ನವದೆಹಲಿ: 2023ರ ಮೊದಲ ಸೂರ್ಯಗ್ರಹಣ ಕೆಲವೇ ಗಂಟೆಗಳಲ್ಲಿ ಸಂಭವಿಸಲಿದೆ. ಗ್ರಹಣದ ವಿಶೇಷ ಮಹತ್ವವನ್ನು ಹಿಂದೂ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಈ ಅವಧಿಯಲ್ಲಿ ಮಾಡುವ ಕೆಲಸವು ವ್ಯಕ್ತಿಯ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ವರ್ಷದ ಮೊದಲ ಸೂರ್ಯಗ್ರಹಣವು ಏಪ್ರಿಲ್ 20ರ ಗುರುವಾರ ವೈಶಾಖ ಅಮವಾಸ್ಯೆಯಂದು ಸಂಭವಿಸಲಿದೆ. ಗ್ರಹಣವು ಬೆಳಗ್ಗೆ 7.5ಕ್ಕೆ ಪ್ರಾರಂಭವಾಗಿ, ಮಧ್ಯಾಹ್ನ12.29ಕ್ಕೆ ಕೊನೆಗೊಳ್ಳುತ್ತದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದನ್ನು ಛಾಯಾಗ್ರಹಣವೆಂದು ಕರೆಯಲಾಗುತ್ತಿದೆ, ಹೀಗಾಗಿ ಇದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಸೂರ್ಯಗ್ರಹಣದ ಸೂತಕ ಅವಧಿಯು 12ಗಂಟೆ ಮೊದಲು ಪ್ರಾರಂಭವಾಗುತ್ತದೆ. ಗ್ರಹಣದ ಸಮಯದಲ್ಲಿ ಮತ್ತು ನಂತರ ಮಾಡುವ ಕೆಲವು ಕೆಲಸಗಳು ವ್ಯಕ್ತಿಯನ್ನು ನಕಾರಾತ್ಮಕ ಶಕ್ತಿಗಳಿಂದ ಕಾಪಾಡುತ್ತವೆ. ಅಲ್ಲದೆ ಗ್ರಹಣದ ದುಷ್ಪರಿಣಾಮಗಳು ವ್ಯಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಗ್ರಹಣ ಮುಗಿದ ನಂತರ ತಲೆ ಸ್ನಾನ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ ಇದರ ಹಿಂದಿನ ಕಾರಣ ಏನು ಗೊತ್ತಾ?


ಇದನ್ನೂ ಓದಿ: Astro Tips: ಲವಂಗ ಮತ್ತು ಕರ್ಪೂರದ ಈ ತಂತ್ರಗಳು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ!


ಸೂರ್ಯಗ್ರಹಣದ ನಂತರ ಈ ಕೆಲಸ ಏಕೆ ಮಾಡಲಾಗುತ್ತದೆ?


ಗ್ರಹಣದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಹಿರಿಯರು ಹೇಳುವುದನ್ನು ನೀವು ಆಗಾಗ ಕೇಳಿರಬಹುದು. ಇದು ಜೀವನದ ಮೇಲೆ ಅಹಿತಕರ ಪರಿಣಾಮ ಬೀರುತ್ತದೆ. ಅದೇ ರೀತಿ ಗ್ರಹಣದ ನಂತರ ಕೆಲವು ಕೆಲಸಗಳನ್ನು ಮಾಡಲು ಸಲಹೆ ನೀಡಲಾಗುತ್ತದೆ. ಗ್ರಹಣದ ನಂತರ ಸ್ನಾನ ಮಾಡಬೇಕು, ಬಟ್ಟೆ ಒಗೆಯಬೇಕು ಮತ್ತು ಮನೆ ಶುಚಿಗೊಳಿಸಬೇಕು ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ. ಆದರೆ ಈ ರೀತಿ ಮಾಡುವುದರ ಹಿಂದಿನ ಕಾರಣ ಏನು ಗೊತ್ತಾ?  


ಗ್ರಹಣದ ನಂತರ ತಲೆ ಸ್ನಾನ


ಗ್ರಹಣದ ಮೊದಲು ಮತ್ತು ನಂತರ ಸ್ನಾನ ಮಾಡುವುದರಿಂದ ರಾಹುವಿನ ಅಪವಿತ್ರ ಛಾಯೆಯು ಮಾಯವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಇದರಿಂದ ಅಡ್ಡ ಪರಿಣಾಮಗಳನ್ನು ತಪ್ಪಿಸಬಹುದು ಎನ್ನಲಾಗಿದೆ. ಗ್ರಹಣದ ನಂತರ ಸ್ನಾನ ಮಾಡುವುದು ಅದರ ಕೆಟ್ಟ ಪರಿಣಾಮಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಅಲ್ಲದೆ ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನ ಬೆಳಕಿನ ಕೊರತೆಯಿಂದ ಸೂಕ್ಷ್ಮಜೀವಿಗಳು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಸ್ನಾನ ಮಾಡುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ ಇತ್ಯಾದಿ ನಾಶಪಡಿಸಲು ಸಹಕಾರಿಯಾಗುತ್ತದೆ. ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: Marriage Tips: ಮದುವೆಗೂ ಮುನ್ನ ಭಾವಿ ದಂಪತಿಗಳು ಮಾಡಿಸಿಕೊಳ್ಳಬೇಕಾದ ಈ ಪರೀಕ್ಷೆಗಳು ನಿಮಗೂ ಗೊತ್ತಿರಲಿ!


ಅಷ್ಟೇ ಅಲ್ಲ ಸೂರ್ಯಗ್ರಹಣದ ನಂತರ ಬಟ್ಟೆ ಒಗೆಯುವುದು ಮತ್ತು ಮನೆಯನ್ನು ಸ್ವಚ್ಛಗೊಳಿಸುವುದು ಇತ್ಯಾದಿಗಳಿಗೆ ವಿಶೇಷ ಮಹತ್ವವಿದೆ. ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಗಳು ವಾತಾವರಣದಲ್ಲಿ ನೆಲೆಸುತ್ತವೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ನಕಾರಾತ್ಮಕ ಶಕ್ತಿಗಳನ್ನು ತಪ್ಪಿಸಲು ಮತ್ತು ನಾಶಮಾಡಲು ಮನೆಯಲ್ಲಿ ಸ್ವಚ್ಛತೆ ಮಾಡಲಾಗುತ್ತದೆ. ಮನೆಯ ಮೂಲೆ ಮೂಲೆಗಳಲ್ಲಿ ಗಂಗಾಜಲ ಚಿಮುಕಿಸಲಾಗುತ್ತದೆ ಮತ್ತು ಕೊಳಕು ಬಟ್ಟೆ ಇತ್ಯಾದಿಗಳನ್ನು ಸ್ವಚ್ಛಗೊಳಿಸಲಾಗುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.