Mauni Amavasya 2022: ಈ ವರ್ಷ ಇಂದು ಅಂದರೆ ಫೆಬ್ರವರಿ 1 ರಂದು ಮಾಘ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಅಂದರೆ ಮೌನಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತಿದೆ. ಇದನ್ನು ಮಾಘಿ ಅಮವಾಸ್ಯೆ ಎಂದೂ ಕರೆಯುತ್ತಾರೆ.   ಇಡೀ ಅಮಾವಾಸ್ಯೆಯಲ್ಲಿ ಮೌನಿ ಅಮಾವಾಸ್ಯೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಈ ದಿನ ಸ್ನಾನ, ದಾನ, ವಿಷ್ಣು ಪೂಜೆ ಮಾಡುವುದರಿಂದ ಪುಣ್ಯ ಲಭಿಸುತ್ತದೆ. ಮೌನಿ ಅಮಾವಾಸ್ಯೆಯಂದು ಇಡೀ ದಿನ ಮೌನವಹಿಸಿದರೆ ಮುನಿಯ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ. 


COMMERCIAL BREAK
SCROLL TO CONTINUE READING

ಧಾರ್ಮಿಕ ಗ್ರಂಥಗಳು ಮತ್ತು ಜ್ಯೋತಿಷ್ಯದಲ್ಲಿ (Astrology) ಮೌನಿ ಅಮಾವಾಸ್ಯೆಗೆ ಕೆಲವು ವಿಶೇಷ ನಿಯಮಗಳನ್ನು ನೀಡಲಾಗಿದೆ. ಈ ನಿಯಮಗಳನ್ನು ಅನುಸರಿಸಲು ವಿಫಲವಾದರೆ ಮತ್ತು ಈ ದಿನ ತಿಳಿದೋ ಅಥವಾ ತಿಳಿಯದೆಯೋ ಈ ದಿನ ಮಾಡುವ ಕೆಲವು ಕೆಲಸಗಳಿಂದ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ.


ಇವತ್ತು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ :
ಮೌನಿ ಅಮಾವಾಸ್ಯೆಯ (Mauni Amavasya) ದಿನದಂದು ಕೆಲವು ಕೆಲಸಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದ್ದರಿಂದ ಅವುಗಳನ್ನು ಮಾಡುವುದನ್ನು ತಪ್ಪಿಸಿ. 


ಇದನ್ನೂ ಓದಿ- Mauni Amavasya: ಇಂದು ಮೌನಿ ಅಮಾವಾಸ್ಯೆಯ ದಿನ ಈ ಕೆಲಸಗಳನ್ನು ತಪ್ಪದೇ ಮಾಡಿ


>> ಮೌನಿ ಅಮಾವಾಸ್ಯೆಯ ಉಪವಾಸವನ್ನು ಆಚರಿಸುವ ಜನರು ಹಾಸಿಗೆಯ ಮೇಲೆ ಮಲಗಬಾರದು ಅಥವಾ ದಿಂಬನ್ನು ಬಳಸಬಾರದು. ಮೌನಿ ಅಮಾವಾಸ್ಯೆಯ ಉಪವಾಸ ಮಾಡುವವರು ನೆಲದ ಮೇಲೆ ಮಲಗುವುದರಿಂದ ವ್ರತದ ಫಲ ಪಡೆಯುತ್ತಾರೆ. 


>> ಅಮಾವಾಸ್ಯೆಯಂದು ಸೂಜಿ, ದಾರ ಬಳಸದ ಸಂಪ್ರದಾಯವಿದೆ. ಆದ್ದರಿಂದ ಇದನು ಇದನ್ನು ಬಳಸುವುದನ್ನು ತಪ್ಪಿಸಿ. 


>> ಈ ದಿನ ಆಹಾರದಲ್ಲಿ ಉಪ್ಪನ್ನು ಬಳಸಬೇಡಿ. ಸಾಧ್ಯವಾದರೆ, ಹಣ್ಣುಗಳು ಮತ್ತು ಸಿಹಿ ಪದಾರ್ಥಗಳನ್ನು ಮಾತ್ರ ತಿನ್ನಿರಿ. 


>> ಮೌನಿ ಅಮಾವಾಸ್ಯೆಯ ದಿನದಂದು ನಿರ್ಜನ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ಏಕೆಂದರೆ ಮೌನಿ ಅಮಾವಾಸ್ಯೆಯಂದು ರಾತ್ರಿಯ ಕತ್ತಲೆಯಲ್ಲಿ ಅನೇಕ ನಕಾರಾತ್ಮಕ ಶಕ್ತಿಗಳು ಸಕ್ರಿಯವಾಗುತ್ತವೆ. ವಿಶೇಷವಾಗಿ ಸ್ಮಶಾನ ಮತ್ತು ಸ್ಮಶಾನದಂತಹ ಜಾಗಗಳಿಗೆ ಹೋಗಬೇಡಿ. 


>> ಮೌನಿ ಅಮಾವಾಸ್ಯೆಯ ದಿನದಂದು ಸಂತ-ಮಹಾತ್ಮರನ್ನು, ಭಿಕ್ಷುಕರನ್ನು ಅಥವಾ ಬಡವರನ್ನು ಅವಮಾನಿಸುವುದು ಜೀವನದಲ್ಲಿ ತೊಂದರೆ ತರಬಹುದು. ಈ ದಿನದಂದು ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಜನರಿಗೆ ದಾನ ಮಾಡಿದರೆ ಉತ್ತಮ ಫಲ ಸಿಗುತ್ತದೆ.


ಇದನ್ನೂ ಓದಿ- ಮೌನಿ ಅಮವಾಸ್ಯೆಯ ದಿನ ಈ ಕೆಲಸಗಳನ್ನು ಮಾಡಿದರೆ, ಪಿತೃ ದೋಷ ನಿವಾರಣೆಯಾಗುತ್ತದೆ


>> ಅಂದಹಾಗೆ, ಮೌನಿ ಅಮಾವಾಸ್ಯೆಯಂದು, ಇಡೀ ದಿನ ಮೌನವಾಗಿರಿ. ಇದು ಸಾಧ್ಯವಾಗದಿದ್ದರೂ, ತಪ್ಪಾಗಿಯೂ ಯಾರೊಂದಿಗೂ ನಿಂದನೀಯ ಪದಗಳನ್ನು ಬಳಸಬೇಡಿ. 


>> ಇಂದು ಮಾಂಸಾಹಾರ ಮತ್ತು ಮದ್ಯ ಸೇವಿಸಬೇಡಿ. ಯಾವುದೇ ರೀತಿಯ ಅಮಲು ಪದಾರ್ಥವನ್ನು ತೆಗೆದುಕೊಳ್ಳಬೇಡಿ. 


>> ಮೌನಿ ಅಮಾವಾಸ್ಯೆಯ ದಿನ ಗಂಡ ಹೆಂಡತಿ ಬ್ರಹ್ಮಚರ್ಯವನ್ನು ಆಚರಿಸಿದರೆ ಒಳಿತು.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.