Rules For Washing Hairs: ವಾರದ ಈ ದಿನ ಮಹಿಳೆಯರು ಕೂದಲು ತೊಳೆದರೆ ಪ್ರಸನ್ನಳಾಗುತ್ತಾಳೆ ತಾಯಿ ಲಕ್ಷ್ಮಿ, ಮನೆಯಲ್ಲಿ ಹಣದ ಹೊಳೆಯೇ ಹರಿಸುತ್ತಾಳೆ!

Women Hair Wash Rules: ಜ್ಯೋತಿಷ್ಯ ಶಾಸ್ತ್ರದಲ್ಲಿ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಹಲವು ಮಾರ್ಗಗಳನ್ನು ಸೂಚಿಸಲಾಗಿದೆ. ಈ ನಿಯಮಗಳನ್ನು ಪಾಲಿಸದೆ ಹೋದಲ್ಲಿ ತಾಯಿ ಲಕ್ಷ್ಮಿ ಮುನಿಸಿಕೊಂಡು ಮನೆಯಿಂದ ಹೊರಹೋಗುತ್ತಾಳೆ ಎನ್ನಲಾಗುತ್ತದೆ. ಅದೇ ರೀತಿ ಕೂದಲು ತೊಳೆಯುವ ಬಗ್ಗೆ ಜ್ಯೋತಿಷ್ಯದಲ್ಲಿ ಕೆಲ ನಿಯಮಗಳನ್ನು ನೀಡಲಾಗಿದೆ. ಮಹಿಳೆ ಈ ನಿಯಮಗಳನ್ನು ಅನುಸರಿಸದಿದ್ದರೆ, ಅದು ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.  

Written by - Nitin Tabib | Last Updated : Apr 18, 2023, 05:16 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅವಿವಾಹಿತ ಯವತಿಯರು ಬುಧವಾರ ತಮ್ಮ ಕೂದಲನ್ನು ತೊಳೆಯಬಾರದು.
  • ಕಿರಿಯ ಸಹೋದರರನ್ನು ಹೊಂದಿರುವ ಯುವತಿಯರು ಬುಧವಾರದಂದು ತಮ್ಮ ಕೂದಲನ್ನು ತೊಳೆಯುವುದನ್ನು ತಡೆಯಬೇಕು ಎಂದು ಹೇಳಲಾಗುತ್ತದೆ.
  • ಬುಧವಾರದಂದು ಕೂದಲು ತೊಳೆದವರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ.
Rules For Washing Hairs: ವಾರದ ಈ ದಿನ ಮಹಿಳೆಯರು ಕೂದಲು ತೊಳೆದರೆ ಪ್ರಸನ್ನಳಾಗುತ್ತಾಳೆ ತಾಯಿ ಲಕ್ಷ್ಮಿ, ಮನೆಯಲ್ಲಿ ಹಣದ ಹೊಳೆಯೇ ಹರಿಸುತ್ತಾಳೆ! title=
ಕೂದಲು ತೊಳೆಯುವ ಜೋತಿಷ್ಯ ನಿಯಮಗಳು!

Rules For Hair Wash: ಜ್ಯೋತಿಷ್ಯದಲ್ಲಿ, ಸ್ತ್ರೀಯರ ಕೂದಲು ತೊಳೆಯಲು ಒಂದು ದಿನವನ್ನು ನಿಗದಿಪಡಿಸಲಾಗಿದೆ. ನಂಬಿಕೆಯ ಪ್ರಕಾರ, ಮಹಿಳೆಯರು ಶುಕ್ರವಾರ ತಮ್ಮ ಕೂದಲನ್ನು ತೊಳೆಯಬೇಕು. ಶುಕ್ರವಾರ ತಾಯಿ ಲಕ್ಷ್ಮಿಯ ದಿನ. ಈ ದಿನ ಮಹಿಳೆಯರು ತಮ್ಮ ಕೂದಲನ್ನು ಸ್ವಚ್ಛಗೊಳಿಸಬೇಕು. ಈ ದಿನ ಕೂದಲುಗಳನ್ನು ತೊಳೆದರೆ ತಾಯಿ ಲಕ್ಷ್ಮಿ ಪ್ರಸನ್ನಳಾಗುತ್ತಾಳೆ ಮತ್ತು ತನ್ನ ಕೃಪೆಯನ್ನು ತೋರುತ್ತಾಳೆ. ಇದೇ ವೇಳೆ, ನೀವು ಪುತ್ರನಿಗೆ ತಾಯಿಯಾಗಿದ್ದರೆ ಅಥವಾ ಪುತ್ರನನ್ನು ಹೊಂದಲು ಬಯಸುತ್ತಿದ್ದರೆ, ನೀವು ಶುಕ್ರವಾರ ನಿಮ್ಮ ಕೂದಲನ್ನು ತೊಳೆಯಬೇಕು ಎಂದು ಹೇಳಲಾಗಿದೆ. ಶುಕ್ರವಾರ ಕ್ಷೌರವನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಕೂದಲು ತೊಳೆಯುವ ನಿಯಮಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅವಿವಾಹಿತ ಯವತಿಯರು ಬುಧವಾರ ತಮ್ಮ ಕೂದಲನ್ನು ತೊಳೆಯಬಾರದು. ಕಿರಿಯ ಸಹೋದರರನ್ನು ಹೊಂದಿರುವ ಯುವತಿಯರು ಬುಧವಾರದಂದು ತಮ್ಮ ಕೂದಲನ್ನು ತೊಳೆಯುವುದನ್ನು ತಡೆಯಬೇಕು ಎಂದು ಹೇಳಲಾಗುತ್ತದೆ. ಬುಧವಾರದಂದು ಕೂದಲು ತೊಳೆದವರು ಹಲವು ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದು ಧಾರ್ಮಿಕ ನಂಬಿಕೆ. ಹೀಗಾಗಿ ಬುಧವಾರದಂದು ಮರೆತೂ ಕೂಡ ಕೂದಲು ತೊಳೆಯಬೇಡಿ.

ಶುಭ ಮುಹೂರ್ತದಲ್ಲಿ ಕೂದಲು ಕತ್ತರಿಸಬೇಡಿ
ಸಾಮಾನ್ಯವಾಗಿ ಮಹಿಳೆಯರು ಯಾವುದೇ ಶುಭ ಅಥವಾ ಹಬ್ಬಕ್ಕೆ ಮುನ್ನ ಕೂದಲ ಚಿಕಿತ್ಸೆ ಮಾಡಿಸಿಕೊಳ್ಳುವುದು ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಕೂದಲನ್ನು ಕತ್ತರಿಸಿ ತೊಳೆಯಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ, ಯಾವುದೇ ಶುಭ ಸಮಯ ಮತ್ತು ಮಂಗಳಕರ ಹಬ್ಬಗಳಲ್ಲಿ, ವಿಶೇಷವಾಗಿ ಹುಣ್ಣಿಮೆಯ ದಿನ, ಏಕಾದಶಿ ಮತ್ತು ಅಮವಾಸ್ಯೆಯಂದು ಕೂದಲನ್ನು ತೊಳೆಯಬಾರದು. ಈ ಎಲ್ಲಾ ಕೆಲಸಗಳನ್ನು ಶುಭ ದಿನಾಂಕದ ಮೊದಲು ಸರಿಯಾಗಿ ಮಾಡಿಕೊಳ್ಳಿ.

ಇದನ್ನೂ ಓದಿ-Solar Eclipse 2023: ದಶಕದ ಬಳಿಕ ಸಂಭವಿಸುತ್ತಿದೆ ಕಂಕಣಾಕೃತಿ ಸೂರ್ಯಗ್ರಹಣ 5 ಮಹಾಯೋಗಗಳ ರಚನೆ, ಚಿನ್ನದಂತೆ ಹೊಳೆಯಲಿದೆ ಈ ಜನರ ಭಾಗ್ಯ!

ಉಪವಾಸದ ಸಮಯದಲ್ಲಿ ಕೂದಲು ತೊಳೆಯಬೇಡಿ
ಜ್ಯೋತಿಷ್ಯ ಶಾಸ್ತ್ರದಲ್ಲಿ ನೀವು ಯಾವುದೇ ದಿನದಂದು ಉಪವಾಸವನ್ನು ಆಚರಿಸಿದರೆ, ನಿಮ್ಮ ಕೂದಲನ್ನು ಮರೆತೂ ಕೂಡ ತೊಳೆಯಬಾರದು ಎಂದು ಹೇಳಲಾಗಿದೆ. ಉಪವಾಸಕ್ಕೆ ಒಂದು ದಿನ ಮೊದಲು ನಿಮ್ಮ ಕೂದಲನ್ನು ತೊಳೆದು ಸ್ವಚ್ಛಗೊಳಿಸಿ. ಮತ್ತೊಂದೆಡೆ, ಕೆಲವು ಕಾರಣಗಳಿಂದ ಉಪವಾಸದ ದಿನದಂದು ಕೂದಲನ್ನು ತೊಳೆಯಬೇಕಾಗಿ ಬಂದರೆ, ಹಸಿ ಹಾಲನ್ನು ಕೂದಲಿಗೆ ಹಚ್ಚಿ ಕೂದಲನ್ನು ತೊಳೆಯಬಹುದು.

ಇದನ್ನೂ ಓದಿ-Inauspicious Yog: ಶೀಘ್ರದಲ್ಲಿಯೇ ನಿರ್ಮಾಣಗೊಳ್ಳುತ್ತಿದೆ ಖತರ್ನಾಕ್ 'ಜ್ವಾಲಾಮುಖಿ ಯೋಗ' ಕೇವಲ ನೆರಳು ಬಿದ್ರೆ ಸಾಕು....!

ಇದೇ ವೇಳೆ, ಜ್ಯೋತಿಷ್ಯದ ಪ್ರಕಾರ, ಮಹಿಳೆಯರು ಮಾತ್ರವಲ್ಲ, ಪುರುಷರು ಕೂಡ ಗುರುವಾರ ತಮ್ಮ ಕೂದಲನ್ನು ತೊಳೆಯಬಾರದು. ಗುರುವಾರ ಕೂದಲು ತೊಳೆಯುವುದು ವ್ಯಕ್ತಿಯ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸುತ್ತದೆ. ಇದರೊಂದಿಗೆ ಶನಿವಾರವು ಶನಿ ದೇವನಿಗೆ ಪ್ರಿಯವಾಗಿದೆ, ಆದ್ದರಿಂದ ಈ ದಿನ ನಿಮ್ಮ ಕೂದಲಿಗೆ ಎಣ್ಣೆ ಹಾಕಬೇಡಿ ಅಥವಾ ನಿಮ್ಮ ಕೂದಲನ್ನು ಸ್ವಚ್ಛಗೊಳಿಸಬೇಡಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News