Gayatri Mantraದ ಈ 7 ಲಾಭಗಳು ನಿಮಗೂ ತಿಳಿದಿರಲಿ

ಗಾಯತ್ರಿ ಮಂತ್ರದ ಉಚ್ಛಾರಣೆ ಹಾಗೂ ಅರ್ಥ ತಿಳಿದುಕೂಳ್ಳುವುದರಿಂದ ಈಶ್ವರನ ಪ್ರಾಪ್ತಿಯಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ.

Last Updated : Aug 25, 2020, 09:47 PM IST
Gayatri Mantraದ ಈ 7 ಲಾಭಗಳು ನಿಮಗೂ ತಿಳಿದಿರಲಿ title=

ನವದೆಹಲಿ: ಗಾಯತ್ರಿ ಮಂತ್ರವನ್ನು ಪ್ರಮುಖ ಮಂತ್ರವೆಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ಜಪಿಸುವುದರ ಮೂಲಕ ಮತ್ತು ಅದನ್ನು ಅರ್ಥಮಾಡಿಕೊಳ್ಳುವ ಮೂಲಕ ಈಶ್ವರನ ಕೃಪೆಗೆ ಪಾತ್ರರಾಗುತ್ತಾರೆ ಎಂದು ನಂಬಲಾಗಿದೆ. ಇದನ್ನು ಶ್ರೀ ಗಾಯತ್ರಿ ದೇವಿಯ ಸ್ತ್ರೀ ರೂಪದಲ್ಲಿಯೂ ಕೂಡ ಪೂಜಿಸಲಾಗುತ್ತದೆ. ಈ ಮಂತ್ರದಲ್ಲಿ ಸಾವಿತ್ರಿ ದೇವಿಯನ್ನು ಕೂಡ ಆದಾಧಿಸಲಾಗುತ್ತದೆ, ಆದ್ದರಿಂದ ಇದನ್ನು ಸಾವಿತ್ರಿ ಎಂದೂ ಕರೆಯುತ್ತಾರೆ.

ಈ ಮಂತ್ರ ಹಲವು ಚಮತ್ಕಾರಗಳಿಂದ ಕೂಡಿದೆ. ಈ ಮಂತ್ರ ಜಪಿಸುವುದರಿಂದ ಒಟ್ಟು 7 ರೀತಿಯ ಲಾಭಗಳು ಉಂಟಾಗುತ್ತವೆ.
1. ಉತ್ಸಾಹ ಹಾಗೂ ಸಕಾರಾತ್ಮಕತೆ ಹೆಚ್ಚಾಗುತ್ತದೆ.
2.ಮನಸ್ಸು ಧರ್ಮ ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗುತ್ತದೆ. 
3. ಪೂರ್ವಾಭಾಸ ಪ್ರಾಪ್ತಿಯಾಗುತ್ತದೆ.
4.ಆಶೀರ್ವಾದ ನೀಡುವ ಶಕ್ತಿ ಹೆಚ್ಚಾಗುತ್ತದೆ.
5.ಸ್ವಪ್ನ ಸಿದ್ಧಿ ಪ್ರಾಪ್ತಿಯಾಗುತ್ತದೆ.
6.ಕ್ರೋಧ ಶಾಂತವಾಗುತ್ತದೆ. 
7.ಕೆಟ್ಟ ಸಂಗತಿಗಳಿಂದ ಮನಸ್ಸು ದೂರ ಉಳಿಯುತ್ತದೆ.

ಗಾಯತ್ರಿ ಮಂತ್ರ ಹಾಗೂ ಅದರ ಅರ್ಥ
ॐ भूर् भुवः स्वः.
तत् सवितुर्वरेण्यं.
भर्गो देवस्य धीमहि
धियो यो नः प्रचोदयात् ॥

ಅರ್ಥ: ಪ್ರಾಣಸ್ವರೂಪ, ದುಃಖನಾಶಕ, ಸುಖಸ್ವರೂಪ, ಶ್ರೇಷ್ಠ, ತೇಜಸ್ವಿ, ಪಾಪನಾಶಕ, ದೇವಸ್ವರೂಪ ಆ ಪರಮಾತ್ಮನಿಗೆ ನಾವು ನಮ್ಮ ಅಂತರಾತ್ಮದಲ್ಲಿ ಧರಿಸುತ್ತೇವೆ. ಆ ಪರಮಾತ್ಮ ತಮ್ಮ ಬುದ್ದಿಯನ್ನು ಸನ್ಮಾರ್ಗದೆಡೆಗೆ ಹೋಗಲು ಪ್ರೇರೆಪಿಸಲಿ.

ಮಂತ್ರ ಜಪಿಸುವ ಸರಿಯಾದ ಸಮಯ
- ಗಾಯತ್ರಿ ಮಂತ್ರ ಜಪಿಸುವ ಮೊದಲ ಸೂಕ್ತ ಸಮಯ ಬೆಳಗಿನ ಜಾವ. ಸೂರ್ಯೋದಯಕ್ಕೂ ಸ್ವಲ್ಪ ಹೊತ್ತು ಮೊದಲು ಈ ಮಂತ್ರವನ್ನು ಜಪಿಸಲು ಆರಂಭಿಸಿ, ಸೂರ್ಯೋದಯದ ನಂತರದವರೆಗೆ ಜಪಿಸಬೇಕು.
- ಮಂತ್ರ ಜಪಿಸಲು ಎರಡನೇ ಅತ್ಯುತ್ತಮ ಸಮಯ ಎಂದರೆ ಮಧ್ಯಾಹ್ನದ ಸಮಯ. ಮಧ್ಯಾಹ್ನ ಕೂಡ ಈ ಮಂತ್ರವನ್ನು ಜಪಿಸಲಾಗುತ್ತದೆ.
- ಮೂರನೇ ಅತ್ಯುತ್ತಮ ಸಮಯ ಅಂದರೆ ಸಂಜೆಯ ಸಮಯ. ಸೂರ್ಯಾಸ್ತದ ಸ್ವಲ್ಪಹೊತ್ತು ಮೊದಲು ಈ ಮಂತ್ರದ ಉಚ್ಛಾರಣೆ ಆರಂಭಿಸಿ. ಸೂರ್ಯಾಸ್ತದ ನಂತರ ಸ್ವಲ್ಪ ಹೊತ್ತು ಮಂತ್ರವನ್ನು ಜಪಿಸಬೇಕು.
- ಈ ಮೂರು ಅವಧಿಗಳನ್ನು ಹೊರತುಪಡಿಸಿ ಒಂದು ವೇಳೆ ಮಂತ್ರವನ್ನು ಪಠಿಸಬೇಕಾದರೆ, ಮೌನವಾಗಿದ್ದು ಹಾಗೂ ಮಾನಸಿಕ ರೂಪದಲ್ಲಿ ಮಂತ್ರವನ್ನು ಪಠಿಸಬೇಕು. ಏರು ಧ್ವನಿಯಲ್ಲಿ ಮಂತ್ರವನ್ನು ಪಠಿಸಬಾರದು.

Trending News