8ನೇ ತಿಂಗಳಲ್ಲಿ ಮಕ್ಕಳಿಗೆ ತಿನ್ನಿಸಿ ನೋಡಿ ಈ ಆಹಾರ..!

ಮಗುವಿಗೆ ಘನ ಆಹಾರ ನೀಡಲು ಆರಂಭಿಸುವಾಗ ಯಾವ ಆಹಾರವನ್ನು ನೀಡಬೇಕು ಎಂದು ತಿಳಿದುಕೊಳ್ಳುವುದು ಅತಿ ಅವಶ್ಯಕ. ಇವತ್ತು ನಾವು ತೆಂಗಿನ ಕಾಯಿ ಮತ್ತು ಅಕ್ಕಿಯನ್ನು  ಬೆರೆಸಿ ತಯಾರಿಸಬಹುದಾದ ಮಗುವಿನ ಆಹಾರದ ಬಗ್ಗೆ ಹೇಳಲಿದ್ದೇವೆ.

Written by - Ranjitha R K | Last Updated : May 2, 2021, 03:50 PM IST
  • ನವಜಾತ ಶಿಶುವಿಗೆ ಮೊದಲ 6 ತಿಂಗಳು ತಾಯಿ ಹಾಲನ್ನು ಹೊರತು ಪಡಿಸಿ ಬೇರೆ ಏನನ್ನೂ ನೀಡಬಾರದು.
  • 8 ತಿಂಗಳ ನಂತರ ಮಗುವಿಗೆ ಘನ ಆಹಾರವನ್ನು ನೀಡಲು ಆರಂಭಿಸಬಹುದು.
  • ತೆಂಗಿನ ಕಾಯಿ ಮತ್ತು ಅಕ್ಕಿಯನ್ನು ಬೆರೆಸಿ ತಯಾರಿಸಬಹುದಾದ ಮಗುವಿನ ಆಹಾರದ ಬಗ್ಗೆತಿಳಿಯಿರಿ
8ನೇ ತಿಂಗಳಲ್ಲಿ ಮಕ್ಕಳಿಗೆ ತಿನ್ನಿಸಿ ನೋಡಿ ಈ ಆಹಾರ..!
8 ತಿಂಗಳ ನಂತರ ಮಗುವಿಗೆ ಘನ ಆಹಾರವನ್ನು ನೀಡಲು ಆರಂಭಿಸಬಹುದು. (file photo)

ಬೆಂಗಳೂರು : ನವಜಾತ ಶಿಶುವಿಗೆ ಮೊದಲ 6 ತಿಂಗಳು ತಾಯಿ ಹಾಲನ್ನು ಹೊರತು ಪಡಿಸಿ ಬೇರೆ ಏನನ್ನೂ ನೀಡಬಾರದು. 6 ತಿಂಗಳ ನಂತರ ಮಕ್ಕಳಿಗೆ ಸಾಮಾನ್ಯವಾಗಿ ತಾಯಿ ಹಾಲು ಬಿಟ್ಟು ಬೇರೆ ಆಹಾರ ನೀಡಲು ಆರಂಭಿಸುತ್ತೇವೆ. ಅಂದರೆ, ತೆಳುವಾಗಿ ಮಾಡಿದ ಸೆರೆಲಾಕ್, ದಾಲ್ ಬೇಯಿಸಿದ ನೀರನ್ನು (Dal water) ಮಗುವಿಗೆ 6 ತಿಂಗಳ ನಂತರ ನೀಡಬಹುದು. ಇನ್ನು 8 ತಿಂಗಳ ನಂತರ ಮಗುವಿಗೆ ಘನ ಆಹಾರವನ್ನು ನೀಡಲು ಆರಂಭಿಸಬಹುದು.  ಮಗುವಿಗೆ ಘನ ಆಹಾರ ನೀಡಲು ಆರಂಭಿಸುವಾಗ ಯಾವ ಆಹಾರವನ್ನು ನೀಡಬೇಕು ಎಂದು ತಿಳಿದುಕೊಳ್ಳುವುದು ಅತಿ ಅವಶ್ಯಕ. ಇವತ್ತು ನಾವು ತೆಂಗಿನ ಕಾಯಿ (Coconut) ಮತ್ತು ಅಕ್ಕಿಯನ್ನು (Rice) ಬೆರೆಸಿ ತಯಾರಿಸಬಹುದಾದ ಮಗುವಿನ ಆಹಾರದ ಬಗ್ಗೆ ಹೇಳಲಿದ್ದೇವೆ. ಇದು ಮಗುವಿನ ಮೂಳೆಗಳನ್ನು ಬಲಿಷ್ಟಗೊಳಿಸಲು ಸಹಾಯ ಮಾಡುತ್ತದೆ. 

ತೆಂಗಿನಕಾಯಿ ಮತ್ತು ಅಕ್ಕಿಯಿಂದ ತಯಾರಿಸಿದ ಹೆಲ್ದಿ ಪ್ಯೂರಿ ಮಗುವಿನ ಉತ್ತಮ ಆರೋಗ್ಯಕ್ಕೆ ಬಹಳ ಸಹಕಾರಿ : 
ಬೇಕಾಗುವ ಸಾಮಗ್ರಿ :

ಹಾಲು (milk
ಎರಡು ಟೀ ಚಮಚ ಅಕ್ಕಿ (Rice) 
ಎರಡು ಬಾದಾಮಿ
ತೆಂಗಿನಕಾಯಿಯ 4 ರಿಂದ 5 ತುಂಡುಗಳು
 ಸಣ್ಣ ತುಂಡು ಬೆಲ್ಲ (Jaggery)
ಒಂದು ಏಲಕ್ಕಿ

ಇದನ್ನೂ ಓದಿ : Super Foods for Immunity : ರೋಗನಿರೋಧಕ ಶಕ್ತಿಗಾಗಿ ಈ 5 ಆಹಾರಗಳನ್ನು ಸೇವಿಸಿ!

ಈ ಸರಳ ವಿಧಾನಗಳಿಂದ ಮನೆಯಲ್ಲಿ ತೆಂಗಿನಕಾಯಿ ಮತ್ತು ಅಕ್ಕಿಯ ಪ್ಯೂರಿಯನ್ನು ತಯಾರಿಸಬಹುದು : 
-  ಮೊದಲು ಅಕ್ಕಿಯನ್ನು ಶುದ್ಧ ನೀರಿನಿಂದ ತೊಳೆದು 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
- ಜೊತೆಗೆ ಒಂದು ಲೋಟದಲ್ಲಿ ಬಾದಾಮಿಯನ್ನು ಹಾಕಿ 30 ನಿಮಿಷಗಳವರೆಗೆ ನೆನೆಸಿಡಿ.
- ಸ್ವಲ್ಪ ತೆಂಗಿನಕಾಯಿಯನ್ನು (coconut)  ತುರಿದಿಟ್ಟುಕೊಳ್ಳಿ. 
- ನೆನಸಿಟ್ಟ ಬಾದಾಮಿಯ ಸಿಪ್ಪೆಯನ್ನು ತೆಗೆಯಿರಿ .
- ಈಗ ಅಕ್ಕಿ, ಬಾದಾಮಿ ಮತ್ತು ತೆಂಗಿನಕಾಯಿ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
- ರುಬ್ಬುವಾಗ ಏಲಕ್ಕಿ ಮತ್ತು ಬೆಲ್ಲವನ್ನು ಕೂಡಾ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
- ರುಬ್ಬಿದ ಮಿಶ್ರಣವನ್ನು ಜರಡಿ ಮಾಡಿ,
- ಜರಡಿಯಲ್ಲಿ ಸಂಗ್ರಹವಾಗಿರುವ ಪೇಸ್ಟ್ ಮೇಲೆ ಅರ್ಧ ಲೋಟ ನೀರು ಸುರಿಯಿರಿ ಮತ್ತು ಅದನ್ನು ಮತ್ತೆ ಫಿಲ್ಟರ್ ಮಾಡಿ.
- ನಂತರ, ಪ್ಯಾನ್ ಅನ್ನು ಗ್ಯಾಸ್ ಮೇಲಿರಿಸಿ ಪ್ಯಾನ್ ಗೆ ಹಾಲನ್ನು (milk) ಹಾಕಿ. ಮಂದ ಉರಿಯಲ್ಲಿ ಹಾಲು ಕಾಯಿಸಿ . ಹಾಲು ಕುದಿಯುವಾಘ ಮಿಕ್ಸಿ ಮಾಡಿಟ್ಟುಕೊಂಡ ಮಿಶ್ರಣವನ್ನು ಹಾಕಿ. ಹಾಳಿನೊಂದಿಗೆ ಕಲಕುತ್ತಾ ಬನ್ನಿ. ಮಿಶ್ರಣ ಗಟ್ಟಿಯಾಗುತ್ತಾ ಬಂದರೆ ಗ್ಯಾಸ್ (Gas) ಅನ್ನು ಆಫ್ ಮಾಡಿ. ಮಿಶ್ರಣವನ್ನು ಬೇರೊಂದು ಪಾತ್ರೆಗೆ ತೆಗದಿಟ್ಟುಕೊಳ್ಳಿ. 

ಈ ತೆಂಗಿನಕಾಯಿ-ಅಕ್ಕಿಯಿಂದ ತಯಾರಿಸಲ್ಪಟ್ಟ ಈ ಆಹಾರ ಮಗುವಿಗೆ ಅತ್ಯಂತ ಆರೋಗ್ಯಕರವಾಗಿರುತ್ತದೆ.  ಇದರಲ್ಲಿ ವಿಟಮಿನ್ ಸಿ ಹೇರಳವಗಿರುತ್ತದೆ. ವಿಟಮಿನ್ ಸಿ ಮಗುವಿನ ರೋಗನಿರೋಧಕ (Immunity) ಶಕ್ತಿ ಹೆಚ್ಚಿಸಲು ಅತ್ಯವಶ್ಯಕವಾಗಿದೆ. ಅಲ್ಲದೆ ಇದರಲ್ಲಿರುವ ಕೋಪರ್ ಅಂಶವು ಮಗುವಿಗೆ ಗ್ಲೋಯಿಂಗ್ ಸ್ಕಿನ್ ನೀಡುತ್ತದೆ. ಅಲ್ಲದೆ  ಮಗುವಿಗೆ ಮಲಬದ್ಧತೆ ಸಮಸ್ಯೆಯಿದ್ದರೂ ನಿವಾರಣೆಯಾಗುತ್ತದೆ. 

ಇದನ್ನೂ ಓದಿ : Healthy Parenting During Covid-19: ಕರೋನಾ ಯುಗದಲ್ಲಿ ಈ ರೀತಿ ಇರಲಿ ಮಕ್ಕಳ ಕಾಳಜಿ

 ಬೆಲ್ಲದಿಂದ ಮಗುವಿನ ಆರೋಗ್ಯಕ್ಕಾಗುವ ಪ್ರಯೋಜನಗಳು : 
ಈ ಖಾದ್ಯಕ್ಕೆ ಬೆಲ್ಲವನ್ನು ಸೇರಿಸುವುದಿಂದ ಇದು ರುಚಿ ಹೆಚ್ಚಿಸುತ್ತದೆ. ರುಚಿಯೊಂದಿಗೆ ಪೋಷಣೆಯನ್ನು ಕೂಡಾ ನೀಡುತ್ತದೆ.   ಕೇವಲ 10 ಗ್ರಾಂ ಬೆಲ್ಲದಲ್ಲಿ 0.3 ಮಿಗ್ರಾಂ ಕಬ್ಬಿಣದ ಅಂಶವಿರುತ್ತದೆ. ಬೆಲ್ಲದಲ್ಲಿ ಕಬ್ಬಿಣ ಮತ್ತು ರಂಜಕ ಮತ್ತು ಕ್ಯಾಲ್ಸಿಯಂ ಕೂಡ ಇರುತ್ತವೆ, ಇದು ಮಗುವಿನ ಎಲುಬುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.  ಇದಲ್ಲದೆ, ಬೆಲ್ಲದಲ್ಲಿ ವಿಟಮಿನ್ ಬಿ 4, ಬಿ 5, ಬಿ 6 ಮತ್ತು  ಮೆಗ್ನೀಸಿಯಮ್, ಸೆಲೆನಿಯಮ್ ಮತ್ತು ಸತು, ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. 

ಏಲಕ್ಕಿ ಸೇವನೆಯಿಂದ ಮಗುವಿಗಾಗುವ ಪ್ರಯೋಜನ : 
ಮಗುವಿಗೆ ಮಲಬದ್ಧತೆ ಸಮಸ್ಯೆ ಇದ್ದರೆ, ಅದು ನಿವಾರಣೆಯಾಗುತ್ತದೆ. ಜೀರ್ಣಕಾರಿ ಕಿಣ್ವಗಳಂತೆ ಏಲಕ್ಕಿ ಆಹಾರ ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
ಏಲಕ್ಕಿಯಲ್ಲಿ ವಿಟಮಿನ್ ಎ ಕೂಡ ಸಮೃದ್ಧವಾಗಿದೆ, ಇದು ಮಗುವಿನ ಕೂದಲು ಮತ್ತು ಕಣ್ಣುಗಳನ್ನು (Eye) ಆರೋಗ್ಯವಾಗಿರಿಸುತ್ತದೆ. ಏಲಕ್ಕಿಯಲ್ಲಿರುವ ಜೀರ್ಣಕಾರಿ ಕಿಣ್ವಗಳು ಮಗುವಿನ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ.  ಏಲಕ್ಕಿಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಮಗುವಿನ ಪಿತ್ತಜನಕಾಂಗವನ್ನು ಸ್ವಚ್ಛವಾಗಿರಿಸುತ್ತವೆ, 

ಇದನ್ನೂ ಓದಿ : Corona: Paracetamol ಸೇರಿದಂತೆ ಈ ಅತ್ಯಾವಶ್ಯಕ ಔಷಧಿಗಳ ಬೆಲೆ ಏರಿಕೆ ಸಾಧ್ಯತೆ, ಕಾರಣ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News