Unique Shiva Temple:ಇಲ್ಲಿ ನಡೆಯುತ್ತದೆ ಮಹಾದೇವನ ತುಂಡಾದ ತ್ರಿಶೂಲ ಪೂಜೆ, ದೇವಸ್ಥಾನದ ಇತರೆ ನಿಗೂಢ ರಹಸ್ಯಗಳ ಮಾಹಿತಿ ಇಲ್ಲಿದೆ

Sudh Mahadev Temple - ಜಮ್ಮುವಿನಲ್ಲಿ ದೇವಾಧಿದೇವ ಮಹಾದೇವನ ಒಂದು ವಿಶಿಷ್ಟ ಮಂದಿರವಿದೆ . ಇದರ ಹೆಸರು ಓರ್ವ ರಾಕ್ಷೆಸನ ಹೆಸರನ್ನು ಆಧರಿಸಿದೆ. ಅಷ್ಟೇ ಅಲ್ಲ ಈ ದೇವಸ್ಥಾನದಲ್ಲಿ ಶಿವನ ತುಂಡಾದ ತ್ರಿಶೂಲದ (Broken Trishul) ಪೂಜೆ ನೆರವೇರಿಸಲಾಗುತ್ತದೆ. ಈ ದೇವಸ್ಥಾನಕ್ಕೆ ಸಂಬಂಧಿಸಿದ ಇತರೆ ನಿಗೂಢ ರಹಸ್ಯಗಳನ್ನು ತಿಳಿದುಕೊಳ್ಳಲು ಈ ಲೇಖನ ತಪ್ಪದೆ ಓದಿ.

Written by - Nitin Tabib | Last Updated : Apr 6, 2021, 06:26 PM IST
  • ಜಮ್ಮುವಿನ ಹತ್ತಿರದಲ್ಲಿರುವ ಪಟನಿಟಾಪ್ ನಲ್ಲಿದೆ ಸುಧಮಹಾದೇವ ಮಂದಿರ.
  • ಸುಧಾಂತ್ ರಾಕ್ಷೆಸನ ಹೆಸರಿನ ಕಾರಣ ಇದಕ್ಕೆ ಸುಧಮಹಾದೇವ ಮಂದಿರ ಎಂಬ ಹೆಸರು ಬಂತು.
  • ಈ ದೇವಸ್ಥಾನದಲ್ಲಿದೆ ಶಿವನ ತುಂಡಾದ ತ್ರಿಶೂಲ.
Unique Shiva Temple:ಇಲ್ಲಿ ನಡೆಯುತ್ತದೆ ಮಹಾದೇವನ ತುಂಡಾದ ತ್ರಿಶೂಲ ಪೂಜೆ, ದೇವಸ್ಥಾನದ ಇತರೆ ನಿಗೂಢ ರಹಸ್ಯಗಳ ಮಾಹಿತಿ ಇಲ್ಲಿದೆ title=
Unique Mahadev Temple (File Photo)

ನವದೆಹಲಿ: Sudh Mahadev Temple - ಶಾಸ್ತ್ರಗಳನ್ನು ನಂಬುವುದಾದರೆ, ದೇವಿ ದೇವತೆಗಳ ತುಂಡಾದ ವಿಗ್ರಹಗಳ ಪೂಜೆ ನೇರವೇರಿಸಬಾರದು ಎನ್ನಲಾಗುತ್ತದೆ. ಹೀಗಾಗಿ ತುಂಡಾದ ವಿಗ್ರಹಗಳನ್ನು ನದಿ ನೀರಿನಲ್ಲಿ ಹರಿಬಿಡಲಾಗುತ್ತದೆ. ಆದರೆ ಈ ವಿಷಯದಲ್ಲಿ ತುಂಡಾದ ಶಿವಲಿಂಗ ಒಂದು ಅಪವಾದ ಎಂದೇ ಹೇಳಲಾಗುತ್ತದೆ. ಏಕೆಂದರೆ. ತುಂಡಾದ ಶಿವಲಿಂಗ ಕೂಡ ಅಷ್ಟೇ ಪವಿತ್ರವಾಗಿರುತ್ತದೆ ಎನ್ನಲಾಗುತ್ತದೆ. ಹೀಗಾಗಿ ತುಂಡಾದ ಶಿವಲಿಂಗದ ಪೂಜೆ ನೆರವೇರಿಸಬಹುದಾಗಿದೆ. ಇಂತಹುದೇ ಒಂದು ಪ್ರಸಂಗ ಮಹಾದೇವನ ಒಂದು ದೇವಸ್ಥಾನದಲ್ಲಿ ನೋಡಲು ಸಿಗುತ್ತದೆ. ಈ ದೇವಸ್ಥಾನದಲ್ಲಿ (Shiva Temple) ದೇವಾಧಿದೇವನ ತುಂಡಾದ ತ್ರಿಶೂಲದ ಪೂಜೆ ನೆರವೇರಿಸಲಾಗುತ್ತದೆ. 

ಪಟನಿಟಾಪ್ ನಲ್ಲಿದೆ ಈ ವಿಶಿಷ್ಟ ಶಿವಮಂದಿರ.
ಈ ವಿಶಿಷ್ಟ ಶಿವ ಮಂದಿರ ಜಮ್ಮುವಿನಿಂದ ಸುಮಾರು 120 ಕಿ.ಮೀ ದೂರದ ಪಟನಿಟಾಪ್ (Patni Top) ಹತ್ತಿರದಲ್ಲಿದೆ. ಇದನ್ನು ಸುಧ ಮಹಾದೇವ್ ಮಂದಿರ (Sudh Mahadev Temple)ಎಂದು ಕರೆಯಲಾಗುತ್ತದೆ. ಇದು ದೇಶದ ಅತ್ಯಂತ ಪ್ರಾಚೀನ ಶಿವ ದೇವಸ್ಥಾನಗಳಲ್ಲಿ ಒಂದು (2800 ವರ್ಷಗಳಷ್ಟು ಹಳೆ ಮಂದಿರ). ಸುಧಮಹಾದೇವ ಮಂದಿರ ದೇವಾಧಿದೇವ ಶಿವನ ಅತ್ಯಂತ್ರ ಪ್ರಚಲಿತ ಧಾರ್ಮಿಕ ಸ್ಥಳಗಳಲ್ಲಿ ಒಂದು. ಈ ದೇವಸ್ಥಾನದಲ್ಲಿ ಒಂದು ವಿಶಾಲ ಗಾತ್ರದ ತ್ರಿಶೂಲದ ಮೂರು ಭಾಗಗಳನ್ನು ನೆಲದಲ್ಲಿ ಊರಲಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಇವು ನಿಜವಾದ ಶಿವನ ತ್ರಿಶೂಲದ ಮೂರು ಭಾಗಗಳು ಎನ್ನಲಾಗುತ್ತದೆ. ತ್ರಿಶೂಲವನ್ನು ಹೊರತುಪಡಿಸಿ ಈ ಶಿವ ದೇವಸ್ಥಾನದಲ್ಲಿ ಒಂದು ಶಿವಲಿಂಗ, ನಂದಿ ಹಾಗೂ ಶಿವನ ಕುಟುಂಬದ ಎಲ್ಲಾ ಸದಸ್ಯರ ಮೂರ್ತಿಗಳಿವೆ.

ಇದನ್ನೂ ಓದಿ-Vinayaki Devi Temple: ಶ್ರೀಗಣೇಶನ ಸ್ತ್ರೀ ಅವತಾರ 'ವಿನಾಯಕಿ' ಬಗ್ಗೆ ನಿಮಗೆಷ್ಟು ತಿಳಿದಿದೆ?

ದೇವಸ್ಥಾನಕ್ಕೆ ಸಂಬಂಧಿಸಿದ ಪೌರಾಣಿಕ ಕಥೆ
ಸುಧಮಹಾದೇವ ಮಂದಿರದಿಂದ ಕೆಲ ಕಿ.ಮೀ ದೂರದಲ್ಲಿ ಮಾನತಲಾಯಿ ಹೆಸರಿನ ಪ್ರದೇಶವನ್ನು  ದೇವಿ ಪಾರ್ವತಿಯ ಜನ್ಮಸ್ಥಾನ ಎಂದು ಭಾವಿಸಲಾಗುತ್ತದೆ. ಪೌರಾಣಿಕ ಕಥೆಗಳ ಅನುಸಾರ ಈ ಶಿವನ ದೇವಸ್ಥಾನಕ್ಕೆ ಒಮ್ಮೆ ದೇವಿ ಪಾರ್ವತಿ (Goddess Parvati) ಶಿವನ ಪೂಜೆಗೆ ಆಗಮಿಸುತ್ತಾಳೆ. ಆದರೆ, ಈ ವೇಳೆ ಸುಧಾಂತ ಹೆಸರಿನ ರಾಕ್ಷೆಸ ದೇವಿ ಪಾರ್ವತಿಯನ್ನು ಹಿಂಬಾಲಿಸಿ ಅಲ್ಲಿಗೆ ಬರುತ್ತಾನೆ. ಆತನು ಕೂಡ ಪ್ರಚಂಡ ಶಿವಭಕ್ತನಾಗಿರುತ್ತಾನೆ ಮತ್ತು ಆತ ಕೂಡ ಶಿವನ ಪೂಜೆಗೆ ಅಲ್ಲಿಗೆ ಬಂದಿರುತ್ತಾನೆ. ಪೂಜೆ ಮುಗಿದ ಬಳಿಕ ದೇವಿ ಪಾರ್ವತಿ ಕಣ್ಣು ತೆರೆದಾಗ ಆ ರಾಕ್ಷೆಸನನ್ನು ನೋಡಿ ಕಿರುಚಿಕೊಳ್ಳುತ್ತಾಳೆ. ಈ ವೇಳೆ ದೇವಿ ಪಾರ್ವತಿ ಅಪಾಯದಲ್ಲಿದ್ದಾಳೆ ಎಂದು ಭಾವಿಸುವ ಶಿವ ತನ್ನ ತ್ರಿಶೂಲ ಎಸೆದು ರಾಕ್ಷೆಸನನ್ನು ಸಂಹರಿಸುತ್ತಾನೆ. ಆದರೆ, ಶಿವನಿಗೆ ತಾನು ಮಾಡಿರುವ ತಪ್ಪಿನ ಅರಿವಾಗಲು ಹೆಚ್ಚು ಕಾಲ ಬೇಕಾಗುವುದಿಲ್ಲ ಹಾಗೂ ಅವನು ಸುಧಾಂತುವಿಗೆ ಜೀವನದಾನ ಮಾಡುವ ಮಾತನ್ನು ಆಡುತ್ತಾನೆ. ಆದರೆ, ಈ ವೇಳೆ ಸುಧಾತ ರಾಕ್ಷೆಸ ತಾನು ತನ್ನ ಇಷ್ಟದೇವನ ಕೈಯಾರೆ ಸಾವನ್ನಪ್ಪಿ ಮೋಕ್ಷ ಪ್ರಾಪ್ತಿ ಮಾಡಲು ಬಯಸುತ್ತಿರುವುದಾಗಿ ಹೇಳುತ್ತಾನೆ.  ಈ ವೇಳೆ ಪ್ರಸನ್ನಗೊಂಡ ಶಿವ ಆ ದೇವಸ್ಥಾನದ ಹೆಸರನ್ನು ಶಿವನ ಹೆಸರಿನಲ್ಲಿಯೇ ಕರೆಯುವ ಮಾತನ್ನು ಹೇಳುತ್ತಾರೆ.

ಇದನ್ನೂ ಓದಿ-Gudi Padwa 2021: ಇಲ್ಲಿದೆ ಶುಭ ಮುಹೂರ್ತ ಹಾಗೂ ಪೂಜಾ ವಿಧಿ-ವಿಧಾನ

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಸೂಚನೆಗಳು ಸಾಮಾನ್ಯ ಮಾಹಿತಿ ಹಾಗೂ ಜನಮಾನಸದ ನಂಬಿಕೆಗಳನ್ನು ಆಧರಿಸಿವೆ Zee Hindustan Kannada ಈ ಮಾಹಿತಿಯನ್ನು ಪುಷ್ಟೀಕರಿಸುವುದಿಲ್ಲ)

ಇದನ್ನೂ ಓದಿ -Hanuman Temple: ಶ್ರೀ ಆಂಜನೇಯನನ್ನು ಸ್ತ್ರೀ ರೂಪದಲ್ಲಿ ಆರಾಧಿಸಲಾಗುವ ಈ ದೇವಸ್ಥಾನದ ಬಗ್ಗೆ ನಿಮಗೆ ತಿಳಿದಿದೆಯಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News