Bhringaraja oil : ಇತ್ತೀಚಿನ ದಿನಗಳಲ್ಲಿ ಜನರ ಅಸಮತೋಲಿತ ಜೀವನಶೈಲಿ ಮತ್ತು ಆಹಾರದ ಋಣಾತ್ಮಕ ಪರಿಣಾಮವು ಕೂದಲಿನ ಮೇಲೆ ಬಹಳಷ್ಟು ಬೀರುತ್ತದೆ. ಕೂದಲು ಉದುರುವುದು, ತುದಿ ಸೀಳುವುದು, ತಲೆಹೊಟ್ಟು ಹೀಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಆಯುರ್ವೇದದ ಸಹಾಯವನ್ನು ತೆಗೆದುಕೊಳ್ಳಬಹುದು. ಹೌದು, ಭೃಂಗರಾಜ್ ಅನ್ನು ಆಯುರ್ವೇದದಲ್ಲಿ ಕೂದಲಿಗೆ ವರದಾನವೆಂದು ವಿವರಿಸಲಾಗಿದೆ, ಇದರಲ್ಲಿರುವ ವಿಟಮಿನ್-ಡಿ, ವಿಟಮಿನ್-ಇ, ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳಂತಹ ಪೋಷಕಾಂಶಗಳು ಕೂದಲಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ.  


COMMERCIAL BREAK
SCROLL TO CONTINUE READING

ಹಾಗಾದರೇ ಈ ಭೃಂಗರಾಜ ಎಣ್ಣೆಯನ್ನು ಯಾವರೀತಿ ಬಳಬೇಕು ಮತ್ತು ಅದರಿಂದಾಗುವ ಅನುಕೂಲಗಳೇನು ಎಂಬುದನ್ನು ತಿಳಿಯಲು ಮುಂದೆ ಓದಿ..


ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ
ಆಯುರ್ವೇದದ ಪ್ರಕಾರ, ಈ ಮೂಲಿಕೆಯು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಪೋಷಕಾಂಶಗಳನ್ನು ರಕ್ತದ ಮೂಲಕ ಕೂದಲಿನ ಬೇರುಗಳನ್ನು ತಲುಪಲು ಅನುವು ಮಾಡಿಕೊಟ್ಟು, ಬೇರುಗಳನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬೃಂಗರಾಜ್ ಸಸ್ಯದ ಸಾರಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ.


ಇದನ್ನೂ ಓದಿ-ನಿಮ್ಮ ಮೂಗು ನಿಮ್ಮ ವ್ಯಕ್ತಿತ್ವದ ಗುಟ್ಟು ಹೇಳುತ್ತೇ ನಿಮಗೆ ಗೊತ್ತಾ?


ತಲೆಹೊಟ್ಟು ತೊಡೆದುಹಾಕಲು
ನೀವು ತಲೆಹೊಟ್ಟು ಮತ್ತು ಕೂದಲಿನ ಶುಷ್ಕತೆಯಿಂದ ತೊಂದರೆಗೊಳಗಾಗಿದ್ದರೆ, ಭೃಂಗರಾಜ ಎಣ್ಣೆಯು ಪರಿಣಾಮಕಾರಿ ಪರಿಹಾರವಾಗಿದೆ. ಭೃಂಗರಾಜ ಎಣ್ಣೆಯು ದಪ್ಪವಾಗಿರುತ್ತದೆ ಮತ್ತು ಅದು ನೆತ್ತಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಕೂದಲಿನ ಶುಷ್ಕತೆಯನ್ನು ಹೋಗಲಾಡಿಸಲು ಭೃಂಗರಾಜ ಎಣ್ಣೆಯನ್ನು ಬಳಸುವುದು ಉತ್ತಮ. 


ಕೂದಲು ಉದುರುವಿಕೆಯನ್ನು ತಡೆಯುತ್ತದೆ
ಭೃಂಗರಾಜ ಎಣ್ಣೆಯು ನಿಮ್ಮ ಕೂದಲ ಬುಡಕ್ಕೆ ತಂಪು ನೀಡುವ ಮೂಲಕ ಕೂದಲು ಉದುರುವಿಕೆಯ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ. ಬೇರುಗಳಿಂದ ಕೂದಲನ್ನು ಬಲಪಡಿಸಲು ಇದು ಉತ್ತಮ ಆಯುರ್ವೇದ ವಿಧಾನವಾಗಿದೆ. ಈ ಖನಿಜಯುಕ್ತ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಆಯಾಸ ಮತ್ತು ಒತ್ತಡವನ್ನು ಕಡಿಮೆ ಮಾಡಬಹುದು. ಭೃಂಗರಾಜ್ ಎಣ್ಣೆಯ ಬಳಕೆಯು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ
ಭೃಂಗರಾಜ ಎಣ್ಣೆಯು ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ ಮತ್ತು ಕೂದಲಿನ ನೈಸರ್ಗಿಕ ಸೌಂದರ್ಯವನ್ನು ಕಾಪಾಡುತ್ತದೆ. ಈ ಎಣ್ಣೆಯ ಬಳಕೆಯಿಂದ ಕೂದಲು ಅಕಾಲಿಕವಾಗಿ ಬಿಳಿಯಾಗುವುದಿಲ್ಲ. ಕೂದಲು ಬಿಳಿಯಾಗುವುದನ್ನು ತಡೆಯಲು ಆಮ್ಲಾ ಎಣ್ಣೆಯನ್ನು ಭೃಂಗರಾಜ ಎಣ್ಣೆಗೆ ಬೆರೆಸಿ ನೆತ್ತಿಯ ಮೇಲೆ ಚೆನ್ನಾಗಿ ಮಸಾಜ್ ಮಾಡಿ, ರಾತ್ರಿಯಿಡೀ ಬಿಡಿ. ನಂತರ, ಬೆಳಿಗ್ಗೆ ಕೂದಲನ್ನು ಚೆನ್ನಾಗಿ ತೊಳೆಯಿರಿ. ಇದಲ್ಲದೆ, ಕೂದಲಿಗೆ ಬಣ್ಣ ಹಚ್ಚಲು, ಭೃಂಗರಾಜ ಎಲೆಗಳಿಂದ ತಯಾರಿಸಿದ ಹೇರ್ ಡೈ ಬಳಸಿ. ಇದು ನೈಸರ್ಗಿಕ ರೀತಿಯಲ್ಲಿ ಕೂದಲಿಗೆ ಬಣ್ಣ ನೀಡುತ್ತದೆ. 


ಇದನ್ನೂ ಓದಿ-ನಿಮ್ಮ ಕೈಯಲ್ಲಿ ಈ ರೀತಿಯ ಗೆರೆಗಳಿದ್ದರೆ ನೀವು ಆಗರ್ಭ ಶ್ರೀಮಂತರಾಗುವುದು ಖಂಡಿತ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.