Dream Meaning For Money: ಮಲಗಿದ್ದಾಗ ನಾವು ಕಾಣುವ ಕನಸುಗಳಿಗೆ ಒಂದಿಲ್ಲ ಒಂದು ಅರ್ಥವಿರುತ್ತದೆ ಎಂದು ಜೋತಿಷ್ಯಶಾಸ್ತ್ರ ಹೇಳುತ್ತದೆ. ಸ್ವಪ್ನಶಾಸ್ತ್ರದ ಪ್ರಕಾರ, ಕೆಲವು ಕನಸುಗಳು ಭವಿಷ್ಯದ ಘಟನೆಗಳ ಕುರಿತು ವ್ಯಕ್ತಿಗೆ ಸಂಕೇತಗಳನ್ನು ನೀಡುತ್ತವೆ ಎನ್ನಲಾಗುತ್ತದೆ. ಹಲವು ಬಾರಿ ವ್ಯಕ್ತಿಯು ತಾನು ಕಂಡ ಕನಸಿನ ಅರ್ಥವೇನು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಇಡೀ ದಿನವನ್ನೇ ಕಳೆಯುತ್ತಾನೆ. ಇದೇ ರೀತಿ ಸ್ವಪ್ನಶಾಸ್ತ್ರದ ಪ್ರಕಾರ, ಭವಿಷ್ಯದಲ್ಲಿ ವ್ಯಕ್ತಿಯ ಜೀವನದಲ್ಲಿ ತಾಯಿ ಲಕ್ಷ್ಮಿಯ ಆಗಮನವನ್ನು ಸೂಚಿಸುವ ಕನಸುಗಳು ಕೂಡ ಇವೆ. ಆ ಕನಸುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಹಲ್ಲು ಮುರಿಯುವುದು ಮತ್ತು ಮಕ್ಕಳ ನಗುವುದು- ಸ್ವಪ್ನಶಾಸ್ತ್ರದ ಪ್ರಕಾರ, ಚಿಕ್ಕ ಮಕ್ಕಳು ಕನಸಿನಲ್ಲಿ ನಗುವುದು ಅಥವಾ ನಡೆಯುವುದು ಕಂಡುಬಂದರೆ, ಅದನ್ನು ಒಳ್ಳೆಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಗೆ ತಾಯಿ ಲಕ್ಷ್ಮಿಯ ಆಗಮನವಾಗಲಿದೆ ಎಂಬುದನ್ನು ಸೂಚಿಸುತ್ತದೆ ಎನ್ನಲಾಗಿದೆ. ಕನಸಿನಲ್ಲಿ ಹಲ್ಲು ಮುರಿಯುವುದು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿ ತನ್ನ ವೃತ್ತಿಜೀವನದಲ್ಲಿ ಶೀಘ್ರದಲ್ಲಿಯೇ ಪ್ರಗತಿಹೊಂದಲಿದ್ದಾನೆ ಎಂಬುದನ್ನು ಸೂಚಿಸುತ್ತದೆ. 


ಹಲ್ಲುಜ್ಜುವುದು- ಕನಸಿನಲ್ಲಿ ಹಲ್ಲುಗಳನ್ನು ಶುಚಿಗೊಳಿಸುವುದನ್ನು ನೋಡುವುದು ಸಹ ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪ್ರಯಾಣದಿಂದ ಧನಲಾಭವಾಗಲಿದೆ ಎಂಬುದನ್ನು ಈ ಕನಸು ಸೂಚಿಸುತ್ತದೆ. ಕನಸಿನಲ್ಲಿ ಯಾವುದೇ ರೀತಿಯ ರಕ್ತಪಾತವನ್ನು ನೋಡಲು ಹಿಂಜರಿಯದಿರಿ, ಏಕೆಂದರೆ ಇದನ್ನು ಕನಸಿನಲ್ಲಿ ನೋಡುವುದು ಒಳ್ಳೆಯ ಸಂಕೇತವಾಗಿದೆ. ಈ ಕನಸು ಎಂದರೆ ನೀವು ಬಹಳಷ್ಟು ಹಣವನ್ನು ಪಡೆಯಲಿರುವಿರಿ ಎಂಬುದರ ಸೂಚಕವಾಗಿದೆ.


ಬಟ್ಟೆ ಹೊಲಿಯುವುದನ್ನು ನೋಡುವುದು- ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಹೊಲಿದ ಬಟ್ಟೆ ಅಥವಾ ಹೊಲಿಗೆ ಹಾಕುತ್ತಿರುವುದನ್ನು ನೋಡಿದರೆ, ಅದು ಸಂಪತ್ತಿನ ಹೆಚ್ಚಳದ ಸಂಕೇತ ಎಂದು ಪರಿಗಣಿಸಲಾಗಿದೆ. ಕೆಲಸ ಹುಡುಕುವುದು, ಏನನ್ನಾದರೂ ಕಸಿದುಕೊಳ್ಳುವುದು ಅಥವಾ ಒಂದೇ ಏಟಿಗೆ ಓಡಿಹೋಗುವುದು ಕೂಡ ಶುಭ ಶುಭ ಸಂಕೇತಗಳಲ್ಲಿ ಶಾಮೀಲಾಗಿವೆ. ನೀವು ಉತ್ತಮ ಹಣವನ್ನು ಪಡೆಯಲಿರುವಿರಿ ಎಂಬುದೇ ಇವುಗಳ ಅರ್ಥ.


ಇದನ್ನೂ ಓದಿ-ಈ ರಾಶಿಯವರು ತಮ್ಮ ಪರಿಶ್ರಮದಿಂದ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ


ಕನಸಿನಲ್ಲಿ ಎತ್ತರವನ್ನು ಹತ್ತುವುದು ಅಥವಾ ದೇವಸ್ಥಾನಕ್ಕೆ ಭೇಟಿ ನೀಡುವುದು ಸಹ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರರ್ಥ ನೀವು ಅದ್ಭುತ ಯಶಸ್ಸನ್ನು ಸಾಧಿಸಲಿರುವಿರಿ ಎಂದರ್ಥ. ಇದೇ ವೇಳೆ ಕನಸಿನಲ್ಲಿ ಬಿಳಿ ಹಾವು ಕಚ್ಚುವುದು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-Surya Gochar 2022: ಇಂದಿನಿಂದ ‘ಸೂರ್ಯ’ ಈ ಜನರಿಗೆ ಹಣ ನೀಡಲಿದ್ದಾನೆ, ಅದೃಷ್ಟವೇ ಬದಲಾಗಲಿದೆ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.