General Knowledge Of Tea: ಪಾನಿ ಪೂರಿ ವಿಶ್ವದಲ್ಲಿ ಅತಿ ಹೆಚ್ಚಾಗಿ ಸೇವಿಸಲ್ಪಡುವ ಪಾನೀಯವಾಗಿದೆ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ, ಇದಾದ ಬಳಿಕ ಎರಡನೇ ಸ್ಥಾನದಲ್ಲಿ ಚಹಾ ಇರುವುದು ಬಹುತೇಕ ಜನರಿಗೆ ತಿಳಿದಿಲ್ಲ. ತನ್ನ ವಿವಿಧ ಪ್ರಕಾರದ ರುಚಿಗಳ ಕಾರಣ ಹಾಗೂ ಲಾಭಗಳ ಕಾರಣ ಇದು ವಿಶ್ವದ ಅತ್ಯಂತ ಪ್ರಚಲಿತ ಪೇಯ ಪದಾರ್ಥಗಳಲ್ಲಿ ಒಂದಾಗಿದೆ. ಅದರಲ್ಲೂ ವಿಶೇಷ ಎಂದರೆ ಇಡೀ ವಿಶ್ವದಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರಕಾರದ ಚಹಾ ಸಿದ್ಧಗೊಳ್ಳುತ್ತವೆ ಎಂದರೆ ನೀವೂ ಕೂಡ ನಿಬ್ಬೇರಗಾಗುವಿರಿ. ಅಂದರೆ, ಚಹಾ ಆಯ್ಕೆಗಳ ಒಂದು ದೊಡ್ಡ ಪಟ್ಟಿಯೇ ಇದ್ದು, ಇವುಗಳಲ್ಲಿ ಬಬಲ್ ಟೀ, ಶಾಮೊಮಿಲ್ ಟೀ, ಗ್ರೀನ್ ಟೀ, ಉಲಂಗ್ ಟೀ, ಐಸ್ ಟೀ, ಸ್ವೀಟ್ ಟೀ, ಹರ್ಬಲ್ ಟೀ ಇತ್ಯಾದಿಗಳು ಶಾಮೀಲಾಗಿವೆ. ಹಾಗಾಗರೇ ಬನ್ನಿ ಚಹಾ ಕುರಿತಾದ ಕೆಲ ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- Holi 2021: ಹೋಳಿ ಹಬ್ಬದ ದಿನ ನಿರ್ಮಾಣಗೊಳ್ಳುತ್ತಿದೆ ಈ ಶುಭಯೋಗ, ಆದರೆ?


- ವಿಶ್ವದ ಅತ್ಯಂತ ದುಬಾರಿ ಟೀ ಹೆಸರು ' ದಾ-ಹೊಂಗ್ ಪಾವೋ'. ಈ ಚಹಾ ಬೆಲೆ ಸುಮಾರು 8 ಕೋಟಿ ರೂ.ಗಳಾಗಿದೆ. ಇದನ್ನು ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ. ಈ ಚಹಾ ಎಲೆಗಳನ್ನು ಚೀನಾದ ಫುಜಿಯಾನ್ ಪ್ರಾಂತ್ಯದಲ್ಲಿರುವ ವುಯಿ ಪರ್ವತಗಳಿಂದ ತರಲಾಗುತ್ತದೆ.
- ಲಿಪ್ಟನ್ ಟೀ (Tea) ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಟೀ ಬ್ರಾಂಡ್ ಆಗಿದೆ. ವಿಶ್ವದ 100 ಕ್ಕೂ ಹೆಚ್ಚು ದೇಶಗಳಲ್ಲಿ ಈ ಬ್ರಾಂಡ್ ಮಾರಾಟ ಮಾಡಲಾಗುತ್ತದೆ. 
- ಅಮೆರಿಕನ್ನರು ವಿಶ್ವದಲ್ಲಿ ಮೊಟ್ಟಮೊದಲ ಬಾರಿಗೆ 1904 ರಲ್ಲಿ ಚಹಾ ಸ್ವಾದವನ್ನು ಸವಿದಿದ್ದಾರೆ. ಸೆಂಟ್ ಲೂಯಿ ವರ್ಡ್ ಫೆಯರ್ ವೇಳೆ ವ್ಯಕ್ತಿಯೊಬ್ಬರುತಮ್ಮ ತೋಟದಲ್ಲಿ ಬೆಳೆದ ಚಹಾ ಸ್ಯಾಂಪಲ್ ಪರಿಚಯಿಸಿದ್ದರು. ಇದಾದ ಬಳಿಕ ಇದೆ ವ್ಯಕ್ತಿ ಚಹಾದಲ್ಲಿ ಐಸ್ ಬೆರೆಸಿ ಐಸ್ ಟೀ ಪರಿಚಯಿಸಿದರು ಎನ್ನಲಾಗುತ್ತದೆ.


ಇದನ್ನೂ ಓದಿ-Kambala: ಕರಾವಳಿ ಜಾನಪದ ಕ್ರೀಡೆ ಕಂಬಳಕ್ಕೆ ಪ್ರವಾಸೋದ್ಯಮ ಇಲಾಖೆ ಉಡುಗೊರೆ

- ಟಿಬೆಟ್ ಜನರು ಶಕ್ತಿ ಹಾಗೂ ಕ್ಯಾಲೋರಿಗಳನ್ನು ಪಡೆಯಲು ಚಹಾದಲ್ಲಿ ಬೆಣ್ಣೆ ಬೆರೆಸಿ ಸೇವಿಸುತ್ತಾರೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ?  ಆದರೆ, ಕೆಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ಅವರು ಈ ರೀತಿಯ ಚಹಾ ಸೇವನೆ ಮಾಡುತ್ತಾರೆ.
- ಟೈಸಿಯೋಗ್ರಾಫಿ ಕುರಿತು ನೀವು ಎಂದಾದರು ಕೇಳಿದ್ದೀರಾ? ಚಹಾ ಎಲೆಗಳ ಬಗ್ಗೆ ಮಾಹಿತಿ ನೀಡುವವರು ಅಥವಾ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ಟೀ ರೀಡಿಂಗ್ ಅನ್ನು ತೈಸಿಯೋಗ್ರಾಫಿ ಎಂದು ಕರೆಯಲಾಗುತ್ತದೆ.
- ಸೊಳ್ಳೆಗಳನ್ನು ಹಾಗೂ ಹುಳು-ಹುಪ್ಪಡಿಗಳನ್ನು ಓಡಿಸಲು ಕೂಡ ನೀವು ಚಹಾ ಎಲೆಗಳನ್ನು ಬಳಸಬಹುದು. 
- ಸನ್ ಬರ್ನ್ ನಿಂದಾಗುವ ಉರಿತದಿಂದ ಮುಕ್ತಿ ಪಡೆಯಲು ಕೂಡ ನೀವು ಚಹಾ ಎಲೆಗಳನ್ನು ಬಳಸಬಹುದು. ಈ ಎಲೆಗಳಲ್ಲಿ ಕಂಡುಬರುವ ಟ್ಯಾನಿನ್ ಉರಿತ ಕಡಿಮೆ ಮಾಡಲು ಸಹಾಯಕವಾಗಿವೆ.


ಇದನ್ನೂ ಓದಿ-Vastu tips: ಸಮಸ್ಯೆಯ ಮೇಲೆ ಸಮಸ್ಯೆ ಎದುರಾಗುತ್ತಿದ್ದರೆ ಚಿಟಕಿ ಅರಿಶಿನ ಬಳಸಿ ನೋಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.