಮತ್ತು ಸಂಪತ್ತನ್ನು ನೀಡಲಿದೆ.
ಇದನ್ನೂ ಓದಿ-Chanakya Niti: ಇಂತಹ ಪತಿ ಇದ್ದರೆ, ಮನದಾಳದಿಂದ ದ್ವೇಷಿಸುತ್ತಾರೆ ಪತ್ನಿಯರು
ಶ್ರೀ ಶನಿ ಸ್ತೋತ್ರಂ - ದಶರಥ ಕೃತಂ
ನಮಃ ಕೃಷ್ಣಾಯ ನೀಲಾಯ ಶಿಖಿಖಂಡನಿಭಾಯ ಚ
ನಮೋ ನೀಲಮಧೂಕಾಯ ನೀಲೋತ್ಪಲನಿಭಾಯ ಚ (1)
ನಮೋ ನಿರ್ಮಾಂಸದೇಹಾಯ ದೀರ್ಘಶ್ರುತಿಜಟಾಯ ಚ
ನಮೋ ವಿಶಾಲನೇತ್ರಾಯ ಶುಷ್ಕೋದರ ಭಯಾನಕ (2)
ನಮಃ ಪೌರುಷಗಾತ್ರಾಯ ಸ್ಥೂಲರೋಮಾಯ ತೇ ನಮಃ
ನಮೋ ನಿತ್ಯಂ ಕ್ಷುಧಾರ್ತಾಯ ನಿತ್ಯತೃಪ್ತಾಯ ತೇ ನಮಃ (3)
ನಮೋ ಘೋರಾಯ ರೌದ್ರಾಯ ಭೀಷಣಾಯ ಕರಾಳಿನೇ
ನಮೋ ದೀರ್ಘಾಯ ಶುಷ್ಕಾಯ ಕಾಲದಂಷ್ಟ್ರ ನಮೋಸ್ತು ತೇ (4)
ನಮಸ್ತೇ ಘೋರರೂಪಾಯ ದುರ್ನಿರೀಕ್ಷ್ಯಾಯ ತೇ ನಮಃ
ನಮಸ್ತೇ ಸರ್ವಭಕ್ಷಾಯ ವಲೀಮುಖ ನಮೋಸ್ತು ತೇ (5)
ಸೂರ್ಯಪುತ್ತ್ರ ನಮಸ್ತೇ ಸ್ತು ಭಾಸ್ವರೋಭಯದಾಯಿನೇ
ಅಧೋದೃಷ್ಟೇ ನಮಸ್ತೇ ಸ್ತು ಸಂವರ್ತಕ ನಮೋಸ್ತು ತೇ (6)
ನಮೋ ಮಂದಗತೇ ತುಭ್ಯಂ ನಿಷ್ಪ್ರಭಾಯ ನಮೋನಮಃ
ತಪಸಾ ಜ್ಞಾನದೇಹಾಯ ನಿತ್ಯಯೋಗರತಾಯ ಚ (7)
ಜ್ಞಾನಚಕ್ಷುರ್ನಮಸ್ತೇ ಸ್ತು ಕಾಶ್ಯಪಾತ್ಮಜಸೂನವೇ
ತುಷ್ಟೋ ದದಾಸಿ ರಾಜ್ಯಂ ತ್ವಂ ಕ್ರುದ್ಧೋ ಹರಸಿ ತತ್ ಕ್ಷಣಾತ್ (8)
ದೇವಾಸುರಮನುಷ್ಯಾಶ್ಚ ಸಿದ್ಧವಿದ್ಯಾಧರೋರಗಾಃ
ತ್ವಯಾವಲೋಕಿತಾಸ್ಸೌರೇ ದೈನ್ಯಮಾಶುವ್ರಜಂತಿತೇ (9)
ಬ್ರಹ್ಮಾ ಶಕ್ರೋಯಮಶ್ಚೈವ ಮುನಯಃ ಸಪ್ತತಾರಕಾಃ
ರಾಜ್ಯಭ್ರಷ್ಟಾಃ ಪತಂತೀಹ ತವ ದೃಷ್ಟ್ಯಾವಲೋಕಿತಃ (10)
ತ್ವಯಾ ವಲೋಕಿತಾಸ್ತೇ ಪಿ ನಾಶಂ ಯಾಂತಿ ಸಮೂಲತಃ
ಪ್ರಸಾದಂ ಕುರು ಮೇ ಸೌರೇ ಪ್ರಣತ್ವಾಹಿತ್ವಮರ್ಥಿತಃ (11)
ಇದನ್ನೂ ಓದಿ-Vastu Tips 2023: ಮನೆಯಲ್ಲಿನ ಗಡಿಯಾರದ ದಿಕ್ಕು ಅಷ್ಟೇ ಅಲ್ಲ ಅದರ ಬಣ್ಣ ಕೂಡ ಸದಸ್ಯರ ಮೇಲೆ ಪ್ರಭಾವ ಬೀರುತ್ತದೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.