Single Life Side Effect: ಇತ್ತೀಚಿನ ದಿನಗಳಲ್ಲಿ, ಜನರಲ್ಲಿ ಸಂಬಂಧಗಳಲ್ಲಿ ನಂಬಿಕೆ ಕಡಿಮೆಯಾಗಿರುವುದರಿಂದ ಹಳುವು ಜನರು ಒಂಟಿಯಾಗಿರಲು ಬಯಸುತ್ತಾರೆ. ಏಕಾಂಗಿ ಜೀವನದಲ್ಲಿ ಸ್ವತಂತ್ರವಾಗಿರಬಹುದು ಎಂದು ಬಹುತೇಕ ಒಂಟಿ ಜನರು ನಂಬುತ್ತಾರೆ. ಯಾವುದೇ ರೀತಿಯ ಒತ್ತಡ ಅಥವಾ ನಿರ್ಬಂಧಗಳಿಲ್ಲದೆ ಜೀವನವನ್ನು ಆನಂದಿಸಬಹುದು ಎಂದು ಅವರು ಅಂದುಕೊಳ್ಳುತ್ತಾರೆ. ಇದಕ್ಕೆ ವಿಪರೀತ ಎಂಬಂತೆ ಸಂಬಂಧದಲ್ಲಿ ಕೆಲವು ಹೊರೆ ಮತ್ತು ಜವಾಬ್ದಾರಿ ಇರುತ್ತದೆ. ಇವುಗಳಿಂದ ಪಾರಾಗಲು ಜನರು ಏಕಾಂಗಿಯಾಗಿರಲು ಇಷ್ಟಪಡುತ್ತಾರೆ. ಹಲವು ಪ್ರಕರಣಗಳಲ್ಲಿ ಅನೇಕ ಜನರು ಎಲ್ಲಾ ಸಂಬಂಧಗಳಿಂದ ದೂರ ಉಳಿಯುತ್ತಾರೆ. ಕೆಲವರು ತಮ್ಮ ವೃತ್ತಿಜೀವನದ ಅನ್ವೇಷಣೆಯಲ್ಲಿ ಸಂಬಂಧಗಳಿಂದ ದೂರ ಉಳಿದರೆ, ಮತ್ತೆ ಕೆಲವರು ಸಮಯದ ಕೊರತೆಯಿಂದ ಸಂಬಂಧಗಳಿಂದ ದೂರ ಉಳಿಯುತ್ತಾರೆ. ಒಂಟಿಯಾಗಿರುವುದು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದೆ, ಆದರೆ ಇನ್ನೊಂದೆಡೆ ಒಂಟಿತನವು ಅನೇಕ ಅನಾನುಕೂಲಗಳನ್ನು ಕೂಡ ಹೊಂದಿದೆ.


COMMERCIAL BREAK
SCROLL TO CONTINUE READING

ಭಾವನಾತ್ಮಕವಾಗಿ ದುರ್ಬಲರಾಗುತ್ತಾರೆ
ಯಾರೊಂದಿಗಾದರೂ ವಾಸಿಸುತ್ತಿರುವಾಗ ಕೆಲ ಸಮಸ್ಯೆಗಳು ತನ್ನಷ್ಟಕ್ಕೆ ತಾನೇ ನಿವಾರಣೆಯಾಗುತ್ತವೆ. ನೀವು ಯಾರೊಂದಿಗಾದರೂ ಸಂಬಂಧದಲ್ಲಿ ವಾಸಿಸುತ್ತಿದ್ದರೆ, ನೀವು ಪರಸ್ಪರರ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು ಮತ್ತು ಸಲಹೆಯನ್ನು ತೆಗೆದುಕೊಳ್ಳುವ ಮೂಲಕ ಅವುಗಳನ್ನು ಪರಿಹರಿಸಬಹುದು. ಒಬ್ಬಂಟಿಯಾಗಿರುವುದರಿಂದ, ನೀವು ಎಲ್ಲಾ ಸಮಸ್ಯೆಗಳನ್ನು ನಿಮ್ಮದೇ ರೀತಿಯಲ್ಲಿ ಪರಿಹರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ನೀವು ಭಾವನಾತ್ಮಕವಾಗಿ ದುರ್ಬಲರಾಗುವಿರಿ. ಯಾರಿಂದಲೂ ನೆರವು ಅಥವಾ ಬೆಂಬಲ ಸಿಗದೇ ಇದ್ದಾಗ, ನೀವು ಬೇಗನೆ ಅಸಮಾಧಾನಗೊಳ್ಳುತ್ತೀರಿ ಮತ್ತು ಸಣ್ಣ ವಿಷಯಗಳಿಗೆ ಅಳಬಹುದು.


ಖಿನ್ನತೆ ಸುತ್ತುವರಿಯಬಹುದು
ಒಬ್ಬಂಟಿಯಾಗಿರುವ ಮೂಲಕ, ಒಬ್ಬ ವ್ಯಕ್ತಿಯು ತನ್ನ ಮನಸ್ಸಿಗೆ ತೋಚಿದ್ದನ್ನು ಮಾಡಬಹುದು, ಆದರೆ ಅದರಿಂದ ಆತನಿಗೆ ಸಂತೋಷ ಸಿಗುವುದಿಲ್ಲ. ಮೋಜು ಅಥವಾ ಸಂತೋಷ ಯಾರೊಬ್ಬರು ಜೊತೆಗಿದ್ದಾಗ ಮಾತ್ರ ಸಿಗುತ್ತದೆ. ಒಂಟಿ ವ್ಯಕ್ತಿ ತೊಂದರೆ ಅಥವಾ ಸಂತೋಷವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಏಕಾಂಗಿಯಾಗಿರುವುದರ ಮೂಲಕ, ನೀವು ಬಯಸಿದರೂ ಸಹ ನಿಮ್ಮ ಸಮಸ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ಈ ಉದ್ವೇಗ ಹೆಚ್ಚಾಗಲು ಪ್ರಾರಂಭಿಸುತ್ತದೆ. ದೈನಂದಿನ ಒತ್ತಡವು ನಿಮ್ಮನ್ನು ಸುತ್ತುವರೆದರೆ, ನೀವು ಖಿನ್ನತೆಗೆ ಒಳಗಾಗಬಹುದು.


ಇದನ್ನೂ ಓದಿ-Piles Remedy: ಪೈಲ್ಸ್ ನೋವಿನಿಂದ ಭಾರಿ ಪರಿಹಾರ ಒದಗಿಸುತ್ತದೆ ಮನೆಮದ್ದು


ಹೆಚ್ಚಿನವರು ದೂರ ಹೋಗುತ್ತಾರೆ
ಕೆಲವೊಮ್ಮೆ ಒಂಟಿಯಾಗಿರುವುದು ಕಿರಿಕಿರಿಯನ್ನು ಹೆಚ್ಚಿಸುತ್ತದೆ. ಒಬ್ಬಂಟಿಯಾಗಿರುವ ನೀವು ಜನರೊಂದಿಗೆ ಬೆರೆಯುವುದನ್ನು ಮರೆತುಬಿಡುತ್ತೀರಿ. ಅನೇಕ ಬಾರಿ, ಒಬ್ಬಂಟಿಯಾಗಿರುವ ಕಾರಣ, ನೀವು ಎಲ್ಲರೊಂದಿಗೆ ಇರುವ ನಿಮ್ಮ ಅಭ್ಯಾಸವನ್ನು ಕಳೆದುಕೊಳ್ಳುತ್ತೀರಿ ಮತ್ತು ನೀವು ಯಾವುದೇ ಸಂಬಂಧದಲ್ಲಿ ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕಾಂಗಿಯಾಗಿ ಉಳಿಯುವ ಮೂಲಕ, ನೀವು ಕ್ರಮೇಣ ಮನೆ, ಕುಟುಂಬ ಮತ್ತು ಸಮಾಜದಿಂದ ದೂರ ಹೋಗಬಹುದು.


ಇದನ್ನೂ ಓದಿ-ನೈಸರ್ಗಿಕ ಪದ್ಧತಿಯಿಂದ ವೇಗವಾಗಿ ತೂಕ ಇಳಿಕೆ ಮಾಡಿಕೊಳ್ಳಬೇಕೇ? ಇಂದಿನಿಂದಲೇ ಈ ಸೂಪ್ ಸೇವನೆ ಆರಂಭಿಸಿ


ರೋಗಗಳು ಸುತ್ತುವರಿದಿವೆ
ಏಕಾಂಗಿಯಾಗಿರುವುದು ನಿಮಗೆ ಕಡಿಮೆ ಸಂತೋಷ ಮತ್ತು ಹೆಚ್ಚು ಒತ್ತಡವನ್ನು ನೀಡುತ್ತದೆ. ಈ ಒತ್ತಡವು ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಒತ್ತಡದಿಂದಾಗಿ, ನಿದ್ರಾಹೀನತೆಯ ಸಮಸ್ಯೆ ಎದುರಾಗುತ್ತದೆ. ಕಡಿಮೆ ನಿದ್ರೆ ಕೂಡ ಅನೇಕ ರೋಗಗಳಿಗೆ ಕಾರಣವಾಗಿದೆ. ಇದು ದೌರ್ಬಲ್ಯ, ಆಯಾಸ, ಜೀರ್ಣಕಾರಿ ಸಮಸ್ಯೆಗಳು, ಭಾರವಾದ ತಲೆ ಮತ್ತು ಕಪ್ಪು ವೃತ್ತಗಳಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ದೈನಂದಿನ ಕಿರಿಕಿರಿ ನಂತರ ನಿಮಗೆ ಅಭ್ಯಾಸವಾಗಿ ಬಿಡುತ್ತದೆ ಮತ್ತು ಇದರಿಂದ ನೀವು ನಿಮ್ಮ ಕೆಲಸ ಮತ್ತು ಅಧ್ಯಯನವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ-Health Care Tips: ಹಾಲಿನ ಚಹಾ ಜೊತೆಗೆ ಮರೆತೂ ಕೂಡ ಈ ಪದಾರ್ಥಗಳ ಸೇವನೆ ಬೇಡ, ಇಲ್ದಿದ್ರೆ ಆಸ್ಪತ್ರೆ ಅಲೆದಾಟ ತಪ್ಪಲ್ಲ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.