Water Benefits: ನೀರು ಕುತಿಯುವುದು ನಮಗೆ ಎಷ್ಟೊಂದು ಮುಖ್ಯ ಎಂಬುದು ನಮಗೆಲ್ಲರಿಗೂ ತಿಳಿದೇ ಇದೆ. ನೀರು ಕೇವಲ ನಮ್ಮ ಬಾಯಾರಿಕೆಯನ್ನು ನೀಗಿಸದೆ, ನಮ್ಮ ದೇಹವನ್ನು ಸಾಕಷ್ಟು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ ಮತ್ತು ಆರೋಗ್ಯಕರವಾಗಿರಲು ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೂ ಕೂಡ ನಾವು ನೀರು ಕುಡಿಯುವ ಅಭ್ಯಾಸಗಳು ಆರೋಗ್ಯಕರವೇ ಅಥವಾ ಇಲ್ಲವೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ, ಚಯಾಪಚಯ, ಹಾರ್ಮೋನುಗಳು ಇತ್ಯಾದಿಗಳ ಮೇಲೆ ಅದು ಪರಿಣಾಮ ಬೀರುವುದರಿಂದ ನಾವು ಯಾವಾಗ ಮತ್ತು ಹೇಗೆ ನೀರನ್ನು ಕುಡಿಯುತ್ತೇವೆ ಎಂಬುದು ತುಂಬಾ ಮುಖ್ಯವಾಗುತ್ತದೆ. ಆರೋಗ್ಯಕರ ರೀತಿಯಲ್ಲಿ ನೀರನ್ನು ಕುಡಿಯುವ 4 ಬೇಸಿಕ್ ನಿಯಮಗಳು ಯಾವುವು ತಿಳಿದುಕೊಳ್ಳೋಣ ಬನ್ನಿ. 


COMMERCIAL BREAK
SCROLL TO CONTINUE READING

1. ಆಯುರ್ವೇದದಲ್ಲಿ ಉಷಾಪಾನ್ ಎಂದು ಕರೆಯಲ್ಪಡುವ ನೀರನ್ನು ಬೆಳಗಿನ ಜಾವದಲ್ಲಿ  ಕುಡಿಯಿರಿ. ಆರೋಗ್ಯವಾಗಿರಲು ಬಿಸಿ ನೀರು ಅಥವಾ ತಾಮ್ರದ ನೀರನ್ನು ಕುಡಿಯಬೇಕು. ಈ ಅಭ್ಯಾಸವು ನಮಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.


2. ತಿಂದ ತಕ್ಷಣ ನೀರು ಕುಡಿಯಬೇಡಿ. ನಾವು ಆಹಾರವನ್ನು ಸೇವಿಸಿದ ತಕ್ಷಣ ನೀರನ್ನು ಕುಡಿಯುತ್ತಿದ್ದರೆ, ನಮ್ಮ ಆಹಾರವು ನಿಧಾನವಾಗಿ ಜೀರ್ಣವಾಗುತ್ತದೆ, ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀರ್ಣಕಾರಿ ಶಕ್ತಿ ಕಡಿಮೆಯಾಗುತ್ತದೆ.


3. ಯಾವಾಗಲೂ ಕುಳಿತುಕೊಂಡು ನೀರು ಕುಡಿಯಿರಿ, ಬೇಗನೆ ಅಥವಾ ನಿಂತ ಭಂಗಿಯಲ್ಲಿ ನೀರನ್ನು ಕುಡಿಯಬೇಡಿ. ಬೇಗನೆ ನೀರು ಕುಡಿಯಬೇಡಿ, ಬದಲಿಗೆ ಗುಟುಕು ನೀರು ಕುಡಿಯಿರಿ.


ಇದನ್ನೂ ಓದಿ-Seeds For Weigh Loss: ಹಲವು ಪ್ರಯತ್ನಗಳ ಬಳಿಕವೂ ತೂಕ ಇಳಿಕೆಯಾಗುತ್ತಿಲ್ಲವೇ? ಈ ಬೀಜಗಳನ್ನು ಟ್ರೈ ಮಾಡಿ ನೋಡಿ!


4. ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತುಂಬಬೇಡಿ. ಇದನ್ನು ಮಾಡುವುದರಿಂದ, ಪ್ಲಾಸ್ಟಿಕ್‌ನಲ್ಲಿರುವ ಸೂಕ್ಷ್ಮ ಕಣಗಳಿಂದ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ, ಜೊತೆಗೆ ಇದು ಹಾರ್ಮೋನ್ ಅಸಮತೋಲನ ಮತ್ತು ಇತರ ಕಾಯಿಲೆಗಳ ಅಪಾಯ ಕೂಡ ಹೆಚ್ಚಾಗುತ್ತದೆ. 


ಇದನ್ನೂ ಓದಿ-Relationship: ಆರೋಗ್ಯಕರ ಸಂಬಂಧದಲ್ಲಿ ಬಿರುಕಿಗೆ ಕಾರಣ ಈ ಆರು ಸಂಗತಿಗಳು!


ಮುಂಜಾನೆ ಉಗುರುಬೆಚ್ಚನೆಯ ನೀರು ಕುಡಿದರೆ ಏನಾಗುತ್ತದೆ?
>> ಬೆಳಗ್ಗೆ ಮೊದಲು ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
>> ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರವನ್ನು ಸೇವಿಸುವುದರಿಂದ ಅಸಿಡಿಟಿ ಉಂಟಾಗುತ್ತದೆ. ಪ್ರತಿದಿನ ಬೆಳಗ್ಗೆ ಉಗುರುಬೆಚ್ಚನೆಯ ನೀರು ಕುಡಿದರೆ ಅಸಿಡಿಟಿ ಸಮಸ್ಯೆ ಕಾಡುವುದಿಲ್ಲ.
>> ಬೆಳಗ್ಗೆ ಬಿಸಿ ನೀರು ಕುಡಿಯುವುದರಿಂದ ದೇಹದಲ್ಲಿನ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ. ಇದು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿರಿಸುತ್ತದೆ.
>> ಬಿಸಿ ನೀರನ್ನು ಕುಡಿಯುವ ಮೂಲಕ ಚಯಾಪಚ ಕ್ರಿಯೆ ವೇಗವಾಗುತ್ತದೆ.  ಇದು ದೇಹದ ಹೆಚ್ಚುವರಿ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.