ಕಬ್ಬಿಣದ ಕಡಾಯಿಯನ್ನು ಅನೇಕರು ಈಗಲೂ ಬಳಸುತ್ತಾರೆ. ಕಬ್ಬಿಣದ ಪಾತ್ರೆಗಳನ್ನು ಬಳಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುವುದರಿಂದ ದೇಹವು ಕಬ್ಬಿಣವನ್ನು ಪಡೆಯುತ್ತದೆ. 


COMMERCIAL BREAK
SCROLL TO CONTINUE READING

ಈ ಪಾತ್ರಗಳ ಸಮಸ್ಯೆ ಏನೆಂದರೆ ಅಲ್ಪಸ್ವಲ್ಪ ನೀರು ಬಿದ್ದರೂ ತುಕ್ಕು ಹಿಡಿಯಲು ಆರಂಭಿಸುತ್ತವೆ. ನೀರಷ್ಟೇ ಅಲ್ಲ... ಗಾಳಿಗೆ ತೆರೆದಾಗಲೂ ಕಬ್ಬಿಣದ ಪಾತ್ರೆಗಳು ತುಕ್ಕು ಹಿಡಿಯುತ್ತವೆ. ಅದರ ನಂತರ ಸಂಪೂರ್ಣವಾಗಿ ಆ ಪಾತ್ರಗಳೂ ಹಾಳಾಗುತ್ತವೆ.  


ಇದನ್ನೂ ಓದಿ: ಮಹಾಲಯ ಅಮಾವಾಸ್ಯೆ.. ಈ ರಾಶಿಗಳಿಗೆ ಅದೃಷ್ಟದ ಪರ್ವಕಾಲ, ಅಷ್ಟದಿಕ್ಕುಗಳಿಂದ ಹರಿದು ಬರುತ್ತೆ ಅಷ್ಟೈಶ್ವರ್ಯ.. ದುಡ್ಡಿನ ಮಹಾಮಳೆ ಪ್ರತಿ ಕೆಲಸದಲ್ಲೂ ಜಯ !


ಕಬ್ಬಿಣದ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಉಪ್ಪು ಮತ್ತು ನಿಂಬೆ ಮಿಶ್ರಣವನ್ನು ಬಳಸಬೇಕು. ಇವೆರಡನ್ನು ಒಟ್ಟಿಗೆ ಸೇರಿಸಿ ಉಜ್ಜುವುದರಿಂದ ಕೊಳೆ ಮತ್ತು ತುಕ್ಕು ಸುಲಭವಾಗಿ ನಿವಾರಣೆಯಾಗುತ್ತದೆ. ತೊಳೆದ ಬಳಿಕ ಕಬ್ಬಿಣದ ಪಾತ್ರೆಗಳನ್ನು ಕಾಟನ್‌ ಬಟ್ಟೆಯಿಂದ ಒರೆಸುತ್ತ ಚೆನ್ನಾಗಿ ಒಣಗಿಸಿ. ಹೀಗೆ ಮಾಡುವುದರಿಂದ ನಿಮ್ಮ ಕಬ್ಬಿಣದ ಕಡಾಯಿ ತುಕ್ಕು ರಹಿತವಾಗುತ್ತದೆ. 


ಸ್ಮೋಕಿಂಗ್ ಪಾಯಿಂಟ್ ಹೆಚ್ಚಿದ್ದರೂ.. ಕಬ್ಬಿಣದ ಪಾತ್ರೆಗಳು ತುಕ್ಕು ಹಿಡಿಯುತ್ತವೆ. ಅಂತಹ ಸಂದರ್ಭದಲ್ಲಿ ನೀವು ಅಗಸೆ ಬೀಜದ ಎಣ್ಣೆ ಬಳಸಬಹುದು. ಪ್ಯಾನ್‌ಗೆ ಸ್ವಲ್ಪ ಪ್ರಮಾಣದ ಅಗಸೆ ಬೀಜದ ಎಣ್ಣೆ ಸುರಿಯಿರಿ ಮತ್ತು ಅದನ್ನು ಚೆನ್ನಾಗಿ ಹರಡಲು ಬಟ್ಟೆ ಅಥವಾ ಪೇಪರ್ ಟವೆಲ್ ಬಳಸಿ. 


ನಂತರ ಗ್ಯಾಸ್ ಅನ್ನು ಬಿಸಿ ಮಾಡಿ ಮತ್ತು ಅದರ ಮೇಲೆ ಕಬ್ಬಿಣದ ಪ್ಯಾನ್ ಅನ್ನು ಇರಿಸಿ ಮತ್ತು ಸ್ವಲ್ಪ ಬಿಸಿಯಾಗಲು ಬಿಡಿ. ಪ್ಯಾನ್ ತಣ್ಣಗಾಗಲು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಪ್ಯಾನ್ ತುಕ್ಕು ಹಿಡಿಯುವುದಿಲ್ಲ.


ಇದನ್ನೂ ಓದಿ: ವಿಶ್ವದ 8 ಅತ್ಯಂತ ದುಬಾರಿ ಹೂವುಗಳು ಯಾವುವು ಗೊತ್ತೆ..? ಇವುಗಳ ಬೆಲೆ ಕೋಟಿ.. ಕೋಟಿ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.