ನವದೆಹಲಿ: ಕನಸು ಕಾಣುವುದು ಸಾಮಾನ್ಯ ಪ್ರಕ್ರಿಯೆ. ಮನೋವೈದ್ಯರ ಪ್ರಕಾರ ಕನಸು(Dream Interpretation) ಬುದ್ಧಿಯನ್ನು ಚುರುಕುಗೊಳಿಸುತ್ತದೆ. ಕನಸುಗಳು ವ್ಯಕ್ತಿಯ ಮಾನಸಿಕ ಆಯಾಸವನ್ನು ಹೋಗಲಾಡಿಸುತ್ತದೆ ಎಂದು ವೈದ್ಯಕೀಯ ವಿಜ್ಞಾನವು ನಂಬುತ್ತದೆ. ಮತ್ತೊಂದೆಡೆ ಕನಸಿನ ಗ್ರಂಥಗಳ ಪ್ರಕಾರ, ಕನಸುಗಳು ಭವಿಷ್ಯದಲ್ಲಿ ಸಂಭವಿಸುವ ಒಳ್ಳೆಯ ಅಥವಾ ಕೆಟ್ಟ ಘಟನೆಗಳನ್ನು ಸೂಚಿಸುತ್ತವೆ. ಕನಸಿನಲ್ಲಿ ಪೂರ್ವಜರನ್ನು ನೋಡುವುದು ಸಹ ವಿಶೇಷ ಸೂಚನೆಯನ್ನು ನೀಡುತ್ತದೆ. ಇದರ ಬಗ್ಗೆ ತಿಳಿಯಿರಿ.


COMMERCIAL BREAK
SCROLL TO CONTINUE READING

ಗರುಡ ಪುರಾಣ ಏನು ಹೇಳುತ್ತದೆ?


ಸ್ವಪ್ನ ಗ್ರಂಥದ(Dream Astrology) ಪ್ರಕಾರ ಪೂರ್ವಜರು ಕನಸಿನಲ್ಲಿ ಬರುವುದು ಶುಭ. ಇದು ಕೆಲವು ಪ್ರಮುಖ ಕೆಲಸಗಳಲ್ಲಿ ಯಶಸ್ವಿಯಾಗಲಿದೆ ಎಂದು ಸೂಚಿಸುತ್ತದೆ. ಆಗಾಗ ಅನೇಕರಿಗೆ ತಮ್ಮ ಪೂರ್ವಜರು ಅವರಿಂದ ಏನನ್ನಾದರೂ ಕೇಳುತ್ತಿದ್ದಾರೆಯೇ ಎಂಬುದನ್ನು ತಮ್ಮ ಕನಸಿನಲ್ಲಿ ಕಾಣುತ್ತಾರಂತೆ. ಪೂರ್ವಜರು ಕೇಳಿದ ವಸ್ತುವನ್ನು ಗೌರವದಿಂದ ದಾನ ಮಾಡಬೇಕು ಎಂಬುದನ್ನು ಇದು ಸೂಚಿಸುತ್ತದೆ. ಗರುಡ ಪುರಾಣ(Garud Purana)ದ ಪ್ರಕಾರ ಕನಸಿನಲ್ಲಿ ಪೂರ್ವಜರ ಉಪಸ್ಥಿತಿಯು ಅವರ ಆತ್ಮಗಳು ಅಲೆದಾಡುತ್ತಿವೆ ಎಂದರ್ಥ. ಇಂತಹ ಸಂದರ್ಭದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮನೆಯಲ್ಲಿ ಪೂಜೆ ಸಲ್ಲಿಸಬೇಕು.


ಇದನ್ನೂ ಓದಿSurya Gochar: ಮೂರು ದಿನಗಳ ಬಳಿಕ ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಭವಿಷ್ಯ


ಕನಸಿನಲ್ಲಿ ತಂದೆಯ ನಗು ಕಂಡರೆ


ಕನಸಿನಲ್ಲಿ ಪೂರ್ವಜರು ನಗುತ್ತಿರುವುದನ್ನು ಕಂಡರೆ(Pitru Darshan In Dreams) ಅದು ಶುಭ ಸಂಕೇತವನ್ನು ನೀಡುತ್ತದೆ. ಪೂರ್ವಜರು ವಿಶೇಷವಾದ ಆಶೀರ್ವಾದವನ್ನು ನೀಡುತ್ತಾರೆ ಎಂದು ನಂಬಲಾಗಿದೆ. ಇದರೊಂದಿಗೆ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಭವಿಷ್ಯದಲ್ಲಿ ಹೆಚ್ಚಾಗುತ್ತದೆ. ಇದಲ್ಲದೆ ಇಂತಹ ಕನಸು ಮುಂಬರುವ ಸಮಯದಲ್ಲಿ ಕೆಲವು ದೊಡ್ಡ ಗುರಿಯ ಸಾಧನೆಯನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.


ಕನಸಿನಲ್ಲಿ ಕೋಪಗೊಂಡ ತಂದೆಯ ಕಂಡರೆ  


ಕನಸಿನಲ್ಲಿ ಕೋಪಗೊಂಡ ಪೂರ್ವಜರನ್ನು ನೋಡುವುದು(Pitru Darshan) ಅಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂತಹ ಕನಸು ತಂದೆ ಸಂತೋಷವಾಗಿಲ್ಲ ಎಂಬುದನ್ನು ಸೂಚಿಸುತ್ತದಂತೆ. ಆದಾಗ್ಯೂ ಪಿತೃ ದೋಷದಿಂದ ಬಳಲುತ್ತಿರುವ ಜನರು ಇಂತಹ ಕನಸುಗಳನ್ನು ಕಾಣುತ್ತಾರೆ. ಈ ಕನಸು ತಂದೆಯ ಆಸೆ ಈಡೇರಿಲ್ಲವೆಂಬುದನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.


ಇದನ್ನೂ ಓದಿ: Numerology: ಶನಿಯೊಂದಿಗೆ ನೇರ ಸಂಬಂಧವನ್ನು ಹೊಂದಿದ್ದಾರೆ ಈ ದಿನಾಂಕಗಳಲ್ಲಿ ಜನಿಸಿದ ಜನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.