ಮೌನಿ ಅಮಾವಾಸ್ಯೆಯಂದು ಈ ಸುಲಭ ಕೆಲಸ ಮಾಡಿ; ಲಕ್ಷ್ಮಿದೇವಿ ವರ್ಷವಿಡೀ ನಿಮ್ಮ ಮೇಲೆ ಸಂಪತ್ತು ಸುರಿಸುತ್ತಾಳೆ

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಮೌನಿ ಅಮಾವಾಸ್ಯೆಯ ದಿನವು ತುಂಬಾ ವಿಶೇಷವಾಗಿದೆ. ಈ ದಿನ ತಾಯಿ ಲಕ್ಷ್ಮಿದೇವಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸಿದರೆ ಅವಳು ಸಂತೋಷವಾಗಿರುತ್ತಾಳೆ. ನಿಮಗೆ ಬಹಳಷ್ಟು ಹಣ ಮತ್ತು ಸುಖ-ಸಂತೋಷವನ್ನು ನೀಡುತ್ತಾಳೆ.

Written by - Puttaraj K Alur | Last Updated : Jan 31, 2022, 12:48 PM IST
  • ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ವಿಶೇಷ ಮಹತ್ವವಿದ್ದು, ಪೂರ್ವಜರನ್ನು ಪೂಜಿಸಲಾಗುತ್ತದೆ
  • ಪ್ರತಿ ಅಮಾವಾಸ್ಯೆಯಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ದಾನ ಮಾಡುವ ಸಂಪ್ರದಾಯವಿದೆ
  • ಲಕ್ಷ್ಮಿದೇವಿಯ ಆಶೀರ್ವಾದ ಪಡೆಯಲು ಮೌನಿ ಅಮಾವಾಸ್ಯೆ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ
ಮೌನಿ ಅಮಾವಾಸ್ಯೆಯಂದು ಈ ಸುಲಭ ಕೆಲಸ ಮಾಡಿ; ಲಕ್ಷ್ಮಿದೇವಿ ವರ್ಷವಿಡೀ ನಿಮ್ಮ ಮೇಲೆ ಸಂಪತ್ತು ಸುರಿಸುತ್ತಾಳೆ  title=
ಹಿಂದೂ ಧರ್ಮದಲ್ಲಿ ಮೌನಿ ಅಮಾವಾಸ್ಯೆಗೆ ವಿಶೇಷ ಮಹತ್ವವಿದೆ

ನವದೆಹಲಿ: ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ವಿಶೇಷ ಮಹತ್ವವಿದೆ. ಪ್ರತಿ ಅಮಾವಾಸ್ಯೆಯಂದು ಪವಿತ್ರ ನದಿಗಳಲ್ಲಿ ವಿಶೇಷವಾಗಿ ಗಂಗಾ ಸ್ನಾನ ಮಾಡಿ ದಾನ ಮಾಡುವ ಸಂಪ್ರದಾಯವಿದೆ. ಇದಲ್ಲದೆ ಪೂರ್ವಜರನ್ನು ಪೂಜಿಸಲಾಗುತ್ತದೆ. ಆದ್ದರಿಂದ ಅವರ ಆಶೀರ್ವಾದದಿಂದ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಎಂದು ನಂಬಲಾಗಿದೆ. ವರ್ಷದ ಎಲ್ಲಾ ಅಮಾವಾಸ್ಯೆಗಳಲ್ಲಿ ಮೌನಿ ಅಮಾವಾಸ್ಯೆ(Mauni Amavasya 2022)ಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.

ಈ ವರ್ಷದ ಮೌನಿ ಅಮವಾಸ್ಯೆಯನ್ನು ಇಂದು(ಜ.31) ಕೆಲವು ಸ್ಥಳಗಳಲ್ಲಿ ಮತ್ತು ಕೆಲವು ಸ್ಥಳಗಳಲ್ಲಿ ಫೆಬ್ರವರಿ 1ರಂದು(Mauni Amavasya 2022 Date) ಆಚರಿಸಲಾಗುತ್ತದೆ. ಈ ದಿನ ಸ್ನಾನ ಮತ್ತು ದಾನದ ಹೊರತಾಗಿ ವಿಷ್ಣು ಮತ್ತು ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಆದ್ದರಿಂದ. ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಲು ಈ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಇಂದಿನಿಂದ ಬೆಳಗಲಿದೆ ಈ 4 ರಾಶಿಯವರ ಅದೃಷ್ಟ, ಬುಧ ನೀಡಲಿದ್ದಾನೆ ಅಪಾರ ಲಾಭ

ಮೌನಿ ಅಮವಾಸ್ಯೆಯಂದು ಈ ವಿಶೇಷ ಕ್ರಮಗಳನ್ನು ಮಾಡಿ

  • ಮೌನಿ ಅಮವಾಸ್ಯೆಯ ದಿನ ಸ್ನಾನ ಮಾಡಿ ಪೂಜೆ ಮಾಡಿ ಮೀನಿಗೆ ಹಿಟ್ಟಿನ ಮಾತ್ರೆಗಳನ್ನು ತಿನ್ನಿಸಿ. ಹೀಗೆ ಮಾಡುವುದರಿಂದ ಜೀವನದ ಎಲ್ಲಾ ದುಃಖಗಳು ಮತ್ತು ನೋವುಗಳು ದೂರವಾಗುತ್ತವೆ.
  • ನೀವು ಲಕ್ಷ್ಮಿದೇವಿಯ ಅಪಾರ ಅನುಗ್ರಹ(Mauni Amavasya Maa Lakshmi Puja)ವನ್ನು ಪಡೆಯಲು ಬಯಸಿದರೆ ಮೌನಿ ಅಮವಾಸ್ಯೆಯ ದಿನದಂದು ಇರುವೆಗಳಿಗೆ ಸಕ್ಕರೆಯನ್ನು ಹಿಟ್ಟಿನೊಂದಿಗೆ ತಿನ್ನಿಸಿ. ಇದು ಬಹಳಷ್ಟು ಪುಣ್ಯವನ್ನು ನೀಡುತ್ತದೆ ಮತ್ತು ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.
  • ಲಕ್ಷ್ಮಿದೇವಿಯ ಆರಾಧನೆಯಲ್ಲಿ ಹಾಲು ಸಿಹಿತಿಂಡಿಗಳು ಅಥವಾ ಅಕ್ಕಿ ಪಾಯಸ(Maa Lakshmi Remedy On Amavasya)ವನ್ನು ಅರ್ಪಿಸಿದರೆ ಅವಳು ತುಂಬಾ ಸಂತೋಷಪಡುತ್ತಾಳೆ ಮತ್ತು ಸಂಪತ್ತನ್ನು ಸುರಿಸುತ್ತಾಳೆ. ಅಲ್ಲದೆ ಈ ದಿನದ ಪೂಜೆಯಲ್ಲಿ ಲಕ್ಷ್ಮಿದೇವಿಯ ವಿಗ್ರಹ ಅಥವಾ ಚಿತ್ರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಬೇಕು.
  • ಈ ದಿನ ಬಡವರಿಗೆ ಅವರವರ ಶಕ್ತ್ಯಾನುಸಾರ ಸಿಹಿತಿಂಡಿ, ಬೆಚ್ಚನೆಯ ಬಟ್ಟೆ, ಅನ್ನ, ಕಪ್ಪು ಎಳ್ಳು ಇತ್ಯಾದಿಗಳನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ಪೂರ್ವಜರು ಸಂತುಷ್ಟರಾಗಿ ಸಂಸಾರದಲ್ಲಿ ಸುಖ ಶಾಂತಿ ನೆಲೆಸುತ್ತದೆ.

ಇದನ್ನೂ ಓದಿ: ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಂಭವಿಸಿದರೆ, ಈ ಬಣ್ಣವನ್ನು ಬಳಸಿ; ಮತ್ತೆ ಪ್ರಗತಿಯತ್ತ ಸಾಗಲಿದೆ ಆರ್ಥಿಕ ಸ್ಥಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News