ಬೆಂಗಳೂರು : ವಾರದಲ್ಲಿ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬಾರದು ಎಂದು ಮನೆಯ ಹಿರಿಯರೂ ಆಗಾಗ ಹೇಳುತ್ತಿರುತ್ತಾರೆ. ಹಾಗೆಯೇ ಕೆಲವು ದಿನ ಕೂದಲು ಕತ್ತರಿಸಬಾರದು ಎಂದು ಕೂಡಾ ಹೇಳಲಾಗುತ್ತದೆ.  ಹಿರಿಯರು ಹೀಗೆ ಹೇಳುವುದಕ್ಕೂ ಕಾರಣವಿದೆ.  ಜ್ಯೋತಿಷಿಗಳ ಪ್ರಕಾರ, ವಾರದ ಎಲ್ಲಾ ದಿನಗಳು ವಿವಿಧ ಗ್ರಹಗಳೊಂದಿಗೆ ನೇರ ಸಂಬಂಧವನ್ನು ಹೊಂದಿವೆ. ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಉಗುರುಗಳನ್ನು ಕತ್ತರಿಸಿದರೆ, ಅದು ಗ್ರಹ ದೋಷಗಳನ್ನು ಉಂಟುಮಾಡುತ್ತದೆ. ಈ ಕಾರಣಕ್ಕಾಗಿಯೇ ಈ 3 ದಿನಗಳಲ್ಲಿ ಉಗುರುಗಳನ್ನು ಕತ್ತರಿಸಬೇಡಿ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಮಂಗಳವಾರದಂದು ಉಗುರುಗಳನ್ನು ಕತ್ತರಿಸಬೇಡಿ  : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಮಂಗಳ ಗ್ರಹಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತದೆ. ಮಂಗಳವು ರಕ್ತಕ್ಕೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ ಮಂಗಳವಾರ ಉಗುರುಗಳನ್ನು ಕತ್ತರಿಸುವುದರಿಂದ ರಕ್ತ ಸಂಬಂಧಿತ  ಕಾಯಿಲೆಗಳು ಉಂಟಾಗಬಹುದು ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ದಿನ ಉಗುರು ಕತ್ತರಿಸುವುದು, ಕೂದಲು ಮತ್ತು ಗಡ್ಡವನ್ನು ಕತ್ತರಿಸಬಾರದು.  


ಇದನ್ನೂ ಓದಿ : Money plant vastu: ಮನಿ ಪ್ಲಾಂಟ್ ದಾನ ಮಾಡುವುದು ಅಥವಾ ಕದಿಯುವುದು ಸರಿಯೋ ತಪ್ಪೋ?


ಹಣದ ನಷ್ಟವನ್ನು ಭರಿಸಬೇಕಾಗುತ್ತದೆ : 
ಗುರುವಾರವನ್ನು ದೇವ ಗುರು ಬೃಹಸ್ಪತಿಯ ಆರಾಧನೆಯ ದಿನ ಎಂದು ಕರೆಯಲಾಗುತ್ತದೆ. ಬುದ್ಧಿ, ಜ್ಞಾನ, ವಿದ್ಯೆ ಮತ್ತು ಶುಭ ಕಾರ್ಯಗಳಿಗೆ  ಗುರುವೇ ಕಾರಣ. ಗುರುವಾರದಂದು ಅಪ್ಪಿ ತಪ್ಪಿಯೂ ಉಗುರುಗಳನ್ನು ಕತ್ತರಿಸಬಾರದು ಎನ್ನುವುದು ನಂಬಿಕೆ. ಇದರೊಂದಿಗೆ ಗುರುವಾರ ಕೂದಲು ಕತ್ತರಿಸುವುದು ಮತ್ತು ಶೇವಿಂಗ್ ಮಾಡುವುದು ಕೂಡಾ ನಿಷಿದ್ದ. ಹೀಗೆ ಮಾಡುವುದರಿಂದ ಜನರು ಹಣದ ನಷ್ಟವನ್ನು ಭರಿಸಬೇಕಾಗಬಹುದು. 


ಬಿಕ್ಕಟ್ಟು ಪ್ರಾರಂಭವಾಗುತ್ತದೆ : 
ಶನಿವಾರದಂದು ಶನಿ ದೇವನನ್ನು ಪೂಜಿಸಲಾಗುತ್ತದೆ. ಜ್ಯೋತಿಷ್ಯದಲ್ಲಿ, ಶನಿಯ ಸಂಬಂಧವನ್ನು ಮನುಷ್ಯನ ಮೂಳೆಗಳು, ಸ್ನಾಯುಗಳು ಮತ್ತು ಕಫಗಳೊಂದಿಗೆ ಹೇಳಲಾಗುತ್ತದೆ. ಶನಿವಾರದಂದು ಉಗುರು, ಕೂದಲು ಮತ್ತು ಗಡ್ಡವನ್ನು ಕತ್ತರಿಸುವವರು ಶನಿ ದೋಷವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಇದು ಅವನ ಜೀವನದಲ್ಲಿ ಬಿಕ್ಕಟ್ಟಿನ ಅವಧಿಯನ್ನು ಪ್ರಾರಂಭಿಸುತ್ತದೆ. 


ಇದನ್ನೂ ಓದಿ : ಭೃಂಗರಾಜ ಎಣ್ಣೆಯಿಂದಾಗುವ ಪ್ರಯೋಜನಗಳೇನು ಗೊತ್ತಾ?..ದಪ್ಪನೆಯ ಕೂದಲಿಗಾಗಿ ಟ್ರೈ ಮಾಡಿ ನೋಡಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.