ಬೆಂಗಳೂರು : ತುಳಸಿಗೆ (Tulsi) ಹಿಂದೂ ಪದ್ದತಿಯಲ್ಲಿ ವಿಶೇಷ ಸ್ಥಾನವಿದೆ. ಪ್ರತೀ ಮನೆಯಂಗಳದಲ್ಲಿ ತುಳಸಿ ಇದ್ದೇ ಇರುತ್ತದೆ. ಅಂಗಳವಿಲ್ಲದೇ ಹೋದರೆ ಬಾಲ್ಕನಿಯಲ್ಲಾದರೂ ತುಳಸಿಯನ್ನಿಟ್ಟು ಪೂಜೆ (Tulsi pooja) ಮಾಡಲಾಗುತ್ತದೆ. ತುಳಸಿಗೆ ನಮ್ಮ ಜೀವನದಲ್ಲಿ ಮಹತ್ವದ ಸ್ಥಾನವಿದೆ. ತುಳಸಿ ಸಸ್ಯದ ಮಹತ್ವದ ಬಗ್ಗೆ ಹಿಂದೂ ಗ್ರಂಥಗಳು ಮತ್ತು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ತುಳಸಿ ವಿಷ್ಣುವಿಗೆ (Lord Vishnu) ಬಹಳ ಪ್ರಿಯ. ತುಳಸಿ ನೆಟ್ಟ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ ಎನ್ನುವುದು ನಂಬಿಕೆ. ತುಳಸಿ ಗಿ ಎಷ್ಟು ಚೆನ್ನಾಗಿ ಬೆಳೆದಿರುತ್ತದೆಯೋ ಆ ಮನೆಯ ಸದಸ್ಯರು ಅಷ್ಟೇ ಅಭಿವೃದ್ಧಿ ಹೊಂದಿದ್ದಾರೆ ಎನ್ನಲಾಗುತ್ತದೆ. ಹಾಗಾಗಿ ತುಳಸೀ ಮಾತೆ ಪ್ರಸನ್ನಳಾದರೆ ಸರ್ವ ದೇವತೆಗಳ ಆಶೀರ್ವಾದವೂ ನಮಗೆ ಲಭಿಸುತ್ತದೆಯಂತೆ. 


COMMERCIAL BREAK
SCROLL TO CONTINUE READING

ಹಾಗಿದ್ದರೆ ತುಳಸಿಯ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು : 
ಭಾನುವಾರ ಮತ್ತು ಏಕಾದಶಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನ ತುಳಸಿ (Tulsi) ಗಿಡಕ್ಕೆ ನೀರು ಹಾಕುತ್ತಿರಬೇಕು. ಧರ್ಮ ಶಾಸ್ತ್ರಗಳ ಪ್ರಕಾರ, ಭಾನುವಾರ ಮತ್ತು ಏಕಾದಶಿ ದಿನದಂದು ತುಳಸೀ ದೇವಿಯೇ ವೃತಾಚಾರಣೆ ಮಾಡುತ್ತಾಳಂತೆ. ಹಾಗಾಗಿ ಈ ಎರಡು ದಿನಗಳಲ್ಲಿ ತುಳಸಿಗೆ ನೀರು (water) ಹಾಕಬೇಕೆಂದಿಲ್ಲ.


ಇದನ್ನೂ ಓದಿ : ಈ ದಿನ ನಡೆಯಲಿದೆ ವರ್ಷದ ಮೊದಲ ಸೂರ್ಯಗ್ರಹಣ : ಇಲ್ಲಿದೆ ಸಂಪೂರ್ಣ ಮಾಹಿತಿ


ಕಾಲಕಾಲಕ್ಕೆ, ತುಳಸಿ ಹೂವುಗಳನ್ನು (Tulsi flower) ತೆಗೆಯುತ್ತಿರಬೇಕು. ಇಲ್ಲದಿದ್ದರೆ ತುಳಸಿ ಸಸ್ಯ ಒಣಗಲು ಆರಂಭಿಸುತ್ತದೆ. ಈ ಹೂವು ತುಳಸಿ ಮಾತೆಯ ಶಿರಭಾಗದಲ್ಲಿರುವುದರಿಂದ ಇದರಿಂದ ತುಳಸಿಗೆ ತೊಂದರೆಯುಂಟಾಗುತ್ತದೆ ಎನ್ನಲಾಗಿದೆ. ಆದರೆ ನೆನಪಿರಲಿ ಭಾನುವಾರ (Sunday) ಮತ್ತು ಏಕಾದಶಿ ದಿನದಂದು ಈ ಕೆಲಸ ಮಾಡಬಾರದು. ಅಲ್ಲದೆ ತುಳಸಿಗೆ ಯಾವತ್ತೂ ಉಗುರುಗಳನ್ನು (Nail) ತಾಕಿಸಬಾರದು. ಹೂವುಗಳನ್ನು ಕೀಳುವಾಗಲೂ ತುಳಸೀ ಗಿಡಕ್ಕೆ ಉಗುರು ತಾಗದಂತೆ ನೋಡಿಕೊಳ್ಳಬೇಕು. 


ಸೂತಕ ಸಂದರ್ಭಗಳಲ್ಲಿ ತುಳಸಿ ಗಿಡದ ಬಳಿ ಹೋಗಬಾರದು ಎನ್ನುತ್ತದೆ ಶಾಸ್ತ್ರ. ತುಳಸಿ ಅಂದರೆ ಅದೊಂದು ಪವಿತ್ರ . ಹಾಗಾಗಿ ಸೂತಕ ಸಂದರ್ಭಗಳಲ್ಲಿ ತುಳಸಿ ಸಸ್ಯವನ್ನು ಮುಟ್ಟಿದರೆ ಅದು ಬಾಡುತ್ತದೆ ಎನ್ನುತ್ತಾರೆ ಹಿರಿಯರು.


ಇದನ್ನೂ ಓದಿ : Vastu Tips: ಮನೆಯಲ್ಲಿ ಅನಗತ್ಯವಾಗಿ ಜಗಳವಾಗುತ್ತಿದೆಯೇ? ಅದನ್ನು ಈ ರೀತಿ ತಪ್ಪಿಸಿ


ತುಳಸಿ ಸಸಿಯಿರುವಲ್ಲಿ ಯಾವತ್ತೂ ಬಟ್ಟೆಗಳನ್ನು ಒಣಗಿಸಬೇಡಿ. ಯಾಕೆಂದರೆ ಒಣಗಲು ಹಾಕಿದ ಬಟ್ಟೆಗಳಿಂದ ತುಳಸಿ ಸಸಿಯ ಮೇಲೆ ನೀರು ಬೀಳುವುದು ಒಳ್ಳೆಯದಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.