Vastu Tips 2023: ಮನೆಯಲ್ಲಿನ ಗಡಿಯಾರದ ದಿಕ್ಕು ಅಷ್ಟೇ ಅಲ್ಲ ಅದರ ಬಣ್ಣ ಕೂಡ ಸದಸ್ಯರ ಮೇಲೆ ಪ್ರಭಾವ ಬೀರುತ್ತದೆ

Vastu Tips Related To Wall Clock: ಮನೆಯ ಗೋಡೆಯ ಮೇಲಿರುವ ಗಡಿಯಾರ ಕೂಡ ಮನೆಯ ಸದಸ್ಯರ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಹೀಗಾಗಿ ಗಡಿಯಾರವನ್ನು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಸರಿಯಾದ ದಿಕ್ಕಿನಲ್ಲಿ ಅಳವಡಿಸಬೇಕು. ಇದಲ್ಲದೆ ಗಡಿಯಾರದ ಬಣ್ಣ ಹಾಗೂ ಆಕಾರದ ಕುರಿತು ಕೂಡ ವಿಶೇಷ ಗಮನಹರಿಸಬೇಕು.   

Written by - Nitin Tabib | Last Updated : Dec 29, 2022, 09:15 PM IST
  • ಹೊಸ ವರ್ಷ 2023 ರಲ್ಲಿ, ನೀವು ಕೂಡ ನಿಮ್ಮ ಮನೆಗೆ ಹೊಸ ಗಡಿಯಾರವನ್ನು ಖರೀದಿಸಲು ಬಯಸುತ್ತಿದ್ದರೆ,
  • ಗಡಿಯಾರದ ಬಣ್ಣ ಮತ್ತು ಗಾತ್ರವನ್ನು ನೋಡಿಕೊಳ್ಳಿ
  • ಮತ್ತು ವಾಸ್ತು ಪ್ರಕಾರ ಅದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ.
Vastu Tips 2023: ಮನೆಯಲ್ಲಿನ ಗಡಿಯಾರದ ದಿಕ್ಕು ಅಷ್ಟೇ ಅಲ್ಲ ಅದರ ಬಣ್ಣ ಕೂಡ ಸದಸ್ಯರ ಮೇಲೆ ಪ್ರಭಾವ ಬೀರುತ್ತದೆ title=
Vastu Tips

Vastu Tips For Wall Clock: ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿಯೂ ಕೂಡ ಗಡಿಯಾರ ಇರುತ್ತದೆ. ಗಡಿಯಾರ ಕೇವಲ ಸಮಯವನ್ನು ಮಾತ್ರ ಹೇಳುವುದಿಲ್ಲ, ಆದರೆ ಮನೆಯ ಜನರ ಸುಖ-ದುಃಖಗಳು ಮತ್ತು ಶುಭ ಮತ್ತು ಅಶುಭ ಸಮಯಗಳು ಕೂಡ ಇದಕ್ಕೆ ಸಂಬಂಧಿಸಿವೆ. ಗಡಿಯಾರವನ್ನು ಕೇವಲ ಸಮಯವನ್ನು ಹೇಳುವ ಒಂದು ವಸ್ತು ಎಂದು ಭಾವಿಸಿ ನೀವು ಅಷ್ಟಕ್ಕೇ ಸೀಮಿತಗೊಳಿಸಿದರೆ, ನೀವು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ಗಡಿಯಾರವನ್ನು ಖರೀದಿಸುವಾಗ ಮತ್ತು ಗಡಿಯಾರವನ್ನು ಮನೆಯಲ್ಲಿ ಇಡುವಾಗ, ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸಿದರೆ ಯಾವಾಗಲು ಉತ್ತಮ.

ಹೊಸ ವರ್ಷ 2023 ರಲ್ಲಿ, ನೀವು ಕೂಡ ನಿಮ್ಮ ಮನೆಗೆ ಹೊಸ ಗಡಿಯಾರವನ್ನು ಖರೀದಿಸಲು ಬಯಸುತ್ತಿದ್ದರೆ, ಗಡಿಯಾರದ ಬಣ್ಣ ಮತ್ತು ಗಾತ್ರವನ್ನು ನೋಡಿಕೊಳ್ಳಿ ಮತ್ತು ವಾಸ್ತು ಪ್ರಕಾರ ಅದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ. ಈ ಕಾರಣದಿಂದಾಗಿ, ಮನೆಯಲ್ಲಿ ಸಕಾರಾತ್ಮಕತೆಯ ಸಂಚಾರ ಉಂಟಾಗುತ್ತದೆ ಮತ್ತು ಗಡಿಯಾರದ ಜೊತೆಗೆ, ಕುಟುಂಬ ಸದಸ್ಯರಿಗೂ ಉತ್ತಮ ಸಮಯ ಆರಂಭವಾಗಲಿದೆ. ವಾಸ್ತು ಪ್ರಕಾರ, ಗಡಿಯಾರದ ಸರಿಯಾದ ದಿಕ್ಕು, ಬಣ್ಣ ಮತ್ತು ಆಕಾರದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ.

ವಾಸ್ತು ಪ್ರಕಾರ ಗಡಿಯಾರದ ದಿಕ್ಕು ಹೇಗಿರಬೇಕು?
>> ಗಡಿಯಾರವನ್ನು ಇರಿಸಲು ಯಾವಾಗಲು ಪೂರ್ವ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.
>> ಇದರೊಂದಿಗೆ, ನೀವು ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಗಡಿಯಾರ ಇಡಬಹುದು.
>> ಆದರೆ ಗಡಿಯಾರವನ್ನು ಅಪ್ಪಿತಪ್ಪಿಯೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು.
>> ಮನೆಯ ಬಾಲ್ಕನಿ ಅಥವಾ ವರಾಂಡದಲ್ಲಿ ಗಡಿಯಾರವನ್ನು ಹಾಕಬೇಡಿ.
>> ಗಡಿಯಾರವನ್ನು ಬಾಗಿಲಿನ ಮೇಲೆ ಇಡುವುದನ್ನು ತಪ್ಪಿಸಿ.

ವಾಸ್ತು ಪ್ರಕಾರ ಗಡಿಯಾರದ ಬಣ್ಣ ಹೇಗಿರಬೇಕು
>> ಮನೆಯಲ್ಲಿ ಕಿತ್ತಳೆ ಅಥವಾ ಕಡು ಹಸಿರು ಗಡಿಯಾರವನ್ನು ಇಟ್ಟುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ.
>> ನೀಲಿ ಮತ್ತು ಕಪ್ಪು ಬಣ್ಣದ ಗಡಿಯಾರಗಳನ್ನು ಮನೆಗೆ ಅಶುಭವೆಂದು ಪರಿಗಣಿಸಲಾಗುತ್ತದೆ.
>> ಮನೆಯಲ್ಲಿ ಗಾಢ ಕೆಂಪು ಬಣ್ಣದ ಗಡಿಯಾರವನ್ನು ಇರಿಸುವುದನ್ನು ಕೂಡ ತಪ್ಪಿಸಬೇಕು.
>> ಹಳದಿ, ಬಿಳಿ ಮತ್ತು ತಿಳಿ ಕಂದು ಗಡಿಯಾರಗಳನ್ನು ಮನೆಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
>> ನೀವು ಗಡಿಯಾರವನ್ನು ಉತ್ತರ ಗೋಡೆಯಲ್ಲಿ ಇರಿಸುತ್ತಿದ್ದರೆ, ಲೋಹೀಯ ಬೂದು ಅಥವಾ ಬಿಳಿ ಬಣ್ಣದ ಗಡಿಯಾರವನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ.
>> ಪೂರ್ವ ಗೋಡೆಯಲ್ಲಿ ಹಾಕಲು, ಮರದ ಗಡಿಯಾರ ಅಥವಾ ಒಂದೇ ರೀತಿಯ ಬಣ್ಣಗಳ ಗಡಿಯಾರವನ್ನು ಹಾಕಿ.
>> ಗಡಿಯಾರಕ್ಕೆ ಬಣ್ಣಗಳನ್ನು ಆಯ್ಕೆಮಾಡುವಾಗ, ತುಂಬಾ ತಿಳಿ ಬಣ್ಣಗಳನ್ನು ಆರಿಸಿದರೆ ಅದು ಉತ್ತಮವಾಗಿರುತ್ತದೆ. ಮನೆಯಲ್ಲಿ ಗಾಢ ಬಣ್ಣದ ಗಡಿಯಾರ ಹಾಕುವುದನ್ನು ತಪ್ಪಿಸಬೇಕು.

ಇದನ್ನೂ ಓದಿ-Chanakya Niti: ಇಂತಹ ಪತಿ ಇದ್ದರೆ, ಮನದಾಳದಿಂದ ದ್ವೇಷಿಸುತ್ತಾರೆ ಪತ್ನಿಯರು

ವಾಸ್ತು ಶಾಸ್ತ್ರದ ಪ್ರಕಾರ ಗಡಿಯಾರದ ಗಾತ್ರ
>> ಮನೆಯಲ್ಲಿ ಎಂಟು ಭುಜದ ಗಡಿಯಾರವನ್ನು ಇರಿಸುವುದರಿಂದ ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ ಮತ್ತು ಆಂತರಿಕ ಘರ್ಷಣೆಗಳು ದೂರಾಗುತ್ತವೆ.
ಆರು ಭುಜಗಳನ್ನು ಹೊಂದಿರುವ ಗಡಿಯಾರವನ್ನು ಮನೆಗೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನೀವು ಅದನ್ನು ಲಿವಿಂಗ್ ರೂಮ್ ನಲ್ಲಿ ಇರಿಸಬಹುದು.
>> ದುಂಡಗಿನ ಆಕಾರದ ಗಡಿಯಾರವು ತುಂಬಾ ಮಂಗಳಕರವಾಗಿದೆ. ನೀವು ಅದನ್ನು ಮನೆಯ ಯಾವುದೇ ಕೋಣೆಯಲ್ಲಿ ಇರಿಸಬಹುದು. ಅದರಲ್ಲೂ ಸ್ಟಡಿ ರೂಂನಲ್ಲಿ ಅಳವಡಿಸಿ, ಅಧ್ಯಯನದಲ್ಲಿ ಗಮನ ಹೆಚ್ಚಾಗುತ್ತದೆ.
>> ಲಂಬಕವನ್ನು ಹೊಂದಿರುವ ಗಡಿಯಾರವನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ಮನೆಗೆ ಶ್ರೇಯಸ್ಸನ್ನು ತರುತ್ತದೆ. ನೀವು ಅದನ್ನು ಮನೆಯ ಡ್ರಾಯಿಂಗ್ ರೂಮಿನಲ್ಲಿ ಇರಿಸಬೇಕು.
>> ದಂಪತಿಗಳ ಕೋಣೆಯಲ್ಲಿ ಹೃದಯ ಆಕಾರದ ಗಡಿಯಾರವನ್ನು ಹಾಕುವುದು ತುಂಬಾ ಮಂಗಳಕರ. ಇದರಿಂದ ಗಂಡ-ಹೆಂಡತಿ ನಡುವೆ ಪ್ರೀತಿ ಹೆಚ್ಚುತ್ತದೆ.
>> ವಾಸ್ತು ಶಾಸ್ತ್ರದ ಪ್ರಕಾರ, ಅಂಡಾಕಾರದ ಗಡಿಯಾರವು ಅತ್ಯಂತ ಮಂಗಳಕರವಾಗಿದೆ. ಇದು ಪರಸ್ಪರ ಭಿನ್ನಾಭಿಪ್ರಾಯಗಳನ್ನು ನಿವಾರಿಸುತ್ತದೆ ಮತ್ತು ಶ್ರೇಯಸ್ಸನ್ನು ತರುತ್ತದೆ.
>>  ಅಪ್ಪಿತಪ್ಪಿಯೂ ಕೂಡ ಮನೆಯಲ್ಲಿ ತ್ರಿಕೋನಾಕಾರದ ಗಡಿಯಾರವನ್ನು ಹಾಕಬೇಡಿ. ಈ ಆಕಾರದ ಗಡಿಯಾರವು ಮನೆಯಲ್ಲಿ ಅತ್ಯಂತ ವೇಗವಾಗಿ ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಅನಗತ್ಯ ಜಗಳಗಳು ನಡೆಯುತ್ತದೆ. ಇದರೊಂದಿಗೆ ಇದು ಪ್ರಗತಿಗೂ ಕೂಡ ಮಾರಕವಾಗಿದೆ.

ಇದನ್ನೂ ಓದಿ-Paush Purnima 2023: ವರ್ಷದ ಮೊದಲ ಹುಣ್ಣಿಮೆಯ ದಿನ 3 ಶುಭಯೋಗಗಳ ನಿರ್ಮಾಣ, ಲಕ್ಷ್ಮಿಯ ಕೃಪಾವೃಷ್ಟಿಗಾಗಿ ಈ ಕೆಲಸ ಮಾಡಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News