ನವದೆಹಲಿ : ಊಟ ಮುಗಿಸಿದ ನಂತರ ಕೆಲವರಿಗೆ ತಟ್ಟೆಯಲ್ಲಿಯೇ ಕೈತೊಳೆಯುವುದು ರೂಢಿಯಾಗಿರುತ್ತದೆ. ಕೆಲವರು ಇದೊಂದು ಪದ್ದತಿ ಎಂದೂ ಹೇಳುತ್ತಾರೆ. ಆದರೆ ಈ ರೀತಿ ಮಾಡುವುದು ಸರಿಯಾದ ಕ್ರಮವಲ್ಲ. ಭೋಜನದ ನಂತರ ಮಾಡುವ  ತಪ್ಪು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ,  ಈ ರೀತಿ ಮಾಡುವುದು ಅಶುಭ ಎನ್ನಲಾಗಿದೆ. ಹೀಗೆ ಮಾಡುವುದರಿಂದ ಮನೆಗೆ ದರಿದ್ರ ವಕ್ಕರಿಸುತ್ತದೆಯಂತೆ.  


COMMERCIAL BREAK
SCROLL TO CONTINUE READING

ಮುನಿದುಕೊಳ್ಳುತ್ತಾರೆ ತಾಯಿ ಅನ್ನಪೂರ್ಣ ಮತ್ತು ಲಕ್ಷ್ಮಿ : 
ಊಟ ಮುಗಿಸಿದ ನಂತರ ತಟ್ಟೆಯಲ್ಲಿಯೇ  ಕೈ ತೊಳೆಯುವುದು ಅಂದರೆ ತಟ್ಟೆಯಲ್ಲಿ ಉಳಿದಿರುವ ಅನ್ನಕ್ಕೆ (Rice) ಅವಮಾನ ಮಾಡಿದಂತೆ. ಅನ್ನಕ್ಕೆ ಅವಮಾನವಾದರೆ ಅನ್ನಪೂರ್ಣ ದೇವಿ (Goddess Annapurna) ಮತ್ತು ಲಕ್ಷ್ಮಿ (Godess Lakshmi) ಮುನಿಸಿಕೊಳ್ಳುತ್ತಾರಂತೆ. ಹಾಗಾಗಿ ಊಟದ ತಟ್ಟೆಯಲ್ಲಿ ಕೈ ತೊಳೆಯದಂತೆ ಧರ್ಮ ಶಾಸ್ತ್ರದಲ್ಲಿಯೂ ಹೇಳಲಾಗಿದೆ.  ಯಜ್ಞದಲ್ಲಿ ಆಹುತಿ ನೀಡುವ ವಸ್ತುವನ್ನು ದೇವತೆಗಳು ಆಹಾರ ರೂಪದಲ್ಲಿ ಸ್ವೀಕರಿಸುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ, ಆಹಾರವನ್ನು (Food) ಎಂದಿಗೂ ಅವಮಾನಿಸಬಾರದು.


ಇದನ್ನೂ ಓದಿ : ಹೊರಗಿನಿಂದ ಮನೆಗೆ ಬರುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ..!


ಈ ವಿಚಾರಗಳನ್ನು ಸದಾ ನೆನಪಿಡಿ :  
-ಸಾಧ್ಯವಾದರೆ, ಆಹಾರವನ್ನು (food) ತೆಗೆದುಕೊಳ್ಳುವ ಮೊದಲು, ದೇವರನ್ನು ಧ್ಯಾನಿಸಿ ಮತ್ತು ದೇವರಿಗೆ ಧನ್ಯವಾದ ತಿಳಿಸಿ. 
- ಯಾವತ್ತೂ ಕುಳಿತುಕೊಂಡೇ ಆಹಾರ ಸೇವಿಸಿ. ಇನ್ನು ನೆಲದ ಮೇಲೆ ಕುಳಿತು ನೂಟ ಮಾಡುವುದಾದರೆ ಬರೀ ನೆಲದ ಮೇಲೆ ಕುಳಿತು ಊಟ ಮಾಡಬಾರದು. ನೆಲಕ್ಕೆ ಏನ್ನನಾದರು ಹಾಸಬೇಕು. ನಂತರ ಕುಳಿತು ಊಟ ಮಾಡಬೇಕು.
-ಸಾಧ್ಯವಾದರೆ, ಊಟದ ತಟ್ಟೆಯ ಕೆಳಗೆ ಕೂಡಾ ಚಾದರ ಹಾಸಿ. 
-ಊಟ ಮಾಡುವಾಗ ಶಾಂತ ಚಿತ್ತದಿಂದ ಇರಿ. ಕೋಪ ಮಾಡಿಕೊಳ್ಳಬೇಡಿ. ಮತ್ತು ತಿನ್ನುವಾಗ, ವಿಚಿತ್ರ ಶಬ್ದಗಳನ್ನು ಮಾಡಬೇಡಿ. 
-ಊಟದ ತಟ್ಟೆಯಲ್ಲಿ ಅನ್ನ ಬಿಡಬೇಡಿ


ಇದನ್ನೂ ಓದಿ : ಮಂಗಳನ ರಾಶಿ ಪರಿವರ್ತನೆಯಿಂದ ಈ ನಾಲ್ಕು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.