Footwear and Vastu Shastra In Kannada: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯ ಶಾಸ್ತ್ರದಂತೆ ವಾಸ್ತು ಶಾಸ್ತ್ರಕ್ಕೂ ಸಹ ಬಹಳ ಪ್ರಾಮುಖ್ಯತೆ ಇದೆ. ಮನೆ ಕಟ್ಟುವುದರಿಂದ ಹಿಡಿದು ಮನೆಯಲ್ಲಿ ಯಾವ ವಸ್ತುಗಳು ಯಾವ ಜಾಗದಲ್ಲಿ, ಯಾವ ದಿಕ್ಕಿನಲ್ಲಿರಬೇಕು ಎಂಬ ಎಲ್ಲಾ ವಿಷಯಗಳನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ನಾವು ಧರಿಸುವ ಚಪ್ಪಲಿ, ಶೂ ಸಹ ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಹಾಗಾಗಿ, ಪಾದರಕ್ಷೆಗಳ ಕುರಿತ ಸಣ್ಣ ತಪ್ಪುಗಳು ಕೂಡ ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರಬಹುದು ಎಂದು ಹೇಳಲಾಗುತ್ತದೆ.
ವಾಸ್ತುವಿನಲ್ಲಿ ಶೂ ಮತ್ತು ಚಪ್ಪಲಿಗಳಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಇವುಗಳ ನಿರ್ಲಕ್ಷ್ಯದಿಂದ ಜೀವನದಲ್ಲಿ ಭಾರೀ ಅನಾಹುತ ಸಂಭವಿಸಬಹುದು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಫ್ಲಾಟ್ ಖರೀದಿಸುವಾಗ ಈ 9 ವಿಷಯಗಳನ್ನು ನೆನಪಿನಲ್ಲಿಡಿ..!
ವಾಸ್ತುಶಾಸ್ತ್ರದ ಪ್ರಕಾರ, ಅಪ್ಪಿತಪ್ಪಿಯೂ ಪಾದರಕ್ಷೆಗಳಿಗೆ ಸಂಬಂಧಿಸಿದ ಈ ತಪ್ಪುಗಳನ್ನು ಮಾಡಲೇಬಾರದು:
* ಉಡುಗೊರೆ:
ವಾಸ್ತು ಶಾಸ್ತ್ರದ ಪ್ರಕಾರ, ಯಾರಿಗೂ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಬಾರದು. ಇದು ವ್ಯಕ್ತಿಯ ಹಣಕಾಸಿನ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು ಎನ್ನಲಾಗುತ್ತದೆ.
* ಇಂತಹ ಪಾದರಕ್ಷೆಗಳ ಬಗ್ಗೆ ವಿಶೇಷ ಗಮನವಿರಲಿ:
ನೀವು ಸಂದರ್ಶನಕ್ಕಾಗಿ ಅಥವಾ ವ್ಯವಹಾರಕ್ಕೆ ಇಲ್ಲವೇ ಯಾವುದೇ ಶುಭ ಕೆಲಸಕ್ಕೆ ಹೋಗುತ್ತಿದ್ದರೆ, ಹರಿದ ಅಥವಾ ಕೊಳಕು ಬೂಟುಗಳನ್ನು ಧರಿಸಬಾರದು ಎಂಬುದರ ಬಗ್ಗೆ ವಿಶೇಷ ಕಾಳಜಿ ಇರಲಿ. ವಾಸ್ತು ಪ್ರಕಾರ, ಇದು ನಿಮ್ಮ ಪ್ರಗತಿಗೆ ಅಡ್ಡಿಯಾಗಬಹುದು.
* ಕಚೇರಿಗೆ ಹೋಗುವಾಗ ಈ ಬಣ್ಣದ ಬೂಟುಗಳನ್ನು ಧರಿಸಬಾರದು:
ಕಂದು ಅಥವಾ ಬೂದು ಬಣ್ಣದ ಬೂಟುಗಳನ್ನು ಧರಿಸಿ ಕಚೇರಿಗೆ ಹೋಗಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಈ ರೀತಿ ಮಾಡುವುದರಿಂದ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ. ಇದು ನಿಮ್ಮ ಯಶಸ್ಸನ್ನು ಕುಂಠಿತಗೊಳಿಸುತ್ತವೆ.
ಇದನ್ನೂ ಓದಿ- ಮನೆಯಲ್ಲಿ ಟೈಲ್ಸ್ ಹಾಕಬೇಕೆ? ವಾಸ್ತು ಶಾಸ್ತ್ರದ ಈ ಸಂಗತಿಗಳನ್ನು ನೆನಪಿನಲ್ಲಿಡಿ!
* ಮನೆಯೊಳಗೆ ಚಪ್ಪಲಿ:
ಮನೆ ಪ್ರವೇಶಿಸಿದ ಕೂಡಲೇ ಅನೇಕರು ಶೂ, ಚಪ್ಪಲಿಗಳನ್ನು ಅಲ್ಲಿ ಇಲ್ಲಿ ಎಸೆಯುತ್ತಾರೆ. ಹೀಗೆ ಮಾಡುವುದರಿಂದ ಶತ್ರುಗಳ ಸಂಖ್ಯೆ ಹೆಚ್ಚುತ್ತದೆ ಮತ್ತು ಶತ್ರುಗಳು ಯಾವಾಗಲೂ ನಿಮಗೆ ತೊಂದರೆ ಕೊಡುತ್ತಲೇ ಇರುತ್ತಾರೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.