Makara Sankranti 2024 : ಹಿಂದೂ ಧರ್ಮದಲ್ಲಿ ತಮ್ಮದೇ ಆದ ಮಹತ್ವವನ್ನು ಹೊಂದಿರುವ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತದೆ.ವರ್ಷದ ಮೊದಲ ತಿಂಗಳಿಂದಲೇ ಹಬ್ಬಗಳು ಆರಂಭವಾಗುತ್ತವೆ. ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಮಕರ ಸಂಕ್ರಾಂತಿಯನ್ನು ಜನವರಿ 15 ರಂದು ಆಚರಿಸಲಾಗುತ್ತದೆ.ಈ ದಿನ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.   ಮಕರ ಸಂಕ್ರಾಂತಿಯಿಂದ ವಸಂತ ಪ್ರಾರಂಭವಾಗುತ್ತದೆ.


COMMERCIAL BREAK
SCROLL TO CONTINUE READING

ಮಕರ ಸಂಕ್ರಾಂತಿಯಂದು ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹೊಂದುವುದು ಸಾಧ್ಯವಾಗುತ್ತದೆ.  ಇದಲ್ಲದೆ, ಈ ಕ್ರಮಗಳನ್ನು ಅನುಸರಿಸುವ ಮೂಲಕ ಲಕ್ಷ್ಮೀ ದೇವಿಯನ್ನು ಮೆಚ್ಚಿಸಬಹುದು. 


ಇದನ್ನೂ ಓದಿ : Makara Sankranthi Food : ಈ ರೋಗಗಳನ್ನು ನಿವಾರಿಸುವ ಸಲುವಾಗಿಯೇ ಮಕರ ಸಂಕ್ರಾಂತಿ ದಿನ ಈ ಆಹಾರಗಳನ್ನು ಸೇವಿಸಬೇಕು


ಪವಿತ್ರ ನದಿಗಳಲ್ಲಿ ಸ್ನಾನ :
ಮಕರ ಸಂಕ್ರಾಂತಿಯಂದು ಗಂಗಾ ಸ್ನಾನಕ್ಕೆ ಹೆಚ್ಚಿನ ಮಹತ್ವವಿದೆ.ಈ ದಿನದಂದು ಗಂಗಾ ಸ್ನಾನ ಮಾಡುವುದರಿಂದ ಪಾಪಗಳು ನಾಶವಾಗುತ್ತವೆ ಮತ್ತು ಜೀವನ   ಪಾವಿತ್ರ್ಯತೆ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಗಂಗಾ ನದಿಯ ಹೊರತಾಗಿ, ನೀವು ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡಬಹುದು.ಇನ್ನು ಈ ದಿನ ಹೊರಗೆ ಹೋಗುವುದು ಸಾಧ್ಯವಾಗದಿದ್ದರೆ, ಮನೆಯಲ್ಲಿಯೇ ಗಂಗಾಜಲವನ್ನು ಬಳಸಬಹುದು. 


ಅದೃಷ್ಟ ಪಡೆಯಲು : 
ಮಕರ ಸಂಕ್ರಾಂತಿಯಂದು ಕೆಲವು ಕ್ರಮಗಳನ್ನು ಅನುಸರಿಸುವ ಮೂಲಕ ಅದೃಷ್ಟ ಸದಾ ನಿಮ್ಮ ಜೊತೆಗಿರುತ್ತದೆ. ಈ ದಿನ ನೀವು ಹಸುವಿಗೆ ಹಸಿರು ಮೇವು ನೀಡಬೇಕು. ಹಸುಗಳಲ್ಲಿ ದೇವರು ಮತ್ತು ದೇವತೆಗಳು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಹೀಗಾಗಿ ಈ ದಿನ ಹಸುವಿಗೆ ಮೇವು ನೀಡುವುದರಿಂದ ಅದೃಷ್ಟ ನಿಮ್ಮ ಕೈ ಹಿಡಿಯುತ್ತದೆ ಎನ್ನುವುದು ನಂಬಿಕೆ. 


ಇದನ್ನೂ ಓದಿ : ಚಳಿಗಾಲದಲ್ಲಿ ಮೊಸರು ಹೆಪ್ಪುಗಟ್ಟುತ್ತಿಲ್ಲವೇ..? ಹಾಗಾದ್ರೆ, ಈ ಟ್ರೀಕ್‌ ಟ್ರೈ ಮಾಡಿ


ಸೂರ್ಯನಿಗೆ ಪ್ರಾರ್ಥನೆ ಸಲ್ಲಿಸುವುದು : 
ಸೂರ್ಯ ದೇವರ ಅನುಗ್ರಹವನ್ನು ಪಡೆಯಲು, ಮಕರ ಸಂಕ್ರಾಂತಿಯಂದು ಈ ಕ್ರಮಗಳನ್ನು ಮಾಡಬೇಕು. ಈ ದಿನ, ಸ್ನಾನದ ನಂತರ, ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಬೇಕು. ನೀರಿನಲ್ಲಿ ಕೆಂಪು ಚಂದನ,ಕೆಂಪು ಹೂವುಗಳು, ಬೆಲ್ಲ ಮತ್ತು ಎಳ್ಳನ್ನು ಬೆರೆಸಿ ಸೂರ್ಯನಿಗೆ ಅರ್ಪಿಸಬೇಕು. 


ಆರ್ಥಿಕ ಪರಿಸ್ಥಿತಿ ಬಲವಾಗಿರುತ್ತದೆ :
ಮಕರ ಸಂಕ್ರಾಂತಿಯ ದಿನದಂದು ದಾನ ಮಾಡುವುದು ಅತ್ಯಂತ ಮಂಗಳಕರ. ಈ ದಿನದಂದು, ಎಳ್ಳು, ಹೊದಿಕೆಗಳು, ಕೆಂಪು ಬಟ್ಟೆ, ಕೆಂಪು ಸಿಹಿತಿಂಡಿಗಳು, ಕಡಲೆಕಾಯಿಗಳು, ಅಕ್ಕಿ, ಪೊಂಗಲ್, ಬೆಲ್ಲ ಮತ್ತು ಕಪ್ಪು ಉದ್ದು ಇದನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. ಇದರೊಂದಿಗೆ ನಿಮ್ಮ ಆರ್ಥಿಕ ಸ್ಥಿತಿಯು ಯಾವಾಗಲೂ ಉತ್ತಮವಾಗಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.