Vastu Tips : ಮನೆಯ ಕೇಂದ್ರ ಭಾಗವು ವಾಸ್ತು ಪುರುಷನ ಹೃದಯ ಸ್ಥಳ. ಇದನ್ನು ಬ್ರಹ್ಮ ಸ್ಥಾನ ಎಂದು ಕರೆಯಲಾಗುತ್ತದೆ. ಈ ಸ್ಥಾನವನ್ನು ವಾಸ್ತು ಪುರುಷನ ನಾಭಿ ಎಂದೇ ಹೇಳಲಾಗುತ್ತದೆ. ಹೇಗೆ ನಾವು ಹೊಟ್ಟೆಯ ಮೇಲೆ ಹೇಗೆ ಹೆಚ್ಚು ಭಾರವನ್ನು ಇಡುವುದಿಲ್ಲವೋ ಹಾಗೆಯೇ ಮನೆಯ ಮಧ್ಯಭಾಗದಲ್ಲಿ ಭಾರವನ್ನು ಇಡಬಾರದು. ಈ ಭಾಗದಲ್ಲಿ ತುಂಬಾ ಭಾರವಾದ ವಸ್ತುವನ್ನು ಇಟ್ಟರೆ ಅಥವಾ ಪಿಲ್ಲರ್ ಇಟ್ಟರೆ ಆ ಕಟ್ಟಡದಲ್ಲಿ  ವಾಸ್ತುದೋಷ ಉಂಟಾಗುತ್ತದೆ.  


COMMERCIAL BREAK
SCROLL TO CONTINUE READING

ಗರ್ಭಧರಿಸಲು ಸಾಧ್ಯವಾಗುವುದಿಲ್ಲ : 
ಕಟ್ಟಡದಲ್ಲಿ ವಾಸ್ತು ದೋಷ ಕಂಡು ಬಂದರೆ ಅಥವಾ ವಾಸ್ತು ನಿಯಮದ ಉಲ್ಲಂಘನೆಯಾದರೆ, ಅಲ್ಲಿ ವಾಸಿಸುವ ಜನರು ರೋಗಗಳಿಂದ ಬಳಲುವಂತಾಗುತ್ತದೆ. ಕೆಲವು ಮಹಿಳೆಯರು ಗರ್ಭಧರಿಸುತ್ತಾರೆ ಆದರೆ ಇನ್ನು ಕೆಲವರಿಗೆ ಗರ್ಭಧರಿಸಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಎದುರಿಸುವ ಈ ಸಮಸ್ಯೆಗೆ ವಾಸ್ತು ಕೂಡ ಕಾರಣವಾಗಿರುತ್ತದೆ. ಮನೆಯಲ್ಲಿ ವಾಸ್ತು ದೋಷ ಇದ್ದಾರೆ ಮಹಿಳೆಯರಿಗೆ ಆಗಾಗ ಗರ್ಭಪಾತವಾಗುತ್ತದೆ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ : Astro Tips: ಹೊಸ ಕಾರಿನ ಕೆಳಗೆ ನಿಂಬೆ ಹಣ್ಣನ್ನು ಏಕೆ ಇಡಲಾಗುತ್ತದೆ..? ಹಿಂದಿನ ಸತ್ಯ ತಿಳಿಯಿರಿ..


ಮಧುಮೇಹ ಸಮಸ್ಯೆ : 
ವಾಸ್ತು ದೋಷವಿದ್ದರೆ ಮನೆಯ ಯಜಮಾನನಿಗೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ.   ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಏಕೆಂದರೆ ಮೇದೋಜೀರಕ ಗ್ರಂಥಿಯ ಸಮಸ್ಯೆ ಮತ್ತು ಮೇದೋಜೀರಕ ಗ್ರಂಥಿಯಿಂದ ಶುಗರ್ ಸಮಸ್ಯೆಗಳು ಬರುತ್ತವೆ.ಅಲ್ಲದೆ ಅವರಿಗೆ ಯಕೃತ್ತಿನ ಸಮಸ್ಯೆಯೂ ಎದುರಾಗುತ್ತದೆ. 


ಮರವನ್ನು ನೆಡಿ : 
ಹಳೆಕಾಲದ ಮನೆಗಳನ್ನು ನೋಡಿರಬೇಕು. ಅಲ್ಲಿ ಮನೆಯ ಮಧ್ಯ  ಮಧ್ಯದಲ್ಲಿ ಅಂಗಳವಿರುತ್ತಿತ್ತು. ಆದರೆ ಈಗ ಹೊಸ ಫ್ಲಾಟ್ ಶೈಲಿಯಲ್ಲಿ, ಪ್ರತಿ ಇಂಚು ಇಂಚನ್ನು   ಬಳಸಲಾಗುತ್ತದೆ. ಮನೆಯ ಮಧ್ಯದ ಜಾಗವನ್ನು ಖಾಲಿ ಬಿಡುವುದಿಲ್ಲ. ಒಂದು ವೇಳೆ ಮನೆಯ ಮಧ್ಯ ಭಾಗ ಖಾಲಿಯಿದ್ದರೆ ಅಲ್ಲಿ ತುಳಸಿ ಗಿಡವನ್ನು ನೆಡಬಹುದು. 


ಇದನ್ನೂ ಓದಿ : Vastu Tips for Footwear: ಪಾದರಕ್ಷೆಗೆ ಸಂಬಂಧಿಸಿದ ಈ ವಿಷಯಗಳನ್ನು ನಿರ್ಲಕ್ಷಿಸಿದರೆ ತಪ್ಪಿದ್ದಲ್ಲ ಅನಾಹುತ!


ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ : 
ಹಿಂದಿನ ಕಾಲದಲ್ಲಿ ನಿರ್ಮಿಸಿದ ಮನೆಗಳ ಮಧ್ಯಭಾಗವನ್ನು ಖಾಲಿ ಇಡಲಾಗುತ್ತಿತ್ತು. ಆದರೆ ಈಗಿನ ಮನೆಯನ್ನು ಆ ರೀತಿ ನಿರ್ಮಿಸುವುದು ಸಾಧ್ಯವಾಗದೇ ಇರಬಹುದು. ಆದರೆ ಮನೆಯ ಈ ಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬಹುದು.ಯಾವುದೇ ರೀತಿಯ ಅಶುದ್ಧತೆ ಇಲ್ಲಿ ಇರದಂತೆ ನೋಡಿಕೊಳ್ಳಿ. ಇಲ್ಲಿ ಜಮೀನಿನ ಮೇಲೆ ವಿಭಿನ್ನ ರೀತಿಯಲ್ಲಿ ರಂಗೋಲಿ ಹಾಕಬೇಕು ಅಥವಾ ರಂಗೋಲಿ ಇರುವ ಟೈಲ್ಸ್ ಹಾಕಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.