Amazing Fact About Dogs: ಜಗತ್ತಿನಲ್ಲಿ ಹಲವರು ನಾಯಿಗಳನ್ನು ಇಷ್ಟಪಡುತ್ತಾರೆ. ಅನೇಕರು ತಮ್ಮನ್ನು ಶ್ವಾನ ಪ್ರೇಮಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ನಾಯಿಗಳು ಕಂಬಗಳು ಮತ್ತು  ವಾಹನಗಳ ಟೈರ್‌ಗಳ ಮೇಲೆಯೇ ಏಕೆ ಹೆಚ್ಚಾಗಿ ಮೂತ್ರ ವಿಸರ್ಜಿಸುತ್ತವೆ ಎಂದು ಕೇಳಿದರೆ, ಅವರಿಗೆ ಉತ್ತರ ತಿಳಿದಿಲ್ಲ. ಇಂದು ನಾವು ನಿಮಗೆ ಉತ್ತರವನ್ನು ನೀಡುತ್ತೇವೆ. ಪ್ರಪಂಚದಾದ್ಯಂತ ನಾಯಿಗಳ ನಡವಳಿಕೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆದಿದೆ. ಅನೇಕ ಶ್ವಾನ ತಜ್ಞರು ಒಂದಲ್ಲ ಇನ್ನೊಂದು ವಿಚಾರದ ಮೇಲೆ ಅಧ್ಯಯನ ಮಾಡುತ್ತಿರುತ್ತಾರೆ. ನಾಯಿಗಳು ಕಂಬಗಳು ಮತ್ತು ಟೈರ್‌ಗಳ ಮೇಲೆಯೇ ಏಕೆ ಹೆಚ್ಚಾಗಿ ಮೂತ್ರ ವಿಸರ್ಜಿಸುವುದಕ್ಕೆ ಶ್ವಾನ ತಜ್ಞರು ಮೂರು ಕಾರಣಗಳನ್ನು ನೀಡುತ್ತಾರೆ. ಈ 3 ಕಾರಣಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.


COMMERCIAL BREAK
SCROLL TO CONTINUE READING

ಈ ಎರಡು ಸ್ಥಳಗಳಲ್ಲಿ ನಾಯಿಗಳು ಹೆಚ್ಚು ಮೂತ್ರ ವಿಸರ್ಜಿಸುತ್ತವೆ 


ಶ್ವಾನಗಳು ತಮ್ಮ ಪ್ರದೇಶವನ್ನು ಗುರುತಿಸುತ್ತವೆ ಎಂದು ತಜ್ಞರು ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. ಇದಕ್ಕಾಗಿ ಅವು ಕಂಬ ಅಥವಾ ಟೈರ್ ಮೇಲೆ ಮೂತ್ರ ವಿಸರ್ಜಿಸುವುದು. ಇದರಿಂದ ಇತರ ನಾಯಿಗಳಿಗೆ ಇದು ಬೇರೆಯವರ ಸೀಮೆ ಎಂಬ ಕಲ್ಪನೆ ಬರುತ್ತದೆ ಅಂತೆ. ಇದರ ಹೊರತಾಗಿ ನಾಯಿಗಳು ತಮ್ಮ ಸಂಗಾತಿಯನ್ನು ಸಂಪರ್ಕಿಸಲು ಇದು ಒಂದು ಮಾರ್ಗ. ಇದೇ ಕಾರಣಕ್ಕೆ ನಾಯಿಗಳು ಎಲ್ಲೋ ಹಾದು ಹೋದಾಗ ಆ ಭಾಗದ ಕಂಬ, ಟೈರ್ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಾ ಬರುತ್ತವೆ. ಸರಳವಾಗಿ ಹೇಳುವುದಾದರೆ, ನಾಯಿಗಳು ತಮ್ಮ ಗುರುತುಗಳನ್ನು ಬಿಡುವ ರೀತಿಯಿದು.


ಇದನ್ನೂ ಓದಿ: Interesting Facts: ಕಾಡಿನ ರಾಜ ‘ಸಿಂಹ’ದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ತಿಳಿದುಕೊಳ್ಳಿರಿ


ಲಂಬ ವಸ್ತುಗಳ ಮೇಲೆ ಮೂತ್ರ ವಿಸರ್ಜಿಸಲು ಆದ್ಯತೆ 


ನಾಯಿಗಳು ಲಂಬ ವಸ್ತುಗಳ ಮೇಲೆ ಮೂತ್ರ ವಿಸರ್ಜಿಸಲು ಇಷ್ಟಪಡುತ್ತವೆ ಅಂತೆ. ನಾಯಿಗಳು ಯಾವಾಗಲೂ ಮೂಗಿನ ಮಟ್ಟದಲ್ಲಿ ವಾಸನೆಯನ್ನು ಬಿಡುತ್ತವೆ. ಇದರಿಂದಾಗಿ ಟೈರ್‌ಗಳು ಮತ್ತು ಕಂಬಗಳ ಕೆಳಭಾಗವನ್ನು ಮೂತ್ರ ವಿಸರ್ಜಿಸಲು ಅವು ಆಯ್ಕೆ ಮಾಡುತ್ತವೆ ಎಂದು ಶ್ವಾನ ತಜ್ಞರು ತಮ್ಮ ಅಧ್ಯಯನದಲ್ಲಿ ಹೇಳುತ್ತಾರೆ. ಇದಲ್ಲದೇ ನೆಲದ ಮೇಲೆ ಮೂತ್ರ ವಿಸರ್ಜಿಸಿದಾಗ ಅದರ ವಾಸನೆ ಕಡಿಮೆ ಸಮಯದಲ್ಲಿ ಮಾಯವಾಗುತ್ತದೆ. ಆದರೆ ಇದು ರಬ್ಬರ್ ಟೈರ್‌ಗಳಲ್ಲಿ ಹೆಚ್ಚು ಕಾಲ ಇರುತ್ತದೆ. 


ನಾಯಿಗಳಿಗೆ ಟೈರ್ ವಾಸನೆ ಎಂದರೆ ಇಷ್ಟ 


ಮೂರನೆಯ ಮತ್ತು ಕೊನೆಯ ಕಾರಣವೆಂದರೆ ನಾಯಿಗಳು ಟೈರ್ ವಾಸನೆಯನ್ನು ಇಷ್ಟಪಡುತ್ತವೆ. ಇದರಿಂದಾಗಿ ಮೂತ್ರ ವಿಸರ್ಜನೆಗೆ ಆ ಜಾಗವನ್ನು ಆಯ್ಕೆ ಮಾಡುತ್ತವೆ. ನಾಯಿಗಳು ಟೈರ್ ಬಳಿ ಹೋಗಿ ಅಲ್ಲೇ ವಾಸನೆ ನೋಡಿ, ಅಲ್ಲಿ ಮೂತ್ರ ವಿಸರ್ಜನೆ ಮಾಡುತ್ತವೆ. ಟೈರ್ ಮೇಲೆ ಮೂತ್ರ ವಿಸರ್ಜನೆಗೆ ಇದು ದೊಡ್ಡ ಕಾರಣವಂತೆ. 


ಇದನ್ನೂ ಓದಿ: Interesting facts: ಹಾಲಿನ ಬಣ್ಣ ಯಾಕೆ ಬಿಳಿ? ಕೆಂಪು, ನೀಲಿ ಯಾಕಿಲ್ಲ! ಇದರ ಹಿಂದಿದೆ ವೈಜ್ಞಾನಿಕ ಕಾರಣ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.