ಹೊರಗಿನಿಂದ ಮನೆಗೆ ಬರುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ..!
ವಾಸ್ತು ಶಾಸ್ತ್ರವನ್ನು ನಂಬುವುದಾದರೆ, ವಾಸ್ತುವಿನಲ್ಲಿ ದಿನನಿತ್ಯದ ಜೀವನಕ್ಕೆ ಸಂಬಂಧಪಟ್ಟಂತೆ ಅನೇಕ ವಿಚಾರಗಳನ್ನು ಹೇಳಲಾಗಿದೆ. ಜೀವನದಲ್ಲಿ ಆರೋಗ್ಯ, ನೆಮ್ಮದಿ, ಸಂತೋಷದಿಂದ ಇರಲು ಏನು ಮಾಡಬೇಕು ಎನ್ನುವುದನ್ನು ವಾಸ್ತುವಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು : ವಾಸ್ತು (Vastu)ಅನ್ನೋದು ನಂಬಿಕೆಗೆ ಸಂಬಂಧಪಟ್ಟ ವಿಚಾರ. ವಾಸ್ತು ಶಾಸ್ತ್ರವನ್ನು (Vastu Shastra) ನಂಬುವುದಾದರೆ, ವಾಸ್ತುವಿನಲ್ಲಿ ದಿನನಿತ್ಯದ ಜೀವನಕ್ಕೆ ಸಂಬಂಧಪಟ್ಟಂತೆ ಅನೇಕ ವಿಚಾರಗಳನ್ನು ಹೇಳಲಾಗಿದೆ. ಜೀವನದಲ್ಲಿ ಆರೋಗ್ಯ, ನೆಮ್ಮದಿ, ಸಂತೋಷದಿಂದ ಇರಲು ಏನು ಮಾಡಬೇಕು ಎನ್ನುವುದನ್ನು ವಾಸ್ತುವಿನಲ್ಲಿ ಉಲ್ಲೇಖಿಸಲಾಗಿದೆ. ಇದರ ಪ್ರಕಾರ, ಹೊರಗಿನಿಂದ ಮನೆಗೆ ಹಿಂದಿರುಗುವಾಗ ನಾವು ಅನುಸರಿಸುವ ಕೆಲ ಕೆಟ್ಟ ಅಭ್ಯಾಸಗಳನ್ನು ಸುಧಾರಿಸಿದರೆ, ಅದು ನಿಮ್ಮ ಮನೆಗೆ ಅದೃಷ್ಟವನ್ನು ತರುತ್ತದೆ.
ಕೈಕಾಲು ಮುಖ ತೊಳೆಯುವ ಅಭ್ಯಾಸವಿರಲಿ :
ಮೊದಲನೆಯದಾಗಿ, ಹೊರಗೆ ಹೋದವರು ಮನೆಗೆ ಹಿಂದಿರುಗುವಾಗ, ಕೈ, ಕಾಲು ಮತ್ತು ಮುಖವನ್ನು ಚೆನ್ನಾಗಿ ತೊಳೆಯಿರಿ. ಇದು ನಿಮ್ಮೊಂದಿಗೆ ಹೊರಗಿನಿಂದ ಬರುವ ನಕಾರಾತ್ಮಕ ಶಕ್ತಿಯನ್ನು (Negetive energy) ತೆಗೆದುಹಾಕುತ್ತದೆ.
ಇದನ್ನೂ ಓದಿ : ಮಂಗಳನ ರಾಶಿ ಪರಿವರ್ತನೆಯಿಂದ ಈ ನಾಲ್ಕು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ
ಮೊದಲು ದೇವರ ದರ್ಶನ :
ಹೊರಗಿನಿಂದ ಬಂದ ಕೂಡಲೇ ಮೊದಲು ದೇವರ ದರ್ಶನ ಮಾಡಬೇಕು. ದೇವರಿಗೆ ನಮಸ್ಕರಿಸಬೇಕು. ಹೀಗೆ ಮಾಡುವುದರಿಂದ ದೇವರು (God) ಕೂಡಾ ಪ್ರಸನ್ನಗೊಳ್ಳುತ್ತಾರೆ ಎನ್ನುತ್ತದೆ ಶಾಸ್ತ್ರ.
ಶೂ –ಚಪ್ಪಲಿ ಮನೆ ಒಳಗೆ ಬೇಡ:
ಕೆಲವರಿಗೆ ಶೂ ಚಪ್ಪಲಿಯನ್ನು (Shoes) ಮನೆಯ ಳಗೆ ತರುವ ಅಭ್ಯಾಸವಿರುತ್ತದೆ. ಆದರೆ ಇದು ತಪ್ಪು. ಯಾವತ್ತೂ ಶೂ ಚಪ್ಪಲಿಗಳನ್ನು ಮನೆಯ ಹೊರಗೇ ಬಿಡಬೇಕು. ಶೂ ಚಪ್ಪಲಿಗಳೊಂದಿಗೆ ನೆಗೆಟಿವ್ ಎನರ್ಜಿ ಮನೆಯ ಒಳಗೆ ಪ್ರವೇಶಿಸಿ, ಮನೆಯ ನೆಮ್ಮದಿ ಸಂತೋಷ ಹಾಳು ಮಾಡುತ್ತದೆಯಂತೆ. ಹಾಗಾಗಿ ಚಪ್ಪಲಿಗಳನ್ನು ಮನೆಯ ಹೊರಗೆ ಇಡುವುದೇ ಸೂಕ್ತ.
ಇದನ್ನೂ ಓದಿ : ದೇವರ ಕೋಣೆಯ ವಿಚಾರದಲ್ಲಿ ಈ ತಪ್ಪುಗಳು ಆಗದಿರಲಿ ಎಚ್ಚರ..!
ಬರಿಗೈಯಲ್ಲಿ ಮನೆಗೆ ಬರಬಾರದು:
ವಾಸ್ತು ಪ್ರಕಾರ, ಖಾಲಿ ಕೈಯಲ್ಲಿ ಮನೆಯ ಒಳಗೆ ಪ್ರವೇಶಿಸುವುದು ಕೂಡಾ ಅಶುಭ ಎನ್ನಲಾಗುತ್ತದೆ. ಖಾಲಿ ಕೈಯಲ್ಲಿ ಮನೆ ಪ್ರವೇಶ ಎಂದರೆ, ಆರ್ಥಿಕ ಸಮಸ್ಯೆಗಳು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಹಾಗಾಗಿ, ಹೊರಗಿನಿಂದ ಮನೆಗೆ ಬರುವಾಗ, ಖಂಡಿತವಾಗಿಯೂ ಏನನ್ನಾದರೂ ಜೊತೆಯಲ್ಲಿ ತನ್ನಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.