Dream and Death: ಕನಸಲ್ಲಿ ಸಾವು ಕಂಡರೆ ಶುಭವೇ ? ಅಶುಭವೇ ತಿಳಿಯಿರಿ
ನಾವು ಯಾವತ್ತು ಯೋಚನೆ ಮಾಡಲು ಕೂಡಾ ಬಯಸದ ಕೆಲವು ಸಂಗತಿಗಳು ಕನಸಿನಲ್ಲಿ ಕಾಣುತ್ತದೆ. ಅದು ಸಾವಿಗೆ ಸಂಬಂಧಪಟ್ಟ ಕನಸು ಆಗಿರಬಹುದು.
ನವದೆಹಲಿ : ಸ್ವಪ್ನ ಶಾಸ್ತ್ರದ ಪ್ರಕಾರ, ಪ್ರತಿ ಕನಸಿಗೆ ತನ್ನದೇ ಆದ ವಿಭಿನ್ನ ಅರ್ಥವಿದೆ. ಅನೇಕ ಬಾರಿ ನಾವು ಕನಸಿನಲ್ಲಿ (Dream) ದೈನಂದಿನ ಕೆಲಸಕ್ಕೆ ಸಂಬಂಧಿಸಿದ ವಿಷಯಗಳನ್ನೆ ನೋಡುತ್ತೇವೆ. ಆದರೆ, ಕೆಲವೊಮ್ಮೆ ಕೆಲವು ವಿಚಿತ್ರವಾದ ಸಂಗತಿಗಳು ಕನಸಿನಲ್ಲಿ ಕಂಡುಬರುತ್ತವೆ. ಆ ಕನಸಿಗು ನಮಗೂ ಏನು ಸಂಬಂಧ ಎನ್ನುವುದೇ ನಮಗೆ ತಿಳಿಯುವುದಿಲ್ಲ. ಆದರೆ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿದೆಯಂತೆ.
ಅನಾರೋಗ್ಯಪೀಡಿತನ ಸಾವು ಕಂಡರೆ :
ನಾವು ಯಾವತ್ತು ಯೋಚನೆ ಮಾಡಲು ಕೂಡಾ ಬಯಸದ ಕೆಲವು ಸಂಗತಿಗಳು ಕನಸಿನಲ್ಲಿ (Dream) ಕಾಣುತ್ತದೆ. ಅದು ಸಾವಿಗೆ ಸಂಬಂಧಪಟ್ಟ ಕನಸು ಆಗಿರಬಹುದು. ಪ್ರತಿ ಬಾರಿಯೂ ಸಾವಿಗೆ (Dream about death) ಸಂಬಂಧಿಸಿದ ಕನಸು ಅಶುಭಾವಾಗಿರುತ್ತದೆ ಎಂದಲ್ಲ. ಕೆಲವೊಮ್ಮೆ ಇದು ಶುಭ ಚಿಹ್ನೆಗಳನ್ನು ಸಹ ನೀಡುತ್ತದೆ. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಮರಣವನ್ನು ಕನಸಿನಲ್ಲಿ ಕಂಡರೆ, ಆ ವ್ಯಕ್ತಿಯ ಆರೋಗ್ಯ (Health) ಸುಧಾರಿಸಲಿದೆಯಂತೆ. ಇದು ಆತ ಚೇತರಿಕೆ ಕಾಣಲಿರುವ ಸಂಕೇತ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ .
ಇದನ್ನೂ ಓದಿ : Dreams related with Money: ಈ ವಸ್ತುಗಳು ಕನಸಲ್ಲಿ ಬಂದರೆ ಭಾರೀ ಧನ ಲಾಭದ ಮುನ್ಸೂಚನೆ
ನಿಮ್ಮ ಸಾವನ್ನೇ ಕನಸಿನಲ್ಲಿ ಕಾಣುವುದು :
ನಿಮ್ಮ ಮರಣವನ್ನು ಕನಸಿನಲ್ಲಿ ನೋಡುವುದು ಎಂದರೆ ನೀವು ದೀರ್ಘಾಯುಶಿಗಳಾಗುತ್ತೀರಿ (Long Life) ಎಂದು. ಮತ್ತು ನಿಮ್ಮ ದೀರ್ಘಕಾಲದ ತೊಂದರೆಗಳು ಕೊನೆಗೊಳ್ಳುವ ಲಕ್ಷಣವನ್ನು ಇದು ತೋರಿಸುತ್ತದೆ. ಕನಸಿನಲ್ಲಿ ಸಾವನ್ನು ಕಾಣುವುದು ಎಂದರೆ ಜೀವನದಲ್ಲಿ ಹೊಸ ಅಧ್ಯಾಯದ ಆರಂಭ ಎಂದರ್ಥ. ನಿಮ್ಮ ಕನಸಿನಲ್ಲಿ ಪ್ರೀತಿಪಾತ್ರರ ಅಥವಾ ಸಂಬಂಧಿಕರ ಮರಣವನ್ನು ನೋಡಿದರೆ, ಭಯ ಪಡಬೇಡಿ. ಅವರ ಆಯುಷ್ಯ ಹೆಚ್ಚುತ್ತದೆಯಂತೆ.
ಸತ್ತ ವ್ಯಕ್ತಿ ಕನಸಿನಲ್ಲಿ ಬರುವುದು :
ಸ್ವಪ್ನ ಶಾಸ್ತ್ರದ ಪ್ರಕಾರ( Swapna shastra) , ಕನಸಿನಲ್ಲಿ ಸತ್ತ ವ್ಯಕ್ತಿಯನ್ನು ಕಂಡರೆ ಅವರ ಜೊತೆಗಿನ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಮರಣ ಹೊಂದಿದ ವ್ಯಕ್ತಿ ಕನಸಿನಲ್ಲಿ ಕಂಡರೆ , ಅವರ ಆಶೀರ್ವಾದ ಸಿಗಲಿದೆ ಎಂದು ಅರ್ಥ.
ಇದನ್ನೂ ಓದಿ : Unique Shiva Temple:ಇಲ್ಲಿ ನಡೆಯುತ್ತದೆ ಮಹಾದೇವನ ತುಂಡಾದ ತ್ರಿಶೂಲ ಪೂಜೆ, ದೇವಸ್ಥಾನದ ಇತರೆ ನಿಗೂಢ ರಹಸ್ಯಗಳ ಮಾಹಿತಿ ಇಲ್ಲಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.