ನವದೆಹಲಿ: Holi 2021 - ವಸಂತ ಋತುವಿನ ಫಾಲ್ಗುಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಹೋಳಿ ಒಂದು ಮಹತ್ವಪೂರ್ಣ ಮಹಾಪರ್ವ ಎಂದೇ ಭಾವಿಸಲಾಗುತ್ತದೆ. ಭಾರತದಲ್ಲಿ ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಹೋಳಿ ದಹನ ಆಚರಿಸಲಾದರೆ, ಎರಡನೇ ದಿನ ಬಣ್ಣಗಳಿಂದ ಹೋಳಿ ಹಬ್ಬ ಆಚರಿಸಲಾಗುತ್ತದೆ. ಫಾಲ್ಗುಣ ಮಾಸದಲ್ಲಿ ಈ ಹಬ್ಬ ಆಚರಿಸಲಾಗುವ ಕಾರಣ ಈ ಹಬ್ಬವನ್ನು ಫಾಲ್ಗುಣಿ ಎಂದೂ ಕೂಡ ಕರೆಯುತ್ತಾರೆ. ಹೋಳಿ ದನಹ ಯಾವ ದಿನ ಹಾಗೂ ಹೋಳಿ ಹಬ್ಬ ಯಾವ ದಿನ ಆಚರಿಸಬೇಕು ಎಂಬುದನ್ನು ಪಂಚಾಂಗದ ಪ್ರಕಾರ ನಿರ್ಧರಿಸಲಾಗುತ್ತದೆ.
ಮಾರ್ಚ್ 28 ರಂದು ಹೋಳಿ ದಹನ When Is Holi Festival
ಹಿಂದೂ ಪಂಚಾಂಗದ ಪ್ರಕಾರ ಈ ಬಾರಿ ಮಾರ್ಚ್ 29 ರ ಸೋಮವಾರ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ ಮತ್ತು ಹೋಳಿ ದಹನ (HoliDahan2021) ಮಾರ್ಚ್ 28 ರ ಭಾನುವಾರ ನಡೆಯಲಿದೆ. ವಿಶ್ವಾದ್ಯಂತ ಭಾರತೀಯರು ಇರುವ ದೇಶಗಳಲ್ಲಿಯೂ ಕೂಡ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.
ಹೋಳಿ ಹಬ್ಬದ ದಿನ ವಿಶೇಷ ಯೋಗಗಳು ನಿರ್ಮಾಣಗೊಳ್ಳುತ್ತಿವೆ (Auspicious Yoga)
ಈ ಬಾರಿಯ ಹೋಳಿ ಹಬ್ಬದ ದಿನ ಹಲವು ವಿಶೇಷ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಹೀಗಾಗಿ ಈ ಬಾರಿಯ ಹಬ್ಭ ಮತ್ತಷ್ಟು ವಿಶೇಷವಾಗಿರಲಿದೆ. ಈ ಬಾರಿ ಹೋಳಿ ಹಬ್ಬದ ದಿನ ಧ್ರುವ ಯೋಗ ನಿರ್ಮಾಣಗೊಳ್ಳಲಿದ್ದು, ಈ ದಿನ ಚಂದ್ರ ಕನ್ಯಾ ರಾಶಿಯಲ್ಲಿ ಗೋಚರಿಸಲಿದ್ದಾನೆ. ಇದಲ್ಲದೆ ಎರಡು ಅತಿ ದೊಡ್ಡ ಗ್ರಹಗಳಾಗಿರುವ ಶನಿ ಹಾಗೂ ಗುರು ಮಕರರಾಶಿಯಲ್ಲಿ ವಿರಾಜಮಾನರಾಗಲಿದ್ದಾರೆ. ಶುಕ್ರ ಹಾಗೂ ಸೂರ್ಯ ಮೀನ ರಾಶಿಯಲ್ಲಿ ಇರಲಿದ್ದಾರೆ. ಮಂಗಳ ಹಾಗೂ ರಾಹು ವೃಷಭ ರಾಶಿಯಲ್ಲಿ ಮತ್ತು ಬುಧ ಕುಂಭ ಮತ್ತು ಕೇತು ವೃಶ್ಚಿಕ ರಾಶಿಯಲ್ಲಿ ವಿರಾಜಮಾನರಾಗಲಿದ್ದಾರೆ. ಗ್ರಹಗಳ ಇಂತಹ ಸ್ಥಿತಿಯ ಹಿನ್ನೆಲೆ ಅಂದು ಧ್ರುವಯೋಗ ನಿರ್ಮಾಣಗೊಳ್ಳಲಿದೆ. ಈ ಬಾರಿಯ ಹೋಳಿಹಬ್ಬವನ್ನು ಸರ್ವಾರ್ಥ ಸಿದ್ಧಿಯೋಗದಲ್ಲಿ ಆಚರಿಸಲಾಗುತ್ತಿದೆ. ಇದಲ್ಲದೆ ಅಮೃತಸಿದ್ಧಿಯೋಗ ಕೂಡ ನಿರ್ಮಾಣಗೊಳ್ಳುತ್ತಿದೆ.
ಇದನ್ನೂ ಓದಿ-Lord Ganesha: ಈ ವಿಶಿಷ್ಟವಾದ ಗಣೇಶ ಮಂದಿರದಲ್ಲಿ ಪತ್ರದ ಮೂಲಕ ಮನಸ್ಸಿನ ಮಾತನ್ನು ಹೇಳುವ ಭಕ್ತರು
ಹೋಳಿ ದಹನದ ಮೇಲೆ ಭದ್ರಾ ನೆರಳು ಇರುವುದಿಲ್ಲ (Holi Muhurat)
ಹೋಳಿ ದಹನ ಕಾರ್ಯಕ್ರಮ ಮಾರ್ಚ್ 28ರಂದು ನಡೆಸಲಾಗುತ್ತಿದೆ. ಆದರೆ ಇದರ ಮೇಲೆ ಭದ್ರಾ ನೆರಳು ಇರುವುದಿಲ್ಲ. ಏಕೆಂದರೆ ಪಂಚಾಂಗದ ಪ್ರಕಾರ ಭದ್ರಾ ಬೆಳಗ್ಗೆ 10.13 ರಿಂದ 11.16ರವರೆಗೆ ಇರಲಿದೆ. ಭದ್ರಾ ಮುಖ 28 ಮಾರ್ಚ್ ಬೆಳಗ್ಗೆ 11.16ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಇರಲಿದೆ. ಹೀಗಾಗಿ ಭದ್ರಾ 28 ಅಪರಾಹ್ನವೆ ಮುಗಿಯುವ ಕಾರಣ ದಹನ ಕಾರ್ಯಕ್ರಮ ಭದ್ರಾ ಮುಕ್ತವಾಗಿರಲಿದೆ.
ಇದನ್ನೂ ಓದಿ-ಈ ದಿನ ಗಣೇಶನನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ದಿಸುವುದರಲ್ಲಿ ಅನುಮಾನವೇ ಇಲ್ಲ
- ಹುಣ್ಣಿಮೆ ತಿಥಿ ಆರಂಭ 28 ಮಾರ್ಚ್ 2021 ಬೆಳಗ್ಗೆ 3.27ಕ್ಕೆ.
- ಹುಣ್ಣಿಮೆ ತಿಥಿ ಮುಕ್ತಾಯ 29 ಮಾರ್ಚ್ 2021 ರಾತ್ರಿ 12.17ಕ್ಕೆ.
- ಹೋಳಿ ದಹನದ ಮುಹೂರ್ತ 28 ಮಾರ್ಚ್ ಸಂಜೆ 06.37 ರಿಂದ ರಾತ್ರಿ 8.56ರವರೆಗೆ.
- ಒಟ್ಟು ಮುಹೂರ್ತ ಅವಧಿ 2 ಗಂಟೆ 20 ನಿಮಿಷಗಳು
ಇದನ್ನೂ ಓದಿ-Panchamukhi Hanuman ಹನುಮನ ಪೂಜೆಯಿಂದ ಸಿಗುತ್ತೆ ಅಪಾರ ಲಾಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.