ನಾಯಕತ್ವ ವಿಚಾರದಲ್ಲಿ ಗಲಾಟೆ: ಲೈವ್ ಟಿವಿ ಶೋನಲ್ಲೇ ಕಿತ್ತಾಡಿಕೊಂಡ ಪಾಕ್ ಆಟಗಾರರು!

Babar Azam Pakistan Cricket: ಲೈವ್ ಟೆಲಿವಿಷನ್‌’ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರಾದ ಇಮಾಮ್ ಉಲ್ ಹಕ್ ಮತ್ತು ಅಹ್ಮದ್ ಶೆಹಜಾದ್ ನಡುವೆ ತೀವ್ರ ವಾಗ್ವಾದ ನಡೆದಿದೆ.

Written by - Bhavishya Shetty | Last Updated : Jun 5, 2024, 06:42 PM IST
    • ಲೈವ್ ಟಿವಿ ಶೋನಲ್ಲಿ ಇಬ್ಬರು ಹಿರಿಯ ಆಟಗಾರರು ಕಿತ್ತಾಡಿಕೊಂಡಿದ್ದಾರೆ
    • ಪಾಕಿಸ್ತಾನಿ ಕ್ರಿಕೆಟಿಗರಾದ ಇಮಾಮ್ ಉಲ್ ಹಕ್ ಮತ್ತು ಅಹ್ಮದ್ ಶೆಹಜಾದ್
    • ಬಾಬರ್ ನಾಯಕತ್ವಕ್ಕೆ ರಾಜೀನಾಮೆ ನೀಡಿ ಶಾಹೀನ್ ಅಫ್ರಿದಿಯನ್ನು ಆ ಸ್ಥಾನಕ್ಕೆ ನೇಮಿಸಲಾಯಿತು
ನಾಯಕತ್ವ ವಿಚಾರದಲ್ಲಿ ಗಲಾಟೆ: ಲೈವ್ ಟಿವಿ ಶೋನಲ್ಲೇ ಕಿತ್ತಾಡಿಕೊಂಡ ಪಾಕ್ ಆಟಗಾರರು! title=
Imam ul Haq-Ahmed Shehzad

Babar Azam Pakistan Cricket: ಪಾಕಿಸ್ತಾನದ ಕ್ರಿಕೆಟ್ ಬಗ್ಗೆ ಮಾತನಾಡುವಾಗಲೆಲ್ಲಾ ಯಾವುದಾದರೊಂದು ವಿವಾದಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ. ಈಗ ಮತ್ತೆ ಅಂಥದ್ದೇ ಘಟನೆಯೊಂದು ನಡೆದಿದೆ. ಲೈವ್ ಟಿವಿ ಶೋನಲ್ಲಿ ಇಬ್ಬರು ಹಿರಿಯ ಆಟಗಾರರು ಕಿತ್ತಾಡಿಕೊಂಡಿದ್ದು, ತೀವ್ರ ವಾಗ್ವಾದ ನಡೆದಿದೆ.

ಲೈವ್ ಟೆಲಿವಿಷನ್‌’ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರಾದ ಇಮಾಮ್ ಉಲ್ ಹಕ್ ಮತ್ತು ಅಹ್ಮದ್ ಶೆಹಜಾದ್ ನಡುವೆ ತೀವ್ರ ವಾಗ್ವಾದ ನಡೆದಿದೆ.

ಇದನ್ನೂ ಓದಿ: NDA ಒಕ್ಕೂಟದ ಡಿಮ್ಯಾಂಡ್‌ ಒಪ್ಪಿಕೊಂಡ್ರೆ ಮಾತ್ರ ಮೋದಿ PM..! ಇಲ್ಲ ಅಂದ್ರೆ ಕೇಂದ್ರ ʼಕೈʼ ಪಾಲು

“ಪಾಕಿಸ್ತಾನದ ಹಿರಿಯ ಆಟಗಾರರು ದುರ್ಬಲ ಎದುರಾಳಿಗಳ ವಿರುದ್ಧವೂ ಆಡುತ್ತಾರೆ. ಇದು ಯುವ ಆಟಗಾರರಿಗೆ ಅವಕಾಶಗಳನ್ನು ಕಡಿಮೆ ಮಾಡುತ್ತದೆ. ಆದರೆ ಟೀಂ ಇಂಡಿಯಾವನ್ನು ನೋಡಿ. ಯುವಕರಿಗೆ ಅವಕಾಶಗಳನ್ನು ನೀಡಲು ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಆಗಾಗ್ಗೆ ವಿಶ್ರಾಂತಿ ಪಡೆಯುತ್ತಾರೆ” ಎಂದು ಶೆಹಜಾದ್ ಹೇಳಿದ್ದಾರೆ.

2023 ರ ವಿಶ್ವಕಪ್ ಸೆಮಿಫೈನಲ್‌’ಗೆ ಅರ್ಹತೆ ಪಡೆಯಲು ಪಾಕಿಸ್ತಾನ ವಿಫಲವಾದ ನಂತರ, ಬಾಬರ್ ನಾಯಕತ್ವಕ್ಕೆ ರಾಜೀನಾಮೆ ನೀಡಿ ಶಾಹೀನ್ ಅಫ್ರಿದಿಯನ್ನು ಆ ಸ್ಥಾನಕ್ಕೆ ನೇಮಿಸಲಾಯಿತು. ಆದರೆ 2024ರ ಟಿ20 ವಿಶ್ವಕಪ್‌’ಗೂ ಮುನ್ನ ಬಾಬರ್‌’ಗೆ ಮತ್ತೊಮ್ಮೆ ನಾಯಕತ್ವ ನೀಡಲಾಗಿದೆ. ನಾಯಕತ್ವವನ್ನು ಶಾಹೀನ್‌ನಿಂದ ಕಸಿದುಕೊಳ್ಳಲಾಗಿದೆ ಎಂದು ಶಹಜಾದ್ ಆರೋಪಿಸಿದ್ದರು. ಆದರೆ ಇಮಾಮ್ ಬಾಬರ್‌’ನನ್ನು ಸಮರ್ಥಿಸಿಕೊಂಡು, ಮಂಡಳಿಯು ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದರು.

ನಾಯಕನನ್ನು ಸಮರ್ಥಿಸಿಕೊಂಡ ಇಮಾಮ್, "ಬಾಬರ್ ಅವರ ಒಪ್ಪಿಗೆಯಿಲ್ಲದೆ ತೆಗೆದುಹಾಕಲಾಯಿತು. ಒಪ್ಪಿಗೆಯಿಲ್ಲದೆ ಮತ್ತೆ ನೇಮಿಸಲಾಯಿತು. ಇದು ಮಂಡಳಿ ನಿರ್ಧಾರ. 2021ರ ಟಿ20 ವಿಶ್ವಕಪ್‌’ನಲ್ಲಿ ನಾವು ಸೆಮಿಫೈನಲ್ ತಲುಪಿದ್ದೇವೆ. ನಂತರ 2022ರಲ್ಲಿ ಫೈನಲ್ ಆಡಿದ್ದೇವೆ. ನಾವು ಗೆಲ್ಲಲಿಲ್ಲ, ಇದು ಚರ್ಚೆಯಾಗಬಹುದು. ಫೈನಲ್‌’ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಬಾಬರ್ ಈ ಎಲ್ಲಾ ಆಟಗಾರರನ್ನು ಇಷ್ಟಪಡುತ್ತಾರೆ ಎಂದು ನೀವು ಹೇಳಬಹುದು, ಆದರೆ ಅದನ್ನು ಸ್ನೇಹ ಎಂದು ಕರೆಯುವುದು ತುಂಬಾ ವೈಯಕ್ತಿಕ ವಿಷಯ” ಎಂದು ಹೇಳಿದ್ದಾರೆ.

ಈ ಹೇಳಿಕೆಗೆ ತಿರುಗೇಟು ನೀಡಿದ ಶಹಜಾದ್, “ಇಮಾಮ್ ಕೇಂದ್ರ ಒಪ್ಪಂದದ ಅಡಿಯಲ್ಲಿದ್ದಾರೆ. ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳಲು ಅವರು ಇನ್ನೂ ಚಿಕ್ಕವರು. ಅವರ ವಯಸ್ಸಲ್ಲಿದ್ದರೆ, ನಾನು ಕೂಡ ಹಾಗೆಯೇ ಮಾತನಾಡುತ್ತಿದೆ. ಆದರೆ ನನಗೆ 34 ವರ್ಷ. ಈ ವಿಷಯಗಳನ್ನು ಕಂಡು ಬೇಸರಗೊಂಡಿದ್ದೇನೆ. ವಿಷಯಗಳನ್ನು ಉತ್ತಮಗೊಳಿಸಬೇಕೆಂದು ನಾವು ಬಯಸುತ್ತೇವೆ. 4-5 ವರ್ಷಗಳ ಕಾಲ ಆಟಗಾರರನ್ನು ಹಿಗ್ಗಿಸಿದಾಗ, ದೇಶೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ನೀವೇನು ಮಾಡುತ್ತೀರಿ? ಅವರ ಹಕ್ಕುಗಳನ್ನು ಕಸಿದುಕೊಂಡಂತೆ ಅಲ್ಲವೇ” ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೋದಿಯವರಿಗೆ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುವ ಮುತ್ಸದ್ದಿತನ ಇದೆ: ಬಸವರಾಜ ಬೊಮ್ಮಾಯಿ

ಇದಕ್ಕೆ ಪ್ರತಿಕ್ರಿಯಿಸಿದ ಇಮಾಮ್, "ಹೌದು, ನಾನು ಕೇಂದ್ರೀಯ ಒಪ್ಪಂದವನ್ನು ಪಡೆದಿದ್ದೇನೆ, ಆದರೆ ನಾನು 36 ವರ್ಷಕ್ಕೆ ಬಂದಾಗ, ನನ್ನ ವರ್ತನೆಯು ಈಗಿರುವಂತೆಯೇ ಇರುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಂದು ಹೇಳಿದರು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News